ಮುಖ್ಯಮಂತ್ರಿಯಿಂದ ಉತ್ತಮ ಕಾರ್ಯ; ಶರಣರ ಮೆಚ್ಚುಗೆ
ದೇವದುರ್ಗ: ರಾಜ್ಯದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಅಹಿಂದ ಹಿನ್ನೆಲೆಯುಳ್ಳವರಾಗಿದ್ದು, ಅವರು ಸಮಾಜದ ಕೆಳವರ್ಗದವರ ಪರ ನಿಲುವು ಹೊಂದಿದ್ದಾರೆ. ಅವರು ಜನಪರ ಕಾರ್ಯಕ್ರಮಗಳನ್ನು ಜಾರಿಗೆ ತರುತ್ತಿದ್ದು ಅವರಿಗೆ ಬೆಂಬಲ ನೀಡುವಂತೆ ಚಿತ್ರದುರ್ಗದ ಶಿವಮೂರ್ತಿ ಮುರುಘರಾಜೇಂದ್ರ ಶರಣರು ಸಲಹೆ ನೀಡಿದರು. ತಾಲೂಕಿನ ವೀರಗೋಟದಲ್ಲಿ ಸೋಮವಾರ ಆರಂಭಗೊಂಡ ಹಾಲುಮತ ಸಂಸ್ಕೃತಿ ವೈಭವದ ಉದ್ಘಾಟನೆ ಸಮಾರಂಭದಲ್ಲಿ ಮಾತನಾಡಿ, ಸರ್ಕಾರ ಶೋಷಿತ, ಬಡವರ ಹಾಗೂ ಜನಸಾಮಾನ್ಯರ ಪರ ಯೋಜನೆ ಜಾರಿಗೆ ತರುತ್ತಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ನಾಡಿನಲ್ಲಿ ಮಠಗಳು ಸಾಕಷ್ಟು ಸಂಖ್ಯೆಯಲ್ಲಿವೆ. ಅವುಗಳಲ್ಲಿ ಹಾಲುಮತ ಸಮಾಜಕ್ಕೆ ತನ್ನದೇ ಆದ ಪರಂಪರೆಯಿದೆ. ಡೊಳ್ಳು ಕುಣಿತ ನಮ್ಮ ಸಂಸ್ಕೃತಿಯ ಪ್ರತೀಕವಾಗಿದೆ. ಇಂಥ ಸಮಾಜದಿಂದ ಬಂದಿರುವ ಸಿಎಂ ನಾಡಿನ ಸಮಗ್ರ ಪ್ರಗತಿಗೆ ಶ್ರಮಿಸುತ್ತಿದ್ದಾರೆಂದರು.