ಗಜದಂಡ ಶ್ರೀಗಳ ಶ್ರೀಶೈಲ ಪಾದಯಾತ್ರೆ
ಲಿಂಗಸ್ಗೂರು: ತಾಲೂಕಿನ ದೇವಭೂಪೂರ ತೋಪಿನಕಟ್ಟಿ ಬೃಹನ್ಮಠದ, ಅಮರೇಶ್ವರ ಅಭಿನವ ಗುರುಗಜದಂಡ ಶ್ರೀಗಳು ಶ್ರೀಶೈಲಕ್ಕೆ ಪಾದಯಾತ್ರೆ ಕೈಗೊಂಡಿದ್ದು, ಶ್ರೀಗಳ ಜೊತೆ ಮಹಿಳೆಯರೂ ಸೇರಿದಂತೆ ನೂರಾರು ಜನ ಭಕ್ತರು ಪಾದಯಾತ್ರೆಗೆ ಸಾಥ್ ನೀಡಿದರು. ಅಮರೇಶ್ವರ ದೇವರಿಗೆ ಗಜದಂಡ ಶ್ರೀಗಳು ಬೆಳಗ್ಗೆ ರುದ್ರಾಭಿಷೇಕ ನೆರವೇರಿಸಿದ ನಂತರ ಡೊಳ್ಳು, ಭಾಜಾ ಭಜಂತ್ರಿಗಳ ಸಮೇತ ಪಾದಯಾತ್ರೆ ಕೈಗೊಂಡರು. ದೇವರಭೂಪುರ ಗ್ರಾಮದಲ್ಲಿ ಲಿಂ. ಗಜದಂಡ ಶಿವಾಚಾರ್ಯರು ಕತೃ ಗದ್ದುಗೆಗೆ ಪೂಜೆ ಸಲ್ಲಿಸಿದರು. ನಂತರ ಪಾದಯಾತ್ರೆ ಕೈಗೊಂಡರು. ಈ ವೇಳೆ ಮಾಜಿ ಸಚಿವ ಅಮರೇಶ್ವರ ನಾಯಕ, ಗುರುಗುಂಟಾ ಗ್ರಾಮದ ಗಜೇಂದ್ರ ನಾಯಕ, ಜೆ.ಎಸ್. ನಾಯಕ, ಜಿ.ಕೆ. ಕೃಷ್ಣಮೂರ್ತಿ, ಗುಂಡಣ್ಣ ಅರಳಿ, ಅಮರೇಶಪ್ಪ ಪಟ್ಟಣಶೆಟ್ಟಿ, ಮನೋಹರ ಪತ್ತಾರ, ಮಂಜುನಾಥ ಹೂಗಾರ, ಅರ್ಚಕರಾದ ತ್ರಿಪುರಾಂತಯ್ಯಸ್ವಾಮಿ, ಆದಯ್ಯಸ್ವಾಮಿ ಕಳಸದಗುಡಿ ಸೇರಿದಂತೆ ಶ್ರೀಗಳ ದರ್ಶನ ಪಡೆದು ಪಾದಯಾತ್ರೆಗೆ ಶುಭ ಹಾರೈಸಿದರು.