ಪ.ಜಾ.ಗೆ ಮಡಿವಾಳರ ಸೇರ್ಪಡೆಗೆ ತೀವ್ರ ವಿರೋಧ
ದೇವದುರ್ಗ: ಪರಿಶಿಷ್ಟ ಜಾತಿ ಪಟ್ಟಿಗೆ ಮಡಿವಾಳ ಜನಾಂಗದವರ ಸೇರ್ಪಡೆಗೆ ಮುಂದಾಗಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ನಿರ್ಧಾರವನ್ನು ಮಾದಿಗ ಮೀಸಲಾತಿ ಹೋರಾಟ ಸಮಿತಿ ತೀವ್ರವಾಗಿ ಖಂಡಿಸಿದೆ.
ಈ ಕುರಿತು ಪ್ರಕಟಣೆ ನೀಡಿರುವ ಸಂಘಟನೆಯ ತಾಲೂಕು ಸಮಿತಿಯ ಮುಖಂಡರಾದ ಶಿವಪ್ಪ ಬಲ್ಲಿದ್, ಪರುಶುರಾಮ್ ಮಾಗಡಿ, ಹನುಮಂತ ಭಾವಿಮನಿ, ಶಿವಪ್ಪ ಭಾವಿಮನಿ, ಪರಿಶಿಷ್ಟ ಜಾತಿಯಲ್ಲಿ ಈಗಾಗಲೇ 108 ಜಾತಿಗಳವರು ಸೇರಿದ್ದು, ಅದರಲ್ಲಿ ಮಾದಿಗ ಮತ್ತು ಛಲವಾದಿ ಜನಾಂಗದವರು ಅಸ್ಪಷ್ಯರಾಗಿದ್ದಾರೂ ಸರ್ಕಾರದ ಸೌಲಭ್ಯದಿಂದ ವಂಚಿತರಾಗಿದ್ದಾರೆಂದು ಟೀಕಿಸಿದರು.
ಸರ್ಕಾರದ ವಿವಿಧ ಸೌಲಭ್ಯಗಳು ಸದ್ಯ ಪಟ್ಟಿಯಲ್ಲಿರುವವರಿಗೆ ಸಮರ್ಪಕವಾಗಿ ದೊರೆಯುತ್ತಿಲ್ಲ.ಇಂಥ ಪರಿಸ್ಥಿತಿಯಲ್ಲಿ ಸರ್ಕಾರ ಮಡಿವಾಳ ಜಾತಿಯವರನ್ನೂ ಪರಿಶಿಷ್ಟರ ಪಟ್ಟಿಗೆ ಸೇರ್ಪಡೆಗೊಳಿಸಲು ಮುಂದಾಗಿರುವುದು ಖಂಡನೀಯ. ಸರ್ಕಾರ ಸೇರ್ಪಡೆಗೊಳಿಸಲು ಮುಂದಾದರೆ ಉಗ್ರ ಹೋರಾಟ ಆಯೋಜಿಸುವುದಾಗಿ ಎಚ್ಚರಿಸಿದ್ದಾರೆ.