ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ರಾಯಚೂರು

10ರಂದು ಮಸ್ಕಿ ಬಂದ್‌ಗೆ ಕರೆ

Lingaraj Badiger
Updated On : 8 Jan 2014, 12:04 pm

ಮಸ್ಕಿ: ಮಸ್ಕಿಗೆ ಸಂಪರ್ಕ ಕಲ್ಪಿಸುವ ರಸ್ತೆಗಳ ದುರಸ್ತಿಗಾಗಿ ಮಸ್ಕಿಯ ನಾಗರಿಕ ಹೋರಾಟ ಸಮಿತಿಯಿಂದ ಜ.10ರಂದು ಬಂದ್ ನಡೆಸಲು ಉದ್ದೇಶಿಸಲಾಗಿದೆ. ರಸ್ತೆಗಳ ತ್ವರಿತ ದುರಸ್ತಿಗೆ ಈ ರೀತಿಯ ಹೋರಾಟಕ್ಕೆ ಮುಂದಾಗಿದ್ದು, ಹೋರಾಟ ಯಾರ ವಿರುದ್ಧವೂ ಅಲ್ಲ ಎಂದು ಸಮಿತಿಯ ಅಧ್ಯಕ್ಷ ಹಾಗೂ ಜಿಪಂ ಸದಸ್ಯ ಮಹದೇವಪ್ಪಗೌಡ ಹೇಳಿದರು.
ಪಟ್ಟಣದಲ್ಲಿ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಸಮಿತಿಯಿಂದ ಜ.10ರಂದು ಮಸ್ಕಿ ಬಂದ್ ಕರೆ ನೀಡಲಾಗಿದೆ. ಸಾಂಕೇತಿಕವಾಗಿ ರಸ್ತೆ ತಡೆ ಚಳವಳಿ ಆಯೋಜಿಸಿದ್ದು, ಕಾಂಗ್ರೆಸ್ ಮುಖಂಡರಿಗೆ ಶಾಸಕ ಪ್ರತಾಪಗೌಡ ಪಾಟೀಲ್ ಅವರು ಹೋರಾಟದಲ್ಲಿ ಭಾಗವಹಿಸದಂತೆ ಸೂಚಿಸಿದ್ದಾರೆಂದು ಗೊತ್ತಾಗಿದೆ. ಸಾರ್ವಜನಿಕರ ಹಿತಾಸಕ್ತಿಗಾಗಿ ನಡೆಸುತ್ತಿರುವ ಹೋರಾಟ ಇದಾಗಿದ್ದು, ಇದರ ಹಿಂದೆ ಯಾವುದೇ ದುರುದ್ದೇಶವಿಲ್ಲ ಎಂದರು.
ಹಗದೆಟ್ಟ ರಸ್ತೆಗಳು: ಮಸ್ಕಿ ಪಟ್ಟಣಕ್ಕೆ ಸಂಪರ್ಕ ಕಲ್ಪಿಸುವ ಎಲ್ಲ ರಸ್ತೆಗಳು ಸಂಪೂರ್ಣ ಹದಗೆಟ್ಟಿರುವುದರಿಂದ ಸಾರ್ವಜನಿಕರು ತೊಂದರೆಗೆ ಸಿಲುಕಿದ್ದಾರೆ. ತಾತ್ಕಾಲಿಕ ರಸ್ತೆ ದುರಸ್ತಿಯ ಕಾರ್ಯ ತ್ವರಿತವಾಗಿ ನಡೆಯಲಿ ಎಂಬುದು ಸಮಿತಿಯ ಉದ್ದೇಶ. ಸಮಿತಿಯ ಎಲ್ಲ ಸದಸ್ಯರನ್ನು ಪಕ್ಷಭೇದ ಮರೆತು ವಿಶ್ವಾಸಕ್ಕೆ ತೆಗೆದುಕೊಂಡು ಜ.10ರಂದು ಮಸ್ಕಿ ಬಂದ್‌ಗೆ ಕರೆ ನೀಡಲಾಗಿದೆ ಎಂದ ಅವರು ಸಾರ್ವಜನಿಕರಿಂದ ಸಮಿತಿಯ ಕಾರ್ಯಕ್ಕೆ ಬೆಂಬಲ ವ್ಯಕ್ತವಾಗಿದೆ ಎಂದೂ ಹೇಳಿದರು. ಈ ವೇಳೆ ಸಮಿತಿಯ ಮುಖಂಡ ತಿಮ್ಮನಗೌಡ ಗುಡದೂರು, ಬಸಣ್ಣ ತೊಂತನಾಳ ಇದ್ದರು.
ಬಂದ್‌ಗೆ ಬಿಜೆಪಿ ಬೆಂಬಲ: ನಾಗರಿಕ ಹೋರಾಟ ಸಮಿತಿ ಕರೆ ನೀಡಿರುವ ಮಸ್ಕಿ ಬಂದ್‌ಗೆ ಬಿಜೆಪಿ ಬೆಂಬಲಿಸಿದೆ. ಈ ಕುರಿತು ಬಿಜೆಪಿ ಮಸ್ಕಿ ಕ್ಷೇತ್ರದ ಅಧ್ಯಕ್ಷ ಸಂಗಮೇಶ್ ಹತ್ತಿಗುಡ್ಡ ಮತ್ತಿತರರು ಪ್ರಕಟಣೆ ನೀಡಿ, ನಾಗರಿಕ ಹಿತರಕ್ಷಣಾ ಹೋರಾಟ ಸಮಿತಿಯಿಂದ ಜ. 10ರಂದು ನಡೆಯಲಿರುವ ಮಸ್ಕಿ ಬಂದ್ ಹಾಗೂ ರಸ್ತಾ ರೋಕೋ ಹೋರಾಟಕ್ಕೆ ಬೆಂಬಲಿಸುವುದಾಗಿ ತಿಳಿಸಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement