ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ರಾಯಚೂರು

ಸ್ಕೌಟ್ಸ್; ರಾಜ್ಯಪಾಲರ ಪುರಸ್ಕಾರಕ್ಕೆ ಆಹ್ವಾನ

Rashmi Kasaragodu
Updated On : 12 Jan 2014, 1:15 am

ರಾಯಚೂರು: ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ವತಿಯಿಂದ 2014ನೇ ಸಾಲಿಗೆ ರಾಜ್ಯಪಾಲರ ಪುರಸ್ಕಾರಕ್ಕೆ ಕಬ್ಸ್, ಬುಲ್ ಬುಲ್, ಸ್ಕೌಟ್ ಮತ್ತು ಗೈಡ್ಸ್ ರೋವರ್ ರೇಂಜರ್ಗಳಿಂದ ಅರ್ಜಿ ಆಹ್ವಾನಿಸಲಾಗಿದೆ. ಅರ್ಜಿ ಸಲ್ಲಸುವ ವೇಳೆ ಕಬ್ಸ್ ಮತ್ತು ಬುಲ್ಬುಲ್ಗಳಿಗೆ 7ವರ್ಷ ಪೂರ್ಣಗೊಂಡಿರಬೇಕು. ಸ್ಕೌಟ್ಸ್ ಮತ್ತು ಗೈಡ್ಗಳಿಗೆ 13 ವರ್ಷ ಮೀರಿರಬೇಕು. ಜಿಲ್ಲಾ ಮಟ್ಟದಲ್ಲಿ ನಡೆಸಿದ ಸೋಪಾನ ಪರೀಕ್ಷೆ ಶಿಬಿರದಲ್ಲಿ ಮೂರು ದಿನ ಭಾಗವಹಿಸಿ ಪದಕ ಪಡೆದವರು ಪ್ರಮಾಣ ಪತ್ರದ ನಕಲು ಪ್ರತಿ ಅರ್ಜಿಯೊಂದಿಗೆ ಸಲ್ಲಿಸಬೇಕು. ಒಂದು ಘಟಕದಿಂದ 8 ಅರ್ಜಿಗಳನ್ನು ಮಾತ್ರ ಸಲ್ಲಿಸಬಹುದು. ಅರ್ಜಿ ಸಲ್ಲಿಸಲು ಜ.25 ಕಡೆಯ ದಿನವಾಗಿದೆ. ಈ ಕುರಿತು ಹೆಚ್ಚಿನ ಮಾಹಿತಿಗೆ ಜಿಲ್ಲಾ ಸಂಘಟನಾ ಆಯುಕ್ತರನ್ನು 084539 42474 ಇಲ್ಲಿಗೆ ಸಂಪರ್ಕಿಸಲು ಕೋರಲಾಗಿದೆ.


Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement