ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ರಾಯಚೂರು

ಬೀದಿಪಾಲಾದ ತಾಂಡಾ ಕುಟುಂಬ

Lingaraj Badiger
Updated On : 11 Jan 2014, 11:41 am

ಮುದಗಲ್: ಇದ್ದ ಮನೆ ಕೆರೆ ಪಾಲಾಯಿತು, ಸರ್ಕಾರ ತೋರಿದ ಜಾಗವನ್ನು ಗ್ರಾಮ ಪಂಚಾಯಿತಿಯವರು ಬೇರೆಯವರ ಹೆಸರಿಗೆ ವರ್ಗಾವಣೆ ಮಾಡಿದ್ದರಿಂದ ತನ್ನ ಕುಟುಂಬ ಬೀದಿಪಾಲಾಗಿದೆ ಎಂದು ಬಯ್ಯಾಪುರ ತಾಂಡಾನಿವಾಸಿ ರಾಮಣ್ಣ ಕನಕಪ್ಪ ಅಳಲು ತೋಡಿಕೊಂಡರು.
ಕಳೆದ 20 ವರ್ಷಗಳ ಹಿಂದೆ ಗ್ರಾಮದ ಮಧ್ಯಭಾಗದಲ್ಲಿ ಕೆರೆ ನಿರ್ಮಾಣ ಮಾಡಲು ಸರ್ಕಾರ ಜಾಗವನ್ನು ಇದ್ದ ನಿವೇಶನಗಳನ್ನು ವಸಪಡಿಸಿಕೊಂಡು ಈಗ ಇರುವ ಬಯ್ಯಾಪುರ ತಾಂಡಾ ಸರ್ಕಾರಿ ಜಮೀನಾಗಿದ್ದು, ಕೆರೆಯಲ್ಲಿ ಮನೆ, ಜಾಗ ಕಳೆದುಕೊಂಡವರಿಗೆ ನೀಡಲಾಗಿತ್ತು. ಅಲ್ಲಿಯೇ ವಾಸವಾಗುವಂತೆ ಜಾಗ ತೋರಿಸಿ ಮನೆ ಕಟ್ಟಿಕೊಳ್ಳುವಂತೆ ಸೂಚಿಸಿದ್ದರಿಂದ ತಮ್ಮ ಜಾಗದಲ್ಲಿ ಕಲ್ಲು ಹಾಕಿಕೊಂಡು ಕಬ್ಜಾ ಮಾಡಿಕೊಳ್ಳಲಾಗಿತ್ತು.
ಆದರೆ ತಮಗೆ ತೋರಿಸಿದ, ವಶದಲ್ಲಿರುವ ಜಾಗವನ್ನು ಬಯ್ಯಾಪುರ ಗ್ರಾಪಂ ಅಧಿಕಾರಿಗಳು ಅದೇ ತಾಂಡಾ ನಿವಾಸಿ ಉಮಲೇಪ್ಪ ಎನ್ನುವವರಿಗೆ 2009ರಲ್ಲಿ ನಿವೇಶನವನ್ನು ವರ್ಗಾವಣೆ ಮಾಡಿದ್ದಾರೆ. ಈ ಬಗ್ಗೆ ಗ್ರಾಪಂ ಅಧಿಕಾರಿಗಳಿಗೆ ಮನವಿ ಮಾಡಿದರೆ ತಮಗೆ ಸಂಬಂಧ ಇಲ್ಲ ಎನ್ನುವ ರೀತಿಯಲ್ಲಿ ವರ್ತಿಸುತ್ತಿದ್ದಾರೆ. ಗ್ರಾಪಂ ಅಭಿವೃದ್ಧಿ ಅಧಿಕಾರಿಗಳಿಗೆ ಮನವಿ ಮಾಡಿದರೂ ಪ್ರಯೋಜನವಾಗಿಲ್ಲ ಎಂದು ರಾಮಣ್ಣ ತಿಳಿಸಿದ್ದಾರೆ.
ಸರ್ಕಾರ ತಮಗೆ ತೋರಿಸಿದ ಜಾಗವನ್ನು ತಮ್ಮ ಹೆಸರಿಗೆ ವರ್ಗಾವಣೆ ಮಾಡದೆ ಬೇರೆಯವರ ಹೆಸರಿಗೆ ವರ್ಗಾವಣೆ ಮಾಡಿರುವ ಬಗ್ಗೆ ಆಕ್ಷೇಪಣೆ ಮಾಡಲಾಗಿದೆ. ಸಹಾಯಕ ಆಯುಕ್ತರ ಗಮನಕ್ಕೂ ತರಲಾಗಿದೆ. ನಿರ್ಗತಿಕರಾಗಿರುವ ನಾವು ಹೊಟ್ಟೆ ಪಾಡಿಗಾಗಿ ಬೆಂಗಳೂರು ಪಟ್ಟಣಕ್ಕೆ ಹೋಗಿ ದುಡಿಯುತ್ತಿದ್ದು, ಸಂಬಂಧಿಸಿದ ಮೇಲಾಧಿಕಾರಿಗಳು ಕೂಡಲೇ ತಮಗೆ ನೀಡಿದ ನಿವೇಶನವನ್ನು ತಮ್ಮ ಹೆಸರಲ್ಲಿ ವರ್ಗಾವಣೆ ಮಾಡಿಕೊಡುವಂತೆ ಮನವಿ ಮಾಡಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement