ಮುಳ್ಳೂರು; ಕುಡಿವ ನೀರಿನ ಕಾಮಗಾರಿಗೆ ಚಾಲನೆ
ಸಿಂಧನೂರು: ತಾಲೂಕಿನ ಮುಳ್ಳೂರು ಗ್ರಾಮದಲ್ಲಿ ಜಿಪಂನಿಂದ 25 ಲಕ್ಷ ವೆಚ್ಚದ ಕುಡಿಯುವ ನೀರು ಪೂರೈಕೆ ಯೋಜನೆಯ ಕಾಮಗಾರಿಗೆ ಇತ್ತೀಚೆಗೆ ಚಾಲನೆ ನೀಡಲಾಯಿತು. ಕುಡಿಯುವ ನೀರಿನ ಟ್ಯಾಂಕ್ ಹಾಗೂ ಪೈಪ್ಲೈನ್ ಅಳವಡಿಕೆ ಕಾಮಗಾರಿಗೆ ಚಾಲನೆ ನೀಡಲಾಯಿತು. ಜಿಪಂ ಮಾಜಿ ಅಧ್ಯಕ್ಷ ಪಂಪನಗೌಡ ಬಾದರ್ಲಿ, ಜಿಪಂ ಸದಸ್ಯ ಚಂದೂಸಾಬ್ ಮುಳ್ಳೂರು, ನಗರಸಭೆ ಅಧ್ಯಕ್ಷ ಜಾಫರ್ ಅಲಿ ಜಾಹಗೀರದಾರ್, ನಾಗಪ್ಪ ಗೋಮರ್ಸಿ, ಮುಖಂಡರಾದ ಮಲ್ಲನಗೌಡ ಕನ್ನಾರಿ, ವಿಶ್ವನಾಥ ಸ್ವಾಮಿ ಪಗಡದಿನ್ನಿ, ಬಸವರಾಜ ಇದ್ದರು.