ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ರಾಯಚೂರು

ಹಿಂದೂ ವಲಸಿಗರ ವಿವಿಧ ಸೌಲಭ್ಯಕ್ಕೆ ಆಗ್ರಹ: ಪ್ರತಿಭಟನೆ

Lingaraj Badiger
Updated On : 7 Jan 2014, 12:11 pm

ಕ.ಪ್ರ. ವಾರ್ತೆ, ರಾಯಚೂರು, ಜ.6
ಭಾರತಕ್ಕೆ ವಲಸೆ ಬಂದ ಎಲ್ಲ ಹಿಂದೂ ಶರಣಾರ್ಥಿಗಳಿಗೆ ದೇಶದ ಪೌರತ್ವ ನೀಡಬೇಕೆಂಬುದು ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ನಗರದಲ್ಲಿ ಸೋಮವಾರ ಹಿಂದೂ ಜನಜಾಗೃತಿ ಸಮಿತಿ ಕಾರ್ಯಕರ್ತರು ಪ್ರತಿಭಟನೆ ನಡೆಸಿದರು.
ನಗರದ ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನೆ ನಡೆಸಿ ಜಿಲ್ಲಾಡಳಿತಕ್ಕೆ ಮನವಿ ಸಲ್ಲಿಸಿ, ಪಾಕಿಸ್ತಾನದಿಂದ ದೇಶಕ್ಕೆ ವಲಸೆ ಬರುವ ಎಲ್ಲ ಹಿಂದೂಗಳಿಗೆ ದೇಶದ ಪೌರತ್ವ ನೀಡಬೇಕು. ನಿರಾಶ್ರಿತ ಹಿಂದೂಗಳ ಮಕ್ಕಳಿಗೆ ಶೈಕ್ಷಣಿಕ ಸೌಲಭ್ಯ ಕಲ್ಪಿಸಿ, ಉದ್ಯೋಗದಲ್ಲಿ ಮೀಸಲಾತಿ, ವಸತಿ ವ್ಯವಸ್ಥೆ ಕಲ್ಪಿಸಬೇಕೆಂದು ಒತ್ತಾಯಿಸಿದರು.
ಮರಳಿ ಪಾಕಿಸ್ತಾನಕ್ಕೆ ಹಟ್ಟದಿರಿ: ಕೇಂದ್ರ ಸರ್ಕಾರವು ನಿರಾಶ್ರಿತರ ಬಗ್ಗೆ ಎಲ್ಲ ಅಂತಾರಾಷ್ಟ್ರೀಯ ಒಪ್ಪಂದಗಳಲ್ಲಿ ಪಾಲ್ಗೊಳ್ಳಬೇಕು. ಅದರಿಂದ ಹಿಂದೂಗಳಿಗೆ ನ್ಯಾಯ ದೊರಕಿಸಿಕೊಡುವ ಕಾರ್ಯ ಮಾಡಬೇಕು. ಯಾವುದೇ ಹಿಂದೂ ಶರಣಾರ್ಥಿಗೆ ವೀಸಾ ಮುಗಿದ ನಂತರ ಅಥವಾ ಇತರೆ ಕಾರಣಕ್ಕೆ ದೇಶದಿಂದ ಮರಳಿ ಪಾಕಿಸ್ತಾನಕ್ಕೆ ಒತ್ತಾಯಪೂರ್ವಕವಾಗಿ ಕಳಿಸದಂತೆ ಆಗ್ರಹಿಸಿದರು.
ಮುನ್ನೆಚ್ಚರಿಕೆಗೆ ಒತ್ತಾಯ: ಕಳೆದ 10 ವರ್ಷಗಳಿಂದ ಸಮಿತಿಯು ರಾಷ್ಟ್ರೀಯ ಹಬ್ಬಗಳ ಸಂದರ್ಭ ರಾಷ್ಟ್ರಧ್ವಜಕ್ಕೆ ಅಪಮಾನವಾಗದಂತೆ ಮುನ್ನೆಚ್ಚರಿಕೆ ವಹಿಸಲು ಸರ್ಕಾರವನ್ನು ಒತ್ತಾಯಿಸುತ್ತಿದೆ. ಹಾಗೆಯೇ ಸಮಿತಿಯು ಜನಜಾಗೃತಿ ಕಾರ್ಯಕ್ರಮಗಳನ್ನು ಆಯೋಜಿಸುತ್ತಿದೆ. ಆದರೆ ಸರ್ಕಾರದಿಂದ ಮಾತ್ರ ಈ ನಿಟ್ಟಿನಲ್ಲಿ ಯಾವುದೇ ಕ್ರಮ ಜರುಗಿಲ್ಲ ಎಂದು ಆರೋಪಿಸಿದರು.
ಜ.26ರಂದು ನಡೆಯುವ ಗಣರಾಜ್ಯೋತ್ಸವದ ಸಂದರ್ಭದಲ್ಲಿಯಾದರೂ ಸರ್ಕಾರ ರಾಷ್ಟ್ರಧ್ವಜಕ್ಕೆ ಅಪಮಾನವಾಗದಂತೆ ಎಚ್ಚರಿಕೆ ವಹಿಸಬೇಕಿದೆ. ದೇಶದ ರಾಜಕೀಯ ನಾಯಕರಿಗೆ ರಾಷ್ಟ್ರಧ್ವಜ ಮಹತ್ವ ತಿಳಿಸಿಕೊಡುವಂಥ ದೌರ್ಭಾಗ್ಯದ ಸ್ಥಿತಿ ನಿರ್ಮಾಣವಾಗಿದೆ ಎಂದು ದೂರಿದರು. ಈ ನಿಟ್ಟಿನಲ್ಲಿ ಕೂಡಲೇ ಸರ್ಕಾರಗಳು ಪ್ಲಾಸ್ಟಿಕ್‌ನಲ್ಲಿ ರಾಷ್ಟ್ರಧ್ವಜವನ್ನು ಮುದ್ರಿಸುವುದು ಮತ್ತು ಮಾರಾಟ ತಡೆಗೆ ಕಠಿಣ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿದರು. ಸಮಿತಿಯ ಪ್ರಮುಖರಾದ ವಾಸಂತಿ, ಸುವರ್ಣ, ಸುನಂದಾ, ವಿಜಯಲಕ್ಷ್ಮಿ, ಸರಳಾ, ಜಯಾಪಾಟೀಲ್ ಮತ್ತಿತರರಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement