ಪಿಯು ಶುಲ್ಕ ಹೆಚ್ಚಳ; ಪ್ರತಿಭಟನೆ
ದೇವದುರ್ಗ: ಪಿಯುಸಿ ಶುಲ್ಕ ಹೆಚ್ಚಳ ಮಾಡಿದ ಕ್ರಮವನ್ನು ಖಂಡಿಸಿ ಪಟ್ಟಣದಲ್ಲಿ ಈಚೆಗೆ ಭಾರತೀಯ ವಿದ್ಯಾರ್ಥಿ ಫೆಡರೇಷನ್ನ ತಾಲೂಕು ಸಮಿತಿಯಿಂದ ಪ್ರತಿಭಟನೆ ನಡೆಸಲಾಯಿತು. ಪಟ್ಟಣದ ಅಂಬೇಡ್ಕರ್ ವೃತ್ತದಿಂದ ಮಿನಿ ವಿಧಾನಸೌಧದವರೆಗೆ ಸಂಘಟನೆಯ ತಾಲೂಕು ಸಮಿತಿ ಅಧ್ಯಕ್ಷ ಮಹ್ಮದ ಮುಸ್ತಫ್ ನೇತೃತ್ವದಲ್ಲಿ ಪ್ರತಿಭಟನೆ ನಡೆಸಿ ತಹಸೀಲ್ದಾರ್ ಅವರಿಗೆ ಮನವಿ ಸಲ್ಲಿಸಿದರು. ಜಿಲ್ಲಾ ಪ್ರಧಾನ ಕಾರ್ಯದರ್ಶಿ ಶಬ್ಬೀರ ಅಹ್ಮದ್, ಮಾಜಿ ಅಧ್ಯಕ್ಷ ರಮೇಶ ರಾಮನಾಳ, ಮಾತನಾಡಿದರು. ಮೌನೇಶ, ಹನುಮಂತ ಜಾಲಹಳ್ಳಿ ಇದ್ದರು.