ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ರಾಯಚೂರು

ಇಂದಿನಿಂದ ಶೈಕ್ಷಣಿಕ ಸಮಾಲೋಚನಾ ಸಭೆ

Mainashree
Updated On : 10 Jan 2014, 11:28 am

ರಾಯಚೂರು: ಜಿಲ್ಲಾ ಪ್ರೌಢಶಾಲಾ ಗಣಿತ, ವಿಜ್ಞಾನ ವಿಷಯಗಳ ಬೋಧಕರ ವೇದಿಕೆಯಿಂದ ನಗರದಲ್ಲಿ ಜ.10 ಮತ್ತು 11 ರಂದು ಜಿಲ್ಲಾ ಮಟ್ಟದ 4ನೇ ಶೈಕ್ಷಣಿಕ ಸಮಾಲೋಚನಾ ಸಭೆ ಆಯೋಜಿಸಲಾಗಿದೆ.
ನಗರದ ರಂಗಮಂದಿರದಲ್ಲಿ ಜ.10ರಂದು ಬೆ.10ಕ್ಕೆ ಶಾಸಕ ಡಾ.ಶಿವರಾಜ್ ಪಾಟೀಲ್ ಸಮಾಲೋಚನಾ ಸಭೆಗೆ ಚಾಲನೆ ನೀಡಲಿದ್ದಾರೆ. ಜಿಪಂ ಅಧ್ಯಕ್ಷೆ ಲಲಿತಮ್ಮ ಪಾಟೀಲ್, ಶಾಸಕ ತಿಪ್ಪರಾಜು ಹವಾಲ್ದಾರ್, ಜಿಪಂ ಉಪಾಧ್ಯಕ್ಷ ಕೆ.ಶರಣಪ್ಪ, ಪ್ರಮುಖರಾದ ಹನುಮೇಶ ಮದ್ಲಾಪೂರ, ಜಯಣ್ಣ, ರಾಧಾಕೃಷ್ಣ ಮದನಕರ್, ಡಿಡಿಪಿಐ ರಾಮಾಂಜನೇಯ ಸೇರಿ ಅನೇಕರು ಪಾಲ್ಗೊಳ್ಳಲಿದ್ದಾರೆ. ನಂತರ ನಡೆಯುವ ಗೋಷ್ಠಿಗಳಲ್ಲಿ ಪಾರಂಪರಿಕ ವಿಜ್ಞಾನದ ಪರಿಚಯ ಎಂಬ ವಿಷಯದ ಕುರಿತು ಸಂಡೂರಿನ ವಿಶ್ವಮೂರ್ತಿ, ವಿಜ್ಞಾನದಲ್ಲಿ ಸಂಶೋಧನೆಗಳು ಎಂಬ ವಿಷಯದ ಕುರಿತು ಬೆಂಗಳೂರಿನ ಡಾ. ಹರೀಶ್ ಭಟ್ ವಿಷಯ ಮಂಡಿಸಲಿದ್ದಾರೆ. ಅದೇ ರೀತಿ ಜ.11ರಂದು ಶಿಕ್ಷಣದ ಮೇಲಿನ ಸವಾಲುಗಳು ಎಂಬ ವಿಚಾರದ ಕುರಿತು ಬೆಂಗಳೂರಿನ ಡಾ. ವಿ.ಪಿ. ನಿರಂಜನಾ ರಾಧ್ಯ, ಬದುಕಿನ ಪೂರಕ ವಿಜ್ಞಾನ ಶಿಕ್ಷಣ ಎಂಬ ವಿಷಯದ ಕುರಿತು ಬೆಂಗಳೂರಿನ ಎಂ.ಆರ್.ನಾಗರಾಜ್ ವಿಷಯ ಮಂಡಿಸಲಿದ್ದಾರೆಂದು ಪ್ರಕಟಣೆ ತಿಳಿಸಿದೆ. ಹಾಗೆಯೇ ಜ.11ರಂದು ವೇದ ಗಣಿತ ಕುರಿತು ವೆಂಕಟ ಸುಬ್ಬರಾವು ಉಪನ್ಯಾಸ ನೀಡಲಿದ್ದಾರೆ.
ಬಿಡುಗಡೆಗೆ ಸೂಚನೆ: ನಗರದಲ್ಲಿ ಜ.10 ಮತ್ತು 11ರಂದು ನಡೆಯಲಿರುವ ಗಣಿತ ವಿಜ್ಞಾನ ವಿಷಯಗಳ ಬೋಧಕರ ಸಮಾಲೋಚನಾ ಸಭೆಯಲ್ಲಿ ಜಿಲ್ಲೆಯ ಪ್ರೌಢಶಾಲೆಗಳಲ್ಲಿ ಗಣಿತ ಹಾಗೂ ವಿಜ್ಞಾನ ಬೋಧಿಸುತ್ತಿರುವ ಮತ್ತು ಉನ್ನತೀಕರಿಸಿದ ಪ್ರಾಥಮಿಕ ಶಾಲೆಗಳ ಶಿಕ್ಷಕರನ್ನು ಕಡ್ಡಾಯವಾಗಿ ಭಾಗವಹಿಸಲು ಡಿಡಿಪಿಐ ಸೂಚಿಸಿದ್ದಾರೆ.ಈ ನಿಟ್ಟಿನಲ್ಲಿ ಸಂಬಂಧಿಸಿ ಶಾಲೆಗಳ ಮುಖ್ಯಗುರುಗಳು ಅನ್ಯಕಾರ್ಯ ನಿಮಿತ್ತ ಎಂದು ಪರಿಗಣಿಸಿ ಸಮಾಲೋಚನಾ ಸಭೆಯಲ್ಲಿ ಪಾಲ್ಗೊಳ್ಳುವಂತೆ ಅನುವು ಮಾಡಿಕೊಡಲು ಬಿಡುಗಡೆಗೊಳಿಸುವಂತೆ ಸೂಚಿಸಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement