ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ರಾಯಚೂರು

ಕೈದಿಗಳ ಸನ್ನಡತೆ: ಅರ್ಜಿ ಸಲ್ಲಿಸಲು ಕರೆ

Lingaraj Badiger
Updated On : 13 Jan 2014, 11:20 am

ರಾಯಚೂರು: ಮಹಿಳೆ ಮತ್ತು ಮಕ್ಕಳ ಮೇಲೆ ಅಪರಾಧ ಎಸಗಿ ಶಿಕ್ಷೆ ಅನುಭವಿಸುವವರನ್ನು ಹೊರತುಪಡಿಸಿ ಇನ್ನುಳಿದ ಪ್ರಕರಣಗಳಲ್ಲಿ ಏಳು ವರ್ಷಗಳಿಗಿಂತ ಕಡಿಮೆ ಅವಧಿಯ ಶಿಕ್ಷೆ ಅನುಭವಿಸುತ್ತಿರುವವರು ಒಳ್ಳೆಯ ನಡತೆ, ಸದ್ಬುಣಗಳ ಆಧಾರದಲ್ಲಿ ಶಿಕ್ಷೆಯ ಅವಧಿ ಕಡಿತಗೊಳಿಸುವಂತೆ ಕೋರಲು ಕಾನೂನಿನಲ್ಲಿ ಅವಕಾಶವಿದೆ ಎಂದು ಜಿಲ್ಲಾ ಪ್ರಧಾನ ಮತ್ತು ಸತ್ರ ನ್ಯಾಯಾಧೀಶ ಪಿ.ಜಿ.ಎಂ. ಪಾಟೀಲ್ ಸಲಹೆ ನೀಡಿದರು.
ಅವರು ನಗರದ ಜಿಲ್ಲಾ ಕಾರಾಗೃಹದಲ್ಲಿ ಈಚೆಗೆ ಆಯೋಜಿಸಿದ್ದ ಪ್ಲೀ ಬಾರ್ಗೆನಿಂಗ್ ಕುರಿತ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿ, ಆರೋಪಿ ತನ್ನ ವಕೀಲರು ಅಥವಾ ಖುದ್ದಾಗಿ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿ ಸನ್ನಡತೆ ಸಾಬೀತುಪಡಿಸಿದಲ್ಲಿ ಅಂಥವರ ಪ್ರಕರಣಗಳನ್ನು ಪರೀಕ್ಷಿಸುವ ನ್ಯಾಯಾಲಯವು ಆರೋಪಿ ತನ್ನ ಅಪರಾಧ ಒಪ್ಪಿಕೊಂಡು ಮನವಿ ಸಲ್ಲಿಸಿದಾಗ  ಶಿಕ್ಷೆ ಕಡಿತ ಸಾಧ್ಯ ಇರುತ್ತದೆ ಎಂದರು.
ವಕೀಲರ ನೆರವು: ಎಲ್ಲ ಆರೋಪಿಗಳು ಅಪರಾಧಿಗಳಲ್ಲ. ಆದರೆ ಅವರ ಆರೋಪಗಳು ದೃಢಪಟ್ಟಲ್ಲಿ, ಅವರು ಅಪರಾಧಿಗಳಾಗುತ್ತಾರೆ. ಅರೋಪಿಯನ್ನು ಪೊಲೀಸ್ ಠಾಣೆಯಲ್ಲಿ ಕರೆತಂದಾಗ ಅವರು ವಕೀಲರನ್ನು ನೇಮಿಸಿಕೊಂಡು ಸಲಹೆ ಪಡೆಯಬಹುದಾಗಿದೆ. ಬಂಧಿತ ವ್ಯಕ್ತಿಯನ್ನು ದಸ್ತಗಿರಿ ಮಾಡಿದ 24 ಗಂಟೆಯೊಳಗೆ ನ್ಯಾಯಾಧೀಶರ ಮುಂದೆ ಹಾಜರುಪಡಿಸಬೇಕು. ಇಲ್ಲವಾದಲ್ಲಿ ಅದು ಕಾನೂನಿನ ಉಲ್ಲಂಘನೆಯಾಗುತ್ತದೆ ಎಂದರು.
ಸಂಧಾನಕ್ಕೆ ಅವಕಾಶ: ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಹಾಗೂ ಹಿರಿಯ ವ್ಯವಹಾರಿಕ ನ್ಯಾಯಾಧೀಶ ಮಹಮ್ಮದ್ ಮುಜಾಹಿದ್ ಉಲ್ಲಾ ಮಾತನಾಡಿ, ಪ್ಲೀ ಬಾರ್ಗೆನಿಂಗ್ ಕಾಯಿದೆಯಲ್ಲಿ ಸಂಧಾನಕ್ಕೆ ಅವಕಾಶ ಕಲ್ಪಿಸಲಾಗಿದೆ. ಪ್ರಾಧಿಕಾರಕ್ಕೆ ಅರ್ಜಿ ಸಲ್ಲಿಸುವ ಮೂಲಕ ಕಾನೂನುಬದ್ಧವಾಗಿ ಪರಿಹಾರ ಒದಗಿಸಲು ಪ್ರಾಧಿಕಾರ ಶ್ರಮಿಸುತ್ತದೆ ಎಂದರು. ಮುಖ್ಯ ಅತಿಥಿಗಳಾಗಿ ವಕೀಲರಾದ ಎನ್. ವಾಹೀದ್, ಎಸ್. ಬಸಪ್ಪ ಮಾತನಾಡಿದರು. ಅಧ್ಯಕ್ಷತೆ ವಹಿಸಿ ಜೈಲಿನ ಅಧೀಕ್ಷಕ ಡಾ.ಐ.ಜಿ. ಮ್ಯಾಗೇರಿ ಮಾತನಾಡಿದರು. ಪ್ರಭುದೇವ ಪಾಟೀಲ್, ಬಸವರಾಜ ನಾಯಕ, ಕಾಡ್ಲೂರು ದೇಸಾಯಿ, ಇತರ ಅಧಿಕಾರಿಗಳಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement