'ವ್ಯಾಜ್ಯ ಪರಿಹರಿಸಿಕೊಳ್ಳಲು ಗ್ರಾಪಂನಲ್ಲಿ ವ್ಯವಸ್ಥೆ'
ಸಿಂಧನೂರು: ಗ್ರಾಮಸ್ಥರು ವ್ಯಾಜ್ಯಗಳನ್ನು ಪರಿಹರಿಸಿಕೊಳ್ಳಲು ಅನುಕೂಲವಾಗುವಂತೆ ಗ್ರಾಪಂ ಕಚೇರಿಯಲ್ಲಿ ವ್ಯವಸ್ಥೆ ಕಲ್ಪಿಸಲಾಗಿದೆ. ಅದರ ಸದುಪಯೋಗವನ್ನು ಗ್ರಾಮಸ್ಥರು ಪಡೆಯುವಂತೆ ಪ್ರಧಾನ ಸಿವಿಲ್ ನ್ಯಾಯಾಧೀಶೆ ಭಾರತಿ ರಾಯಣ್ಣವರ್ ಕರೆ ನೀಡಿದರು.
ತಾಲೂಕಿನ ಸಾಲಗುಂದಾದಲ್ಲಿ ಇತ್ತೀಚೆಗೆ ಕಾನೂನು ಕ್ಲಿನಿಕ್ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಗ್ರಾಮಸ್ಥರು ವಿವಿಧ ಇಲಾಖೆಗಳಿಂದ ದೊರೆಯುವ ಸೌಲಭ್ಯಗಳ ಬಗ್ಗೆ ಸಮರ್ಪಕ ಮಾಹಿತಿ ಪಡೆದುಕೊಳ್ಳಬೇಕು. ಆಯಾ ಗ್ರಾಮಗಳ ವಕೀಲರು ಗ್ರಾಮಸ್ಥರಿಗೆ ಮಾಹಿತಿ ನೀಡಬೇಕು ಎಂದು ಹೇಳಿದರು.
ಅಧ್ಯಕ್ಷತೆಯನ್ನು ವಕೀಲರ ಸಂಘದ ಅಧ್ಯಕ್ಷ ಕೆ. ಭೀಮನಗೌಡ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ತಾ.ಪಂ. ಸದಸ್ಯೆ ಗೌರಮ್ಮ, ಗ್ರಾಪಂ ಅಧ್ಯಕ್ಷೆ ಹುಲಿಗೆಮ್ಮ, ಉಪಾಧ್ಯಕ್ಷೆ ಈರಮ್ಮ, ಪಿಡಿಒ ಪೂರ್ಣಿಮಾ, ಕಾನೂನು ಸಲಹೆ ಸಮಿತಿ ಸದಸ್ಯರಾದ ಖಾಜಿ ಮಲಿಕ್, ಜಡಿಯಪ್ಪ ಹೂಗಾರ, ವೀರಭದ್ರಗೌಡ, ರಾಮು, ತಿಮ್ಮಣ್ಣ ದಾಸರ, ಹಾಜರಿದ್ದರು.