ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ರಾಯಚೂರು

ಮಟ್ಕಾ: ಮೂವರು ವಶಕ್ಕೆ

Mainashree
Updated On : 10 Jan 2014, 11:27 am

ದೇವದುರ್ಗ: ಪಟ್ಟಣ ಪೊಲೀಸರು ಮಟ್ಕಾ ಬರೆಯುತ್ತಿದ್ದ ಮೂವರನ್ನು ಬಂಧಿಸಿದ್ದಾರೆ. ಬಂಧಿತರನ್ನು 108 ಆ್ಯಂಬುಲೆನ್ಸ್ ಚಾಲಕ ಬಸವರಾಜ್, ಸಿದ್ದರಾಮ, ಜೂಟಮರಡಿಯ ಬಾಲನಗೌಡ ಎಂದು ಗುರುತಿಸಲಾಗಿದೆ. ಸರ್ಕಾರಿ ಆಸ್ಪತ್ರೆ ಎದುರು ಮಟ್ಕಾ ಬರೆಯುತ್ತಿದ್ದ ವೇಳೆ ದಾಳಿ ಮಾಡಿದ ಪೊಲೀಸರು ಆರೋಪಿಗಳನ್ನು ಬಂಧಿಸಿ, ಅವರಿಂದ ಒಟ್ಟು 4,020 ಜಪ್ತಿ ಮಾಡಿದ್ದಾರೆ. ದೇವದುರ್ಗ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಮಟ್ಕಾ ಬುಕ್ಕಿ ಅಂದರ್
ರಾಯಚೂರು: ಲಿಂಗಸ್ಗೂರು ಪೊಲೀಸರು ಮಟಕಾ ಬುಕ್ಕಿಯೊಬ್ಬನನ್ನು ಬಂಧಿಸಿದ್ದಾರೆ. ಬಂಧಿತನನ್ನು ದರವೇಶ್ ಸುತ್ತಾರ್ ಎಂದು ಗುರುತಿಸಲಾಗಿದೆ. ಈತ ಈಚೆಗೆ ಜೂಜು ತಡೆಗೆ ರೂಪಿಸಿರುವ ವಿಶೇಷ ಕಾರ್ಯಾಚರಣೆ ತಂಡವು ದಾಳಿ ಮಾಡಿದ ವೇಳೆ ಪರಾರಿಯಾಗಿದ್ದ. ವ್ಯಾಪಕ ಶೋಧ ನಡೆಸಿದ ಪೊಲೀಸರು ಪ್ರಮುಖ ಮಟ್ಕಾ ಬುಕ್ಕಿ ದರವೇಶನನ್ನು ನ್ಯಾಯಾಂಗ ಬಂಧನಕ್ಕೆ ಕಳಿಸಿದ್ದಾರೆ. ಲಿಂಗಸ್ಗೂರು ಠಾಣೆಯಲ್ಲಿ ಕೇಸ್ ದಾಖಲಾಗಿದೆ.
ಜೂಜು: 7 ಮಂದಿ ಸೆರೆ
ರಾಯಚೂರು: ದೇವದುರ್ಗ ತಾಲೂಕಿನ ಶಾವಂತಗಲ್ ಗ್ರಾಮದ ಬಳಿಯ ಹಳ್ಳದಲ್ಲಿ ಜೂಜಾಡುತ್ತಿದ್ದ 7 ಜನರನ್ನು ಬಂಧಿಸಿದ್ದಾರೆ. ಬಂಧಿತರನ್ನು ಹುಸೇನಸಾಬ ಕಡದಿನ್ನಿ, ಸುಗನಗೌಡ ಸಿರವಾರ, ಬಸಲಿಂಗ ಕಲ್ಮಲಾ, ಚಂದ್ರಕಾಂತ ಸಿರವಾರ, ಶಿವಕುಮಾರ ಸಿರವಾರ, ಚೆನ್ನಬಸವ ಸಿರವಾರ, ಮಹಾಂತೇಶ ಸಿರವಾರ ಎಂದು ಗುರುತಿಸಲಾಗಿದೆ. ಇವರು ಗ್ರಾಮದ ಬಳಿಯ ಹಳ್ಳದಲ್ಲಿ ಇಸ್ಪೀಟ್ ಆಡುತ್ತಿದ್ದ ವೇಳೆ ದಾಳಿ ಮಾಡಿದ ಪೊಲೀಸರು ಆರೋಪಿಗಳನ್ನು ಬಂಧಿಸಿ ಅವರಿಂದ ರು. 31,650 ಮತ್ತು 14 ಬೈಕ್‌ಗಳು, 9 ಮೊಬೈಲ್‌ಗಳನ್ನು ಜಪ್ತಿ ಮಾಡಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಜಾಲಹಳ್ಳಿ ಠಾಣೆಯಲ್ಲಿ ಕೇಸ್ ದಾಖಲಾಗಿದೆ.


Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement