ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ರಾಯಚೂರು

ಸೌಹಾರ್ದತೆಯಿಂದ ಸಂಕ್ರಾಂತಿ, ಈದ್ ಮಿಲಾದ್ ಆಚರಿಸಿ

Rashmi Kasaragodu
Updated On : 12 Jan 2014, 1:18 am

ಸಿಂಧನೂರು: ಈದ್ ಮಿಲಾದ್ ಮತ್ತು ಸಂಕ್ರಾಂತಿ ಹಬ್ಬವನ್ನು ಜ.14ರಂದು ಶಾಂತಿ- ಸೌಹಾರ್ದತೆಯಿಂದ ಆಚರಿಸುವ ಮೂಲಕ ತಾಲೂಕಿನಲ್ಲಿ ಪ್ರೀತಿ- ವಿಶ್ವಾಸ ಬೆಸೆಯಲು ಸಹಕರಿಸುವಂತೆ ತಹಸೀಲ್ದಾರ್ ವೆಂಕನಗೌಡ ಪಾಟೀಲ್ ಮನವಿ ಮಾಡಿದರು.
ನಗರದ ಪೊಲೀಸ್ ಠಾಣೆಯ ಆವರಣದಲ್ಲಿ ಏರ್ಪಡಿಸಿದ್ದ ಶಾಂತಿಸಭೆಯಲ್ಲಿ ಮಾತನಾಡಿ, ಜಮಾಅತೆ ಇಸ್ಲಾಮಿ ಹಿಂದ್ ಮುಖಂಡ ಲಾಲ್ ಹುಸೇನ್ ಕಂದಗಲ್ ಮಾತನಾಡಿ, ಎಲ್ಲ ಧರ್ಮಗಳು ಪ್ರೀತಿ ಮತ್ತು ಮಾನವ ಪ್ರೇಮದ ಸಂದೇಶವನ್ನೇ ಸಾರಿವೆ. ಕೆಲವೇ ಕೆಲವು ಸ್ವಾರ್ಥಪರ ವ್ಯಕ್ತಿಗಳಿಂದ ಆಗಾಗ್ಗೆ ಅಹಿತಕರ ಘಟನೆಗಳು ಸಂಭವಿಸುತ್ತವೆ ಎಂದರು.
ಎಲ್ಲರ ಉದ್ಘಾರ ಬಯಸಿದ್ದ ಪೈಗಂಬರ್: ಈದ್ಮಿಲಾದ್ ಹಬ್ಬವು ಮಾನವೀಯತೆ, ನೈತಿಕತೆ ಮತ್ತು ಮನುಕುಲದ ಏಳ್ಗೆಯ ಸಂದೇಶವನ್ನು ನೀಡುತ್ತದೆ. ಮಹ್ಮದ್ ಪೈಗಂಬರರು ಯಾವುದೇ ಒಂದು ಧರ್ಮದ ಜನತೆಯ ಉದ್ಧಾರವನ್ನು ಬಯಸದೇ ಎಲ್ಲ ಮನುಷ್ಯರ ಕಲ್ಯಾಣವನ್ನು ಬಯಸಿದ್ದಾರೆ ಎಂದು ವಿವರಿಸಿದರು.
ಶಹರ್ ಪೊಲೀಸ್ ಠಾಣೆಯ ಪಿಎಸ್ಐ ಬಾಳನಗೌಡ ಮಾತನಾಡಿ, ಶಾಂತಿ- ಸಾಮರಸ್ಯ ಕಾಪಾಡುವ ನಿಟ್ಟಿನಲ್ಲಿ ವಿವಿಧ ಸಮಾಜದ ಮುಖಂಡರು ಯುವಕರಿಗೆ ತಿಳಿಹೇಳುವಂತೆ ಮನವಿ ಮಾಡಿದರು.
ಬಿಜೆಪಿ ಪ್ರಧಾನ ಕಾರ್ಯದರ್ಶಿ ಮಧ್ವರಾಜ್ ಆಚಾರ್ಯ, ಕೆಕೆಎನ್ಎಸ್ಎಸ್ ಮುಖಂಡ ಸಬ್ಜಲಿಸಾಬ, ಜಿಲಾನಿಪಾಷಾ ವಕೀಲರು, ಬಾಬರ್ಪಾಷಾ ವಕೀಲರು, ನಗರಸಭೆ ಮಾಜಿ ಉಪಾಧ್ಯಕ್ಷ ಎಂ.ಡಿ. ನದೀಮುಲ್ಲಾ ಮತ್ತಿತರರು ಮಾತನಾಡಿದರು. ನಗರಸಭೆ ಮಾಜಿ ಉಪಾಧ್ಯಕ್ಷ ಜಿಲಾನಿಪಾಷಾ, ನಗರ ಯೋಜನಾ ಪ್ರಾಧಿಕಾರದ ಮಾಜಿ ಅಧ್ಯಕ್ಷ ಸೈಯ್ಯದ್ ಮೆಹೆಬೂಬ ಹುಸೇನಿ ಮಿಟ್ಟಿಮನಿ ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement