'ವ್ಯಕ್ತಿ ಪರಿಪೂರ್ಣವಾಗಲು ವಿವೇಕಾನಂದರು ಮಾರ್ಗದರ್ಶಿ'
ರಾಯಚೂರು: ನಗರದ ಬಾಲಕಿಯರ ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಶನಿವಾರ ಸ್ವಾಮಿ ವಿವೇಕಾನಂದರ 151ನೇ ಜಯಂತಿ ಎಬಿವಿಪಿ ಯಿಂದ ಆಯೋಜಿಸಲಾಗಿತ್ತು. ಜಯಂತಿ ಸಮಾರಂಭಕ್ಕೆ ಎಬಿವಿಪಿಯ ಕ್ಷೇತ್ರೀಯ ಸಂಘಟನಾ ಕಾರ್ಯದರ್ಶಿ ರವಿಕುಮಾರ್ ಚಾಲನೆ ನೀಡಿ ಮಾತನಾಡಿ, ಜ್ಞಾನ ಮತ್ತು ಶಿಕ್ಷಣದಿಂದ ಮಾತ್ರ ವ್ಯಕ್ತಿಯಲ್ಲಿ ಪರಿಪೂರ್ಣತೆ ಕಾಣಲು ಸಾಧ್ಯವಾಗುತ್ತದೆ ಎಂದು ವಿವೇಕಾನಂದರು ಜಗತ್ತಿಗೆ ತೋರಿಸಿಕೊಟ್ಟಿದ್ದಾರೆಂದರು. ಜ್ಞಾನದಿಂದ ಬೌದ್ಧಿಕ ಸಾಮರ್ಥ್ಯ ಹೆಚ್ಚಳವಾದರೆ, ಶಿಕ್ಷಣದಿಂದ ಬದುಕುವ ರೀತಿ ಅರಿವಿಗೆ ಬರುತ್ತದೆ ಎಂದ ಅವರು ಇಂದಿನ ದಿನಮಾನದಲ್ಲಿ ದೇಶದ ಎಲ್ಲೆಡೆ ದೌರ್ಜನ್ಯ, ಭ್ರಷ್ಟಾಚಾರ, ಅಪರಾಧೀ ಕೃತ್ಯಗಳ ಹೆಚ್ಚುತ್ತಿದ್ದು, ಅದರ ಬಗ್ಗೆ ಜಾಗೃತಿ ಮೂಡಿಸುವ ಮೂಲಕ ಉತ್ತಮ ಸಮಾಜ ನಿರ್ಮಾಣ ಮಾಡುವ ನಿಟ್ಟಿನಲ್ಲಿ ವಿವೇಕಾನಂದರ ತತ್ವಗಳನ್ನು ತಿಳಿಸಿಕೊಡುವ ಕಾರ್ಯ ಆಗಬೇಕಿದೆ ಎಂದರು. ಅಧ್ಯಕ್ಷತೆಯಲ್ಲಿ ಕಾಲೇಜಿನ ಪ್ರಾಚಾರ್ಯ ಸದಾಶಿವಪ್ಪ ವಹಿಸಿದ್ದರು. ಎಬಿವಿಪಿ ನಗರಾಧ್ಯಕ್ಷ ಗುರುಸ್ವಾಮಿ, ನಗರ ಕಾರ್ಯದರ್ಶಿ ಸಿದ್ದಣ್ಣ, ಕಾರ್ಯಕರ್ತರಾದ ಭಾನುತೇಜ, ಜಂಬಣ್ಣ, ಭೀಮಾಶಂಕರ್, ವಿಜಯ ಇದ್ದರು. ಕಾಲೇಜು ವಿದ್ಯಾರ್ಥಿನಿಯರು ಪಾಲ್ಗೊಂಡಿದ್ದರು.