ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ರಾಯಚೂರು

ಭಾವ ಸಂಗಮ ಕಾರ್ಯಕ್ರಮ ನಾಳೆ

Lingaraj Badiger
Updated On : 11 Jan 2014, 11:41 am

ರಾಯಚೂರು: ರಾಷ್ಟ್ರಕವಿ ಜಿ.ಎಸ್. ಶಿವರುದ್ರಪ್ಪ ಮತ್ತು ಜಿಲ್ಲೆಯ ಹಿರಿಯ ರಂಗಕರ್ಮಿ ಎಂ.ಬಿ. ಪಾಟೀಲ್ ಅವರ ಸ್ಮರಣಾರ್ಥವಾಗಿ ಜ.12ರಂದು ನಗರದಲ್ಲಿ ಭಾವ ಸಂಗಮ ಕಾರ್ಯಕ್ರಮ ಆಯೋಜಿಸಲಾಗಿದೆ ಎಂದು ಕಲಾನಿಕೇತನ ಸಂಗೀತ ವಿದ್ಯಾಲಯದ ಕೆ. ಕರಿಯಪ್ಪ ಮಾಸ್ತರ್ ಹೇಳಿದರು. ನಗರದಲ್ಲಿ ಶುಕ್ರವಾರ ಕರೆದಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಯೋಗದಲ್ಲಿ ಸಂಜೆ 6ಕ್ಕೆ ನಗರದ ರಂಗಮಂದಿರದಲ್ಲಿ ನಡೆಯುವ ಭಾವ ಸಂಗಮ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಮಲ್ಲನಗೌಡ ಇಂದಪುರ ವಹಿಸಲಿದ್ದಾರೆ. ಅತಿಥಿಗಳಾಗಿ ಬಾಬು ಭಂಡಾರಿಗಲ್, ವಿ.ಎನ್. ಅಕ್ಕಿ ಪಾಲ್ಗೊಳ್ಳಲಿದ್ದಾರೆಂದು ಹೇಳಿದರು. ಭಾವ ಸಂಗಮ ಕಾರ್ಯಕ್ರಮದಲ್ಲಿ ಕಲಾವಿದರಾದ ಆಂಜನೇಯ ಜಾಲಿಬೆಂಚಿ, ಕರಿಯಪ್ಪ ಮಾಸ್ತರ್, ಕೆ. ಕವಿತಾ, ರೆಡ್ಡಿ ತಿಮ್ಮಯ್ಯ ಸೇರಿ ಅನೇಕರು ರಂಗಗೀತೆ, ಶಿಶುನಾಳ ಶರೀಫರ ಗೀತೆಗಳು, ಭಾವಗೀತೆ ಪ್ರಸ್ತುತಪಡಿಸಲಿದ್ದಾರೆಂದು ಹೇಳಿದರು. ಈ ಸಂದರ್ಭ ಬಾಬು ಭಂಡಾರಿಗಲ್, ಜಿ. ಸುರೇಶ್ ಇದ್ದರು.
13ಕ್ಕೆ ಉದ್ಘಾಟನೆ
ರಾಯಚೂರು: ಯಾದಗಿರಿ ಜಿಲ್ಲೆಯ ಸುರಪುರ ತಾಲೂಕಿನ ತಿಂಥಿಣಿಯಲ್ಲಿ ಜ.13ರಂದು ಜೈವಿಕ ಇಂಧನ ಉದ್ಯಾನ ಉದ್ಘಾಟನೆ ಸಮಾರಂಭ ಆಯೋಜಿಸಲಾಗಿದೆ. ಅಂದು ಬೆಳಗ್ಗೆ 12ಕ್ಕೆ ಕಾರ್ಯಕ್ರಮವನ್ನು ರಾಜ್ಯದ ಸಿಎಂ ಸಿದ್ದರಾಮಯ್ಯ ಉದ್ಘಾಟಿಸಲಿದ್ದಾರೆ. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಸುರಪುರ ಶಾಸಕ ರಾಜಾ ವೆಂಕಟಪ್ಪ ನಾಯಕ ವಹಿಸುವರು. ಮುಖ್ಯ ಅತಿಥಿಗಳಾಗಿ ಸಚಿವರಾದ ಎಚ್.ಕೆ. ಪಾಟೀಲ್, ಬಾಬುರಾವ್ ಚಿಂಚನಸೂರ್, ಕೃಷ್ಣ ಬೈರೇಗೌಡ, ಸಂಸದರಾದ ಸಣ್ಣಫಕೀರಪ್ಪ, ಡಾ.ಬಸವರಾಜ ಪಾಟೀಲ್ ಸೇಡಂ, ಯಾದಗಿರಿ ಜಿಪಂ ಅಧ್ಯಕ್ಷೆ ಭೀಮವ್ವ, ಎಂಎಲ್ಸಿ ಅಲ್ಲಮಪ್ರಭು ಪಾಟೀಲ್ ಸೇರಿ ಅನೇಕರು ಪಾಲ್ಗೊಳ್ಳಲಿದ್ದಾರೆ.
ಮಲ್ಲನಗೌಡರಿಗೆಮಾತೃ ವಿಯೋಗ
ಸಿಂಧನೂರು: ಗಂಜ್ ವರ್ತಕರ ಸಂಘದ ಅಧ್ಯಕ್ಷ ಕಾನಿಹಾಳ ಮಲ್ಲನಗೌಡರ ತಂದೆ ವೀರನಗೌಡ ದೇವರೆಡ್ಡಿ ಕಾನಿಹಾಳ (102) ಇತ್ತೀಚೆಗೆ ಕೊನೆಯುಸಿರೆಳೆದರು. ಕೆಲವು ದಿನಗಳಿಂದ ಅಸ್ವಸ್ಥರಾಗಿದ್ದ ಇವರನ್ನು ಹೆಚ್ಚಿನ ಚಿಕಿತ್ಸೆಗೆಂದು ಬೆಂಗಳೂರಿಗೆ ಕರೆದೊಯ್ಯುತ್ತಿದ್ದಾಗ ಮಾರ್ಗ ಮಧ್ಯದಲ್ಲಿ ಅಸುನೀಗಿದ್ದಾರೆಂದು ಕುಟುಂಬದ ಮೂಲಗಳು ತಿಳಿಸಿವೆ. ಮೃತರು 6 ಜನ ಪುತ್ರರು, ಸೊಸೆಯಂದಿರು, ಮೊಮ್ಮಕ್ಕಳು ಹಾಗೂ ಅಪಾರ ಬಂಧುಗಳನ್ನು ಅಗಲಿದ್ದಾರೆ. ಮಾಜಿ ಸಂಸದ ಕೆ. ವಿರೂಪಾಕ್ಷಪ್ಪ, ಮಾಜಿ ಕೇಂದ್ರ ಸಚಿವ ಬಸವರಾಜ ಪಾಟೀಲ್ ಅನ್ವರಿ, ಶಾಸಕ ಬಾದರ್ಲಿ ಹಂಪನಗೌಡ, ಮಸ್ಕಿ ಶಾಸಕ ಪ್ರತಾಪಗೌಡ ಪಾಟೀಲ್, ಯಲಬುರ್ಗಾ ಶಾಸಕ ಬಸವರಾಜ ರಾಯರೆಡ್ಡಿ, ಮಾಜಿ ಶಾಸಕರಾದ ವೆಂಕಟರಾವ್ ನಾಡಗೌಡ, ಅಮರೇಗೌಡ ಬಯ್ಯಾಪುರು, ಕೆಜೆಪಿ ಮುಖಂಡ ರಾಜಶೇಖರ ಪಾಟೀಲ್, ಬಿಜೆಪಿ ಅಮರೇಗೌಡ ಸಂತಾಪ ಸೂಚಿಸಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement