ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ರಾಯಚೂರು

ಶಿಕ್ಷಣದಿಂದ ಮಾತ್ರ ಅಭಿವೃದ್ಧಿ ಸಾಧ್ಯ: ಶಾಸಕ ಬಾದರ್ಲಿ

Lingaraj Badiger
Updated On : 11 Jan 2014, 11:40 am

ಕ.ಪ್ರ. ವಾರ್ತೆ, ಸಿಂಧನೂರು, ಜ.10
ರಾಜ್ಯದಲ್ಲಿ ಹೈ-ಕ ಭಾಗವು ಎಲ್ಲ ಕ್ಷೇತ್ರಗಳಲ್ಲೂ ಹಿಂದುಳಿದಿರುವಿಕೆಯ ಹಣೆಪಟ್ಟಿ ಕಟ್ಟಿಕೊಂಡಿದ್ದು, ಇದನ್ನು ಕಳಚಿ ಹಾಕಲು ಶಿಕ್ಷಣ ಕ್ಷೇತ್ರದಲ್ಲಿ ಅಭಿವೃದ್ಧಿ ಸಾಧಿಸಬೇಕೆಂದು ಶಾಸಕ ಹಂಪನಗೌಡ ಬಾದರ್ಲಿ ಹೇಳಿದರು.
ನಗರದ ಸುಕಾಲಪೇಟೆಯ ಸರ್ಕಾರಿ ಪ್ರೌಢಶಾಲೆಯಲ್ಲಿ ಹಮ್ಮಿಕೊಂಡಿದ್ದ 2013- 14ನೇ ಸಾಲಿನ ಬೈಸಿಕಲ್ ವಿತರಣೆ ಸಮಾರಂಭದಲ್ಲಿ ಮಾತನಾಡಿ, ಕೇಂದ್ರ ಸರ್ಕಾರ ಈ ಭಾಗದ ಅಭಿವೃದ್ಧಿಗೆ ಕಲಂ 371(ಜೆ) ಜಾರಿಗೆ ತಂದಿದ್ದು, ಇದರಿಂದ ಈ ಭಾಗದ ಶೈಕ್ಷಣಿಕ, ಆರ್ಥಿಕ, ಉದ್ಯೋಗ ಕ್ಷೇತ್ರಗಳಲ್ಲಿ ಅವಕಾಶಗಳು ಹೆಚ್ಚುತ್ತವೆ. ವಿದ್ಯಾರ್ಥಿಗಳು ಈಗಿನಿಂದಲೇ ಉತ್ತಮ ಶಿಕ್ಷಣ ಪಡೆದು ಉನ್ನತ ಪದವಿಗಳನ್ನು ಹೊಂದುವ ಮೂಲಕ ಎಲ್ಲ ಕ್ಷೇತ್ರಗಳಲ್ಲಿ ಲಭ್ಯವಿರುವ ಅವಕಾಶಗಳನ್ನು ಪಡೆದುಕೊಳ್ಳುವ ಮುಂದಾಗಬೇಕೆಂದರು.
ಸೇವಾನಿರತ ಶಿಕ್ಷಕರ ತರಬೇತಿ ಸಂಸ್ಥೆ: ಎಲ್ಲ ವಿದ್ಯಾರ್ಥಿಗಳಿಗೆ ಗುಣಮಟ್ಟದ ಶಿಕ್ಷಣ ಸಿಗುವಂತೆ ಅನುವಾಗಲು ಈ ಭಾಗದಲ್ಲಿ ಉತ್ತಮ ದರ್ಜೆಯ ಸೇವಾನಿರತ ಶಿಕ್ಷಕರ ತರಬೇತಿ ಸಂಸ್ಥೆಯನ್ನು ತೆರೆಯುವಂತೆ ಬೆಳಗಾವಿಯಲ್ಲಿ ನಡೆದ ಅಧಿವೇಶನದಲ್ಲಿ ಚರ್ಚಿಸಲಾಗಿದ್ದು, ಇಷ್ಟರಲ್ಲೇ ಆರಂಭಗೊಳ್ಳಲಿದೆ ಎಂದರು.
ನಗರಸಭೆ ಅಧ್ಯಕ್ಷ ಜಾಫರ್ ಅಲಿ ಜಹಾಗೀರದಾರ್, ಎಪಿಎಂಸಿ ಅಧ್ಯಕ್ಷ ಸಣ್ಣ ಕರಿಯಪ್ಪ, ತಾ.ಪ ಉಪಾಧ್ಯಕ್ಷ ನಾಗಪ್ಪ ಗೋಮರ್ಸಿ, ನಗರಸಭೆ ಸದಸ್ಯ ಶೇಖರಪ್ಪ ಗಿಣಿವಾರ, ಎಸ್.ಬಿ.ತಿಮ್ಮಯ್ಯ, ಟಿ.ಹನುಮಂತಪ್ಪ, ದುರುಗಪ್ಪ ಕಟಾಲಿ, ವೆಂಕೋಬಣ್ಣ ಭಂಗಿ, ಎನ್.ಅಮರೇಶ, ರವಿ ಬನ್ನದ, ಅಲ್ಲಮಪ್ರಭು ಪೂಜಾರ, ತಿಮ್ಮಣ್ಣ ವಾಲೇಕಾರ, ಟಿ.ಹನುಮಂತಪ್ಪ, ಮಲ್ಲಪ್ಪ ಬಾದರ್ಲಿ, ಹುಸೇನಪ್ಪ, ವಿ.ವಿ. ಪಾಟೀಲ, ವೀರೇಶ ಗೋನವಾರ ಇದ್ದರು. ಶಿಕ್ಷಕಿ ಮಂಜುಳಾ ಸ್ವಾಗತಿಸಿದರು, ಶಿಕ್ಷಕಿ ಟಿ.ನೀಲಮ್ಮ ಕಾರ್ಯಕ್ರಮ ನಿರೂಪಿಸಿದರು. ಶಿಕ್ಷಕ ಬಸವಂತ ಬಿರಾದಾರ ವಂದಿಸಿದರು.
ಸನ್ಮಾನ: ಇದೇ ವೇಳೆ ಶಾಲೆ ಹಾಗೂ ಎಸ್‌ಡಿಎಂಸಿ ವತಿಯಿಂದ ಶಾಸಕ ಬಾದರ್ಲಿ ಹಂಪನಗೌಡ ಹಾಗೂ ನಗರಸಭಾ ಅಧ್ಯಕ್ಷ ಜಾಫರ್ ಅಲಿ ಜಹಾಗೀರದಾರ್ ಅವರನ್ನು ಸನ್ಮಾನಿಸಿ ಗೌರವಿಸಲಾಯಿತು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement