ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ರಾಯಚೂರು

ಮಕ್ಕಳ ಶೈಕ್ಷಣಿಕ ಪ್ರಗತಿಗೆ ಶ್ರಮಿಸಿ: ನಾಯಕ ಸಲಹೆ

Mainashree
Updated On : 9 Jan 2014, 11:05 am

ದೇವದುರ್ಗ: ತಾಲೂಕಿನ ಶೈಕ್ಷಣಿಕ ಪ್ರಗತಿಗೆ ಎಲ್ಲರೂ ಸಹಕಾರ ನೀಡಬೇಕು. ಪ್ರತಿಯೊಬ್ಬರಿಗೂ ಶಿಕ್ಷಣದ ಅಗತ್ಯವಿದ್ದು, ಪಾಲಕರು ತಮ್ಮ ಮಕ್ಕಳನ್ನು ಶಾಲೆಗೆ ಕಳಿಸುವ ಮೂಲಕ ಶೈಕ್ಷಣಿಕ ಬದುಕು ಸುಧಾರಣೆಗೆ ಮುಂದಾಗಬೇಕೆಂದು ಶಾಸಕ ಎ.ವೆಂಕಟೇಶ ನಾಯಕ ಕರೆ ನೀಡಿದರು. ತಾಲೂಕಿನ ನಾಗಡದಿನ್ನಿ ಗ್ರಾಪಂ ವ್ಯಾಪ್ತಿ ಹೆಗ್ಗಡದಿನ್ನಿಯಲ್ಲಿ ವಾಲ್ಮೀಕಿ ಭವನ ಕಾಮಗಾರಿಗೆ ಚಾಲನೆ ನೀಡಿ ಶಾಲಾ ಮಕ್ಕಳಿಗೆ ಉಚಿತ ಸೈಕಲ್ ವಿತರಿಸಿ ಮಾತನಾಡಿ, ಪಾಲಕರು ತಮ್ಮ ಮಕ್ಕಳಿಗೆ ಉತ್ತಮ ಶಿಕ್ಷಣ ದೊರೆಯುವಂತೆ ಮಾಡಬೇಕೆಂದರು. ಕಾಂಗ್ರೆಸ್ ಮುಖಂಡ ಬುಡ್ಡನಗೌಡ ಜಾಗಟಗಲ್ ಮಾತನಾಡಿ, ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಗ್ರಾಮೀಣ ಮಟ್ಟದಲ್ಲಿ ಶಿಕ್ಷಣ ಪ್ರಗತಿಗೆ ಹೆಚ್ಚಿನ ಆದ್ಯತೆ ನೀಡುತ್ತಿದ್ದು, ಸದುಪಯೋಗ ಪಡಿಸಿಕೊಳ್ಳುವಂತೆ ಕರೆ ನೀಡಿದರು. ಮಾಜಿ ಎಂಎಲ್ಸಿ ಬಸವರಾಜ ಪಾಟೀಲ್ ಇಟಗಿ, ನಾಗಡದಿನ್ನಿ ಗ್ರಾ.ಪಂ ಅಧ್ಯಕ್ಷ ಬೂದೆಮ್ಮ ಹೆಗ್ಗಡದಿನ್ನಿ, ಎ.ಮಲ್ಲಿಕಾರ್ಜುನ ಪಾಟೀಲ್, ಅಕ್ಕಮಹಾದೇವಿ, ಆರ್. ಪಾಟೀಲ್, ಕರೆಮ್ಮ ಚಿಂತಲಕುಂಟಾ, ಖಾಜಾಸಾಬ ಹೆಗ್ಗಡದಿನ್ನಿ, ತಿಪ್ಪನಗೌಡ ಪೋಲೀಸ್ ಪಾಟೀಲ್, ಸಿದ್ರಾಮಪ್ಪ ಸಾಹುಕಾರ, ಗುರಪಾದಯ್ಯ ಸ್ವಾಮಿ ಹಿರೇಮಠ ಇದ್ದರು.


Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement