ಆರ್ಟಿಇ ಅರ್ಜಿಗಾಗಿ ಪಾಲಕರ ಪರದಾಟ
ಕ.ಪ್ರ. ವಾರ್ತೆ ಲಿಂಗಸ್ಗೂರು ಜ.11
ಸರ್ಕಾರ ಮಕ್ಕಳ ಶಿಕ್ಷಣ ಹಕ್ಕು (ಆರ್ಟಿಇ) ಕಾಯ್ದೆಯಡಿ ಖಾಸಗಿ ಶಾಲೆಗಳಲ್ಲಿ ಮಕ್ಕಳು ಪ್ರವೇಶ ಹೊಂದಿ ಉಚಿತ ಶಿಕ್ಷಣ ಪಡೆಯಲು ಅವಕಾಶ ಕಲ್ಪಿಸಿದೆ. ಆದರೆ ಶಿಕ್ಷಣ ಇಲಾಖೆ ಆರ್ಟಿಇ ಅರ್ಜಿಗಳನ್ನು ವಿತರಿಸದ ಪರಿಣಾಮ ಪಾಲಕರು ಖಾಸಗಿ ಅಂಗಡಿಗಳ ಮೊರೆ ಹೋಗುತ್ತಿರುವುದು ವಿಪರ್ಯಾಸ.
2009ರ ಮಕ್ಕಳ ಶಿಕ್ಷಣ ಹಕ್ಕು ಕಾಯ್ದೆ ಅನ್ವಯ ಮಕ್ಕಳು ಖಾಸಗಿ ಶಾಲೆಗಳಲ್ಲಿ ಉಚಿತ ಶಿಕ್ಷಣ ಪಡೆಯಲು ಪಾಲಕರು ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿಗೆ ಆಗಮಿಸಿ ಆರ್ಟಿಇ ಅರ್ಜಿ ಪಡೆಯುವಂತೆ ಪ್ರಕಟಣೆ ಹೊರಡಿಸಿದೆ. ಆದರೆ ಕಚೇರಿಗೆ ಆಗಮಿಸುವ ಪಾಲಕರಿಗೆ ಅರ್ಜಿಗಳು ಇನ್ನು ಬಂದಿಲ್ಲವೆಂದು ಹೇಳಿ ಕಳುಹಿಸುತ್ತಿದ್ದಾರೆ. ಖಾಸಗಿ ಜೆರಾಕ್ಸ್ ಅಂಗಡಿಗಳಲ್ಲಿ ಅರ್ಜಿಗಳು ದೊರೆಯುತ್ತಿರುವ ಪ್ರಯುಕ್ತ, ಪಾಲಕರು ಖಾಸಗಿ ಅಂಗಡಿಗಳಿಗೆ ಅರ್ಜಿ ಪಡೆಯಲು ಮುಗಿಬಿದ್ದಿದ್ದಾರೆ.
ಪೂರ್ವ ಪಾಥಮಿಕ ಶಾಲೆಗಳು: ಮಸ್ಕಿ ಹೋಲಿಪೇಥ ಶಾಲೆಯಲ್ಲಿ 16 ಸ್ಥಾನ ಮೀಸಲಾತಿ, ಅದರಂತೆ ಧರ್ಮಸ್ಥಳ ಮಂಜುನಾಥ ಶಾಲೆಯಲ್ಲಿ 17 ಸ್ಥಾನ, ಪೂರ್ವ ಪ್ರಾಥಮಿಕ ಶಾಲೆಗಳು, ಹಟ್ಟಿ ಗ್ರಾಮದ ವಿನಾಯಕ ಶಾಲೆಯಲ್ಲಿ 13 ಸ್ಥಾನ, ಡಾ.ಇ.ಎ. ಸೀಮಂಡ್ಸ್ ಶಾಲೆಯಲ್ಲಿ 15 ಸ್ಥಾನ, ರೋಡಲಬಂಡಾ ಕ್ಯಾಂಪ್ನ ಆಕ್ಸ್ಫರ್ಡ್ ಶಾಲೆಯಲ್ಲಿ 15 ಸ್ಥಾನ, ಆನ್ವರಿಯ ಶಾರದಾ ಶಾಲೆಯಲ್ಲಿ 8 ಸ್ಥಾನ, ಆನೆಹೊಸೂರಿನ ಡಿ.ದೇವರಾಜ ಅರಸು ಸ್ಮಾರಕ ಶಾಲೆಯಲ್ಲಿ 15 ಸ್ಥಾನ ಸೇರಿದಂತೆ ಪೂರ್ವ ಪ್ರಾಥಮಿಕ ಶಾಲೆಗಳ ಒಟ್ಟು 393 ಮಕ್ಕಳ ಸಂಖ್ಯೆಯಲ್ಲಿ ಸರ್ಕಾರದ ಶೇ. 25ರ ಮೀಸಲಾತಿ ಪ್ರಕಾರ 99 ಸ್ಥಾನಗಳನ್ನು ಮೀಸಲಿರಿಸಲಿವೆ.
ಪ್ರಾಥಮಿಕ ಶಾಲೆಗಳು: ಲಿಂಗಸ್ಗೂರು ಪಟ್ಟಣದ ಜ್ಞಾನಗಂಗಾ ಶಾಲೆಯಲ್ಲಿ 7 ಸ್ಥಾನ, ಕೇಂಬ್ರಿಡ್ಜ್ ಶಾಲೆಯಲ್ಲಿ 25 ಸ್ಥಾನ, ಅಮರೇಶ್ವರ ಶಾಲೆಯಲ್ಲಿ 6 ಸ್ಥಾನ, ಜ್ಞಾನ ಸಂಜೀವಿನಿ ಶಾಲೆಯಲ್ಲಿ 13 ಸ್ಥಾನ, ಸಂಜೀವ ಪಬ್ಲಿಕ್ ಶಾಲೆಯಲ್ಲಿ 8 ಸ್ಥಾನ, ಉಟಗನೂರು ಬಸವಲಿಂಗ ತಾತ ಶಾಲೆಯಲ್ಲಿ 4 ಸ್ಥಾನ, ಅಕ್ಷರ ಪಬ್ಲಿಕ್ ಶಾಲೆಯಲ್ಲಿ 13 ಸ್ಥಾನ, ಸಿದ್ಧರಾಮೇಶ್ವರ ಶಾಲೆಯಲ್ಲಿ 9 ಸ್ಥಾನ, ಆರೂಢ ಜ್ಯೋತಿ, ಆಕ್ಸ್ಫರ್ಡ್ ಶಾಲೆಯಲ್ಲಿ 2 ಸ್ಥಾನ, ಪಾಟೀ ಲ್ ಬಯ್ಯಾಪುರ (ಸಿಬಿಎಸ್ಸಿ) ಶಾಲೆಯಲ್ಲಿ 15 ಸ್ಥಾನ ಮೀಸಲಿವೆ.
ಹಟ್ಟಿ ಶರಣ ಬಸವೇಶ್ವರ ಶಾಲೆಯಲ್ಲಿ 5 ಸ್ಥಾನ, ಬುದ್ಧ ಸ್ಮಾರಕ ಶಾಲೆಯಲ್ಲಿ 7 ಸ್ಥಾನ, ಪೂರ್ಣಪ್ರಜ್ಞಾ ಶಾಲೆಯಲ್ಲಿ 3ಸ್ಥಾನ, ಸಿದ್ಧಾರೂಢ ಶಾಲೆಯಲ್ಲಿ 13ಸ್ಥಾನ, ಶೇಖಮ್ಮ ನಾರಾಯಣ ಶಾಲೆಯಲ್ಲಿ 9 ಸ್ಥಾನ, ವೆಸ್ಲಿ ಮೆಮೋರಿಯಲ್ ಶಾಲೆಯಲ್ಲಿ 8 ಸ್ಥಾನ, ಸ್ವಾಮಿ ವಿವೇಕಾನಂದ ಶಾಲೆಯಲ್ಲಿ 3 ಸ್ಥಾನ, ಲಿಟ್ಲ್ ಏಂಜಲ್ ಶಾಲೆಯಲ್ಲಿ 20 ಸ್ಥಾನ ಮೀಸಲಿವೆ. ಮುದಗಲ್ನ ಸಹನಾ ಶಾಲೆಯಲ್ಲಿ 6 ಸ್ಥಾನ, ಸೆಕ್ರೆಸ್ ಹಾರ್ಟ್ ಶಾಲೆಯಲ್ಲಿ 18 ಸ್ಥಾನ, ಶಾಂತಿ ನಿಕೇತನ ಶಾಲೆಯಲ್ಲಿ 12 ಸ್ಥಾನ, ಸಜ್ಜಲಶ್ರೀ ಶಾಲೆಯಲ್ಲಿ 7 ಸ್ಥಾನ, ವಿ.ಸಿ.ಪಾಟೀಲ್ ಶಾಲೆಯಲ್ಲಿ 19 ಸ್ಥಾನ ಮೀಸಲಿವೆ. ಆಮದಿಹಾಳ ಗ್ರಾಮದ ಸ್ವಾಮಿ ವಿವೇಕಾನಂದ ಶಾಲೆಯಲ್ಲಿ 9 ಸ್ಥಾನ, ವಿದ್ಯಾ ಭಾರತಿ ಶಾಲೆಯಲ್ಲಿ 4 ಸ್ಥಾನ ಮೀಸಲಿವೆ.
ಮಸ್ಕಿಯ ಲಯನ್ಸ್ ಶಾಲೆಯಲ್ಲಿ 8 ಸ್ಥಾನ, ಸಿದ್ಧಾರ್ಥ ಶಾಲೆಯಲ್ಲಿ 7 ಸ್ಥಾನ, ಶಾರದಾ ಶಾಲೆಯಲ್ಲಿ 15 ಸ್ಥಾನ, ಸರಸ್ವತಿ ಶಾಲೆಯಲ್ಲಿ 8 ಸ್ಥಾನ, ಗವಿಶರಣಂ ಶಾಲೆಯಲ್ಲಿ 8 ಸ್ಥಾನ, ಶರಣಬಸವೇಶ್ವರ ಶಾಲೆಯಲ್ಲಿ 4 ಸ್ಥಾನ, ಸೇಂಟ್ ಜಾನ್ಸ್ ಶಾಲೆಯಲ್ಲಿ 10 ಸ್ಥಾನ, ಬಿಎಂಎಲ್ ಶಾಲೆಯಲ್ಲಿ 9 ಸ್ಥಾನ, ರವೀಂದ್ರನಾಥ ಟ್ಯಾಗೋರ್ ಶಾಲೆಯಲ್ಲಿ 1 ಸ್ಥಾನ, ಬಸವೇಶ್ವರ ಶಾಲೆಯಲ್ಲಿ 4 ಸ್ಥಾನ ಮೀಸಲಿವೆ. ಗುರುಗುಂಟಾದ ಮಹಾಲಿಂಗಸ್ವಾಮಿ ರಾಜಗುರು ಶಾಲೆಯಲ್ಲಿ 8 ಸ್ಥಾನ, ಉಟಗನೂರು ಬಸವಲಿಂಗ ತಾತ ಶಾಲೆಯಲ್ಲಿ 5 ಸ್ಥಾನ, ಮೌಂಟ್ ಕಾರ್ಮೆಲ್ ಶಾಲೆಯಲ್ಲಿ 10 ಸ್ಥಾನ ಮೀಸಲಿವೆ. ಸ್ಥಾನಗಳು ಕರಡಕಲ್ನ ವಿಜಯಮಹಾಂತೇಶ್ವರ ಶಾಲೆಯಲ್ಲಿ 7 ಸ್ಥಾನ, ಕಸಬಾಲಿಂಗಸ್ಗೂರು ಶಿವಲಿಂಗಯ್ಯ ಕಲ್ಮಠ ಶಾಲೆಯಲ್ಲಿ 8 ಸ್ಥಾನ, ಖೈರವಾಡಗಿಯ ಪಾರ್ವತಮ್ಮ ಸ್ಮಾರಕ ಶಾಲೆಯಲ್ಲಿ 5 ಸ್ಥಾನ, ನಾಗರಹಾಳದ ಕಾಡಸಿದ್ದೇಶ್ವರ ಶಾಲೆಯಲ್ಲಿ 5 ಸ್ಥಾನ, ವಿದ್ಯಾಚೇತನ ಶಾಲೆ ತುಂಬಲಗಡ್ಡಿಯಲ್ಲಿ 8 ಸ್ಥಾನ, ಸಂತೆಕಲ್ಲೂರಿನ ಘನಮಠೇಶ್ವರ ಶಾಲೆಯಲ್ಲಿ 7 ಸ್ಥಾನ, ಆನೆಹೊಸೂರಿನ ಜನನಿ ಶಾಲೆಯಲ್ಲಿ 10 ಸ್ಥಾನ, ಮೆದಕಿನಾಳದ ವಿವೇಕಾನಂದ ಶಾಲೆಯಲ್ಲಿ 3 ಸ್ಥಾನ, ನಾಗಲಾಪೂರದ ಕಾವ್ಯ ಶಾಲೆಯಲ್ಲಿ 5 ಸ್ಥಾನಗಳು ಮೀಸಲಿವೆ.
ಪೂರೈಕೆ ಮಾಡಿಲ್ಲ: 2014-15ನೇ ಸಾಲಿನಲ್ಲಿ ತಾಲೂಕಿನಲ್ಲಿ ಒಟ್ಟು 48 ಕಿರಿಯ ಮತ್ತು ಹಿರಿಯ ಪ್ರಾಥಮಿಕ ಶಾಲೆಗಳಿದ್ದು, ಮಕ್ಕಳ ಶಿಕ್ಷಣ ಹಕ್ಕು ಅಧಿನಿಯಮದ ಮೀಸಲಾತಿ ಪ್ರಕಾರ 409 ಮಕ್ಕಳು ಉಚಿತ ಶಿಕ್ಷಣ ಪಡೆಯಲು ಅವಕಾಶ ದೊರಯಲಿದೆ. ಇದೆ ಜ.17 ರಿಂದ ಫೆ.18 ರವರೆಗೆ ಅರ್ಜಿ ಪಡೆಯಲು ಕಾಲಾವಕಾಶ ಕಲ್ಪಿಸಲಾಗಿದೆ. ಶಿಕ್ಷಣ ಇಲಾಖೆ ಕಚೇರಿಯಲ್ಲಿ ಅರ್ಜಿಗಳು ಉಚಿತವಾಗಿ ಪಡೆದುಕೊಳ್ಳಿ ಎಂದು ಹೇಳುವ ಅಧಿಕಾರಿಗಳು, ಪಾಲಕರು ಅರ್ಜಿ ಪಡೆಯಲು ಬಂದರೆ ಸರ್ಕಾರ ಅರ್ಜಿಗಳನ್ನು ಪೂರೈಕೆ ಮಾಡಿಲ್ಲ.
ಇಂಟರ್ನೆಟ್ ಮೂಲಕ ಡೌನ್ಲೋಡ್ ಮಾಡಿ ಆಯಾ ಶಾಲೆಗಳ ಮುಖ್ಯ ಶಿಕ್ಷಕರಿಗೆ ನೀಡಲಾಗುತ್ತದೆ ಎಂದು ಹೇಳಿ ಕಳುಹಿಸಲಾಗುತ್ತಿದೆ.
ಆದರೆ ಖಾಸಗಿ ಅಂಗಡಿಗಳಲ್ಲಿ ಅರ್ಜಿಗಳು ದೊರೆಯುತ್ತಿದ್ದು, ಪ್ರತಿ ಅರ್ಜಿಗೆ ರು. 26 ಪಡೆಯಲಾಗುತ್ತಿದೆ ಎಂಬ ಆರೋಪ ಕೇಳಿ ಬರುತ್ತಿವೆ. ಶಿಕ್ಷಣ ಇಲಾಖೆ ಕೂಡಲೇ ಎಚ್ಚೆತ್ತುಕೊಂಡು ಮಕ್ಕಳ ಶಿಕ್ಷಣ ಹಕ್ಕಿನಡಿ ಖಾಸಗಿ ಪ್ರಾಥಮಿಕ ಶಾಲೆಗಳಲ್ಲಿ ಮಕ್ಕಳು ಪ್ರವೇಶ ಹೊಂದಿ ಉಚಿತ ಶಿಕ್ಷಣ ಪಡೆಯಲು ಬೇಕಾದ ಅಗತ್ಯ ಅರ್ಜಿಗಳನ್ನು ನಿಗದಿತ ಅವಧಿಯೊಳಗೆ ವಿತರಿಸಲು ಅನುಕೂಲ ಕಲ್ಪಿಸಬೇಕೆಂಬುದು ಪಾಲಕರ ಒತ್ತಾಸೆಯಾಗಿದೆ.