ಅಂಬಾಮಠ ಜಾತ್ರೆ; ವಿಶೇಷ ಬಸ್ ಸೌಲಭ್ಯ
ರಾಯಚೂರು: ಸಿಂಧನೂರು ತಾಲೂಕಿನ ಸೋಮಲಾಪುರ ಗ್ರಾಮದಲ್ಲಿ ಜ.16ರಿಂದ 19ರವರೆಗೆ ಪ್ರಸಿದ್ಧ ಅಂಬಾದೇವಿ ಜಾತ್ರಾ ಮಹೋತ್ಸವ ನಡೆಯಲಿದ್ದು, ಭಕ್ತರ ಅನುಕೂಲಕ್ಕಾಗಿ ಈಶಾನ್ಯ ರಸ್ತೆ ಸಾರಿಗೆ ಸಂಸ್ಥೆಯಿಂದ ವಿಶೇಷ ಬಸ್ ಸೌಲಭ್ಯ ಕಲ್ಪಿಸಲಾಗಿದೆ. ಈ ಕುರಿತು ಸಂಸ್ಥೆಯು ಪ್ರಕಟಣೆ ನೀಡಿ, ಸಿಂಧನೂರು ಘಟಕ, ಕೊಪ್ಪಳ ಮತ್ತು ಬಳ್ಳಾರಿ ವಿಭಾಗದಿಂದ ಜಾತ್ರಾ ಸ್ಥಳ ಸೋಮಲಾಪುರ ಗ್ರಾಮಕ್ಕೆ ವಿಶೇಷ ಬಸ್ ಸೌಕರ್ಯ ಕಲ್ಪಿಸಲಾಗಿದೆ. ಕಾರಟಗಿ-ಅಂಬಾಮಠ, ಸಿರಗುಪ್ಪ- ಅಂಬಾಮಠ, ಸಿಂಧನೂರು-ಅಂಬಾಮಠ ಮಾರ್ಗದಲ್ಲಿ ಈ ವಿಶೇಷ ಬಸ್ ಗಳು ಜ.14ರಿಂದ ಜ.20ರವರೆಗೆ ಸಂಚರಿಸಲಿವೆ ಎಂದು ತಿಳಿಸಿದೆ. ಜಾತ್ರೆಗೆ ತೆರಳುವ ಪ್ರಯಾಣಿಕರು ಸಾರಿಗೆ ಸಂಸ್ಥೆಯು ಒದಗಿಸಿರುವ ವಿಶೇಷ ಬಸ್ಗಳಲ್ಲಿಯೇ ಸಂಚರಿಸಲು ಸಂಸ್ಥೆಯ ವಿಭಾಗೀಯ ಕಚೇರಿಯು ಮನವಿ ಮಾಡಿದೆ.