ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ರಾಯಚೂರು

ಕಳಪೆ ಬಿತ್ತನೆ ಬೀಜ: ಕೃವಿವಿ ವಿಜ್ಞಾನಿಗಳಿಂದ ಪರಿಶೀಲನೆ

Lingaraj Badiger
Updated On : 8 Jan 2014, 12:04 pm

ಸಿಂಧನೂರು: ನಗರದ ಸುಕಾಲಪೇಟೆ ಸೇರಿದಂತೆ ಗೋಮರ್ಸಿ, ಉದ್ಬಾಳ ಮತ್ತಿತರ ಕೆಳಭಾಗದ ರೈತರು ವಿಶಾಲ ಸೀಡ್ಸ್ ಕಂಪನಿಯ ವಿಜೆಎಸ್- 234 ಜೋಳದ ಬಿತ್ತದ ಬೀಜ ಕಳಪೆಯಾಗಿದ್ದು ತಮಗೆ ಹಾನಿಯಾಗಿದೆ ಎಂದು ಆರೋಪಿಸಿದ ಹಿನ್ನೆಲೆಯಲ್ಲಿ ರಾಯಚೂರು ಕೃಷಿ ವಿಶ್ವವಿದ್ಯಾಲಯದ ವಿಜ್ಞಾನಿಗಳು ವಿವಿಧ ಹೊಲಗಳಿಗೆ ಭೇಟಿ ನೀಡಿ ಪರಿಶೀಲಿಸಿದರು.
ಸಂದ್ಯಾ ಏಜೆನ್ಸಿ, ರಾಮಕೃಷ್ಣ ಸೀಡ್ಸ್ ಮತ್ತಿತರ ವ್ಯಾಪಾರಿಗಳಲ್ಲಿ ಬೀಜ ಖರೀದಿಸಿ ಬಿತ್ತನೆ ಮಾಡಿರುವುದಾಗಿ ರೈತರು ಕೃಷಿ ವಿಜ್ಞಾನಿಗಳಿಗೆ ತಿಳಿಸಿದರು. ಕಳೆದ 15 ವರ್ಷಗಳಿಂದ ಇದೇ ಬೀಜವನ್ನು ಹಾಕುತ್ತಿದ್ದು ಉತ್ತಮ ಇಳುವರಿ ಬರುತ್ತಿತ್ತು. ಆದರೆ ಈ ಬಾರಿ ತಮಗೆ ಕಂಪನಿ ಬೀಜಗಳಿಂದ ಹಾನಿಯಾಗಿದೆ ಎಂದು ರೈತರಾದ ಯಂಕಪ್ಪ ಬಡಗಿ, ಏಳುಕುರಿ ಮಲ್ಲಪ್ಪ, ಪಕೀರಪ್ಪ ಮತ್ತಿತರರು ವಿಜ್ಞಾನಿಗಳಿಗೆ ವಿವರಿಸಿದರು.
ವರದಿ ನೀಡುವ ಭರವಸೆ: ಪರಿಶೀಲನೆ ನಡೆಸಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಕೃಷಿ ವಿಜ್ಞಾನಿಗಳು ಭೂಮಿ, ವಾತಾವರಣ, ಬೀಜದ ಹಿನ್ನೆಲೆ, ಪ್ರಮಾಣ ಪತ್ರದ ವಿಧಾನ ಹಲವು ಅಂಶಗಳನ್ನು ಪರಿಗಣಿಸಿ ವರದಿ ನೀಡುವುದಾಗಿ ಭರವಸೆ ನೀಡಿದರು.
ಲಿಂಗಸ್ಗೂರು ಕೃಷಿ ವಿಸ್ತರಣಾ ಕೇಂದ್ರದ ಮುಖ್ಯಸ್ಥ ಎಸ್.ಎನ್. ಉಪ್ಪೇರಿ, ಕೃಷಿ ವಿಜ್ಞಾನಿಗಳಾದ ಗಿರೀಶ, ರಾಮರಾವ್ ಕುಲಕರ್ಣಿ, ಎಸ್.ಬಿ. ಗೌಡರ, ಸುಶಯ ಹುರಳಿ, ಸಹಾಯಕ ಕೃಷಿ ನಿರ್ದೇಶಕ ಜಯಪ್ರಕಾಶ, ರೈತ ಮುಖಂಡರಾದ ಮಾಡಗಿರಿ ದೊಡ್ಡಮಲ್ಲಪ್ಪ, ಲಿಂಗಪ್ಪ ಹಂಚಿನಾಳ ಮತ್ತಿತರರು ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement