ದೇವರಭೂಪುರ: ಜಮೀನು ಅಕ್ರಮ ಪ್ರವೇಶ ತಡೆಗೆ ಆಗ್ರಹ
ಲಿಂಗಸ್ಗೂರು: ತಾಲೂಕಿನ ದೇವರಭೂಪುರ ಗ್ರಾಮದ ಜಮೀನಿನಲ್ಲಿ ಅಕ್ರಮ ಪ್ರವೇಶ ತಡೆದು ಆಸ್ತಿ ಮತ್ತು ಜೀವರಕ್ಷಣೆ ಮಾಡಿಕೊಡುವಂತೆ ಗ್ರಾಮದ ಅಮರಪ್ಪ ಸಹಾಯಕ ಆಯುಕ್ತರಿಗೆ ಒತ್ತಾಯಿಸಿದ್ದಾರೆ.
ಗ್ರಾಮದ ಅಮರೇಶ ದುರುಗಪ್ಪ, ದ್ಯಾವಪ್ಪ ದುರುಗಪ್ಪ, ಅಮರಪ್ಪ ಬಾಲಪ್ಪ ಎಂಬ ನಾವುಗಳು ಸರ್ವೆ ನಂ.2(ಅ) ರ 3 ಎಕರೆ 2 ಗುಂಟೆ ಜಮೀನಿನ ಪಟ್ಟಾದಾರರಾಗಿದ್ದು, ಸದರಿ ಜಮೀನು ಕಾನೂನು ಪ್ರಕಾರ ತಂದೆಯಿಂದ ವರ್ಗಾವಣೆ ಮಾಡಿಸಿಕೊಂಡಿದ್ದೇವೆ. ನಮ್ಮ ಹೆಸರಿನಲ್ಲಿ ಪಹಣಿಯೂ ಇರುತ್ತದೆ. ಆದರೆ 1983ರಲ್ಲಿ ಗ್ರಾಪಂಗೆ ನಿಮ್ಮ ತಂದೆ ಮೂರು ಸಾವಿರ ರೂ.ಗೆ ಮಾರಾಟ ಮಾಡಿದ್ದಾರೆಂದು ಗ್ರಾಪಂ ಆಡಳಿತ ಜಮೀನಿನಲ್ಲಿ ಸ್ಮಶಾನ ಮತ್ತು ತಿಪ್ಪೆಗುಂಡಿ ಮಾಡಲು ಹೊರಟಿದೆ.
ಬಡವರಾದ ನಮಗೆ ಉಪಜೀವನ ನಡೆಸಲು ಬೇರೆ ಯಾವುದೇ ಮಾರ್ಗವಿರುವುದಿಲ್ಲ. ಕಾರಣ ಗ್ರಾಪಂನ ಮೂಲ ದಾಖಲೆ ಪರಿಶೀಲಿಸಿ ನ್ಯಾಯ ದೊರಕಿಸಿಕೊಡಬೇಕು ಹಾಗೂ ನಮಗೆ ಜೀವರಕ್ಷಣೆ ಮತ್ತು ಆಸ್ತಿ ರಕ್ಷಣೆ ಮಾಡಿಕೊಡುವಂತೆ ಮನವಿಯಲ್ಲಿ ಒತ್ತಾಯಿಸಿದ್ದಾರೆ. ಈ ಸಂದರ್ಭದಲ್ಲಿ ಸೋಮನಾಥ ಗುರುಗುಂಟಾ, ಬಸಯ್ಯ ಗುರುಗುಂಟಾ, ಹನುಮಂತರಾಯ, ಅಮರೇಶ, ಆದಪ್ಪ, ಅಮರಪ್ಪ, ಆದಪ್ಪ ಹಂಪನಾಳದೊಡ್ಡಿ ಇದ್ದರು.