ಕನಕ ಗುರುಪೀಠದ ಅಭಿವೃದ್ಧಿಗೆ 1 ಕೋಟಿ
ಕ.ಪ್ರ. ವಾರ್ತೆ ದೇವದುರ್ಗ್ಣ ಜ.13
ಕಾಗಿನೆಲೆ ಮಹಾಸಂಸ್ಥಾನ ಕನಕಗುರು ಪೀಠದ ಗುಲ್ಬರ್ಗ ವಿಭಾಗದ ವೀರಗೋಟ ಶಾಖೆಯ ಅಭಿವೃದ್ಧಿಗೆ ಸರ್ಕಾರದಿಂದ 1 ಕೋಟಿ ಅನುದಾನ ಒದಗಿಸುವುದಾಗಿ ಸಮಾಜ ಕಲ್ಯಾಣ ಸಚಿವ ಎಚ್.ಆಂಜನೇಯ ಭರವಸೆ ನೀಡಿದರು.
ವೀರಗೋಟದಲ್ಲಿ ಸೋಮವಾರ ಕಾಗಿನೆಲೆ ಮಹಾಸಂಸ್ಥಾನ ಕನಕ ಗುರುಪೀಠದಿಂದ ಆಯೋಜಿಸಿದ್ದ ಹಾಲುಮತ ಸಂಸ್ಕೃತಿ ವೈಭವ- 2014ಕ್ಕೆ ಡೊಳ್ಳು ಬಾರಿಸುವ ಮೂಲಕ ಚಾಲನೆ ನೀಡಿ, ಕಾಗಿನೆಲೆ ಮೂಲಪೀಠಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಸರ್ಕಾರದಿಂದ ಕೋಟ್ಯಂತರ ವೆಚ್ಚದಲ್ಲಿ ಶೈಕ್ಷಣಿಕ ಪ್ರಗತಿಗೆ ಕ್ರಮ ಕೈಗೊಂಡಿದೆ ಎಂದು ಹೇಳಿದರು.
ಪ್ರತಿ ಕುರಿಗೆ 3 ಸಾವಿರ ಪರಿಹಾರ: ಕುರಿಗಳ ರಕ್ಷಣೆಗಾಗಿ ಪಶು ಆಸ್ಪತ್ರೆಗಳು, ಕುರಿಗಳು ಮೃತಪಟ್ಟರೆ ಪರಿಹಾರವಾಗಿ ಪ್ರತಿ ಕುರಿಗೆ 3 ಸಾವಿರ ನೀಡಲಾಗುತ್ತಿದೆ. ಹಾಲುಮತದ ಸಮಾಜದ ಸಮಗ್ರ ಪ್ರಗತಿಗೆ ಸರಕಾರ ಸಂಪೂರ್ಣ ಸಹಕಾರ ನೀಡಲಿದೆ. ಕನಕ ಗುರುಪೀಠದ ಅಭಿವೃದ್ಧಿಗೂ ಸರ್ಕಾರ ನೆರವು ನೀಡಲಿದೆ ಎಂದು ಹೇಳಿದರು.
ಈ ಸಂದರ್ಭ ಮಾಜಿ ಸಚಿವ ಎಚ್.ಎಂ. ರೇವಣ್ಣ, ಕೆಪಿಎಸ್ಸಿ ಸದಸ್ಯ ಎಚ್.ಡಿ. ಪಾಟೀಲ್ ಮಾತನಾಡಿದರು.
ಸಮಾರಂಭದ ಸಾನ್ನಿಧ್ಯವನ್ನು ಕನಕಗುರುಪೀಠದ ಸಿದ್ದರಾಮಾನಂದ ಸ್ವಾಮೀಜಿ ವಹಿಸಿದ್ದರು. ಕೆ.ಆರ್.ನಗರದ ಶಿವಾನಂದಪುರಿ ಸ್ವಾಮೀಜಿ, ಕಾಗಿನೆಲೆಯ
ನಿರಂಜನಾನಂದಪುರಿ ಸ್ವಾಮೀಜಿ, ಈಶ್ವರಾನಂದಪುರಿ ಸ್ವಾಮೀಜಿ, ಶಾಸಕರಾದ ಎ.ವೆಂಕಟೇಶ ನಾಯಕ, ಪ್ರತಾಪಗೌಡ ಪಾಟೀಲ್, ಮಾಜಿ ಸಚಿವ ಅಮರೇಗೌಡ ಬಯ್ಯಾಪೂರ, ಆರ್ಡಿಸಿಸಿ ಬ್ಯಾಂಕಿನ ಅಧ್ಯಕ್ಷ ಎ.ರಾಜಶೇಖರ ನಾಯಕ, ಜಿಪಂ ಸದಸ್ಯ ಶಿವಣ್ಣ ತಾತಾ, ಕುರುಬ ಸಮಾಜ ತಾಲೂಕು ಅಧ್ಯಕ್ಷ ಚಂದಪ್ಪ ಬುದ್ದಿನ್ನಿ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಭೀಮನಗೌಡ ನಾಗಡದಿನ್ನಿ, ಬಸ್ಸಯ್ಯ ಶಾಖೆ, ವಿ.ಎಂ. ಮೇಟಿ, ಲಿಂಗಪ್ಪ ನೀಲವಂಜಿ ಸೇರಿ ಅನೇಕರಿದ್ದರು.