ತೈಲ ಬೆಲೆ ಏರಿಕೆಗೆ ಖಂಡನೆ
ಕ.ಪ್ರ. ವಾರ್ತೆ, ಮಸ್ಕಿ, ಜ.7
ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ತೈಲೋತ್ಪನ್ನ ಮತ್ತು ಅಗತ್ಯ ವಸ್ತುಗಳ ಬೆಲೆ ಏರಿಕೆ ಮಾಡುವುದನ್ನು ಖಂಡಿಸಿ ಪಟ್ಟಣದಲ್ಲಿ ಮಂಗಳವಾರ ಜಯ ಕರ್ನಾಟಕ ಸಂಘಟನೆ ಮತ್ತು ಆಟೋ ಚಾಲಕ ಸಂಘದ ಕಾರ್ಯಕರ್ತರು ಪ್ರತಿಭಟನೆ ನಡೆಸಿದರು.
ಪಟ್ಟಣದ ಹಳೆಬಸ್ ನಿಲ್ದಾಣದಿಂದ ವಿಶೇಷ ತಹಸೀಲ್ದಾರ್ ಕಾರ್ಯಾಲಯದವರೆಗೆ ಪ್ರತಿಭಟನಾ ರ್ಯಾಲಿ ನಡೆಸಿ ಮನವಿ ಸಲ್ಲಿಸಿ, ಬೆಲೆಯೇರಿಕೆಯಿಂದಾಗಿ ಬಡ ಮತ್ತು ಮಧ್ಯಮ ವರ್ಗದ ಜನರಿಗೆ ಗಾಯದ ಮೇಲೆ ಮತ್ತೆ ಮತ್ತೆ ಬರೆ ಎಳೆದಂತಾಗುತ್ತಿದೆ ಎಂದು ದೂರಿದರು.
ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಬೆಲೆಯೇರಿಕೆಗೆ ಕೂಡಲೇ ತಡೆ ಹಾಕಬೇಕು. ಆ ಮೂಲಕ ಜನಪರ ಕ್ರಮ ಜರುಗಿಸುವಂತೆ ಒತ್ತಾಯಿಸಿದರು. ಸಂಘಟನೆಯ ಅಧ್ಯಕ್ಷ ಯಮನೂರ ಒಡೆಯರ್, ಗಂಗಾಧರ ಮುರಾರಿ, ಕಿರಣ ವಿ.ಮುರಾರಿ, ಮಲ್ಲಪ್ಪ ಸಾನಬಾಳ, ಸಿದ್ದು ಮುರಾರಿ, ರಾಮು, ವೀರೇಶ, ಮೌನೇಶ ಆಟೋ, ಹಸಮಕಲ್, ಶ್ರೀನಿವಾಸ ಆಟೋ, ಖಲೀಲ್, ಮಂಜು ನಾಯಕ, ಮಹಾಂತಯ್ಯ ಸ್ವಾಮಿ, ದುರುಗಪ್ಪ, ಚಾಂದ್ ಪಾಷಾ, ದುರ್ಗಾ ಸಿಂಗ್ ಇದ್ದರು.