ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ರಾಯಚೂರು

ವಾರ್ಡ್ ಮಟ್ಟದ 'ತಿಳಿವಳಿಕೆ'

Rashmi Kasaragodu
Updated On : 14 Jan 2014, 11:54 am

ರಾಯಚೂರು: ನಗರದ 12ನೇ ವಾರ್ಡಿನಲ್ಲಿ ಇತ್ತೀಚೆಗೆ ಏಷ್ಯಿಯನ್ ಅಭಿವೃದ್ಧಿ ಬ್ಯಾಂಕ್ ನೆರವಿನ ಉತ್ತರ ಕರ್ನಾಟಕ ವಲಯ ಬಂಡವಾಳ ಹೂಡಿಕೆ ಕಾರ್ಯಕ್ರಮದ ನೀರು ಸರಬರಾಜು ಮತ್ತು ಒಳಚರಂಡಿ ಯೋಜನೆಯ ಕುರಿತು ಸಾರ್ವಜನಿಕರಿಗೆ ತಿಳಿವಳಿಕೆ ಕಾರ್ಯಕ್ರಮ ಆಯೋಜಿಸಲಾಗಿತ್ತು.
ಯೋಜನೆ ಅಧಿಕಾರಿ ದಯಾನಂದಕುಮಾರ್ ಮಾತನಾಡಿ, ನಗರದಲ್ಲಿ ಎಡಿಬಿ ನೆರವಿನ ಅಡಿ ಸಮುದಾಯ ಅಭಿವೃದ್ಧಿ ಕಾರ್ಯಕ್ರಮಗಳ ಬಗ್ಗೆ ವಾರ್ಡು ಮಟ್ಟದಲ್ಲಿ ಕುಡಿಯುವ ನೀರಿನ ಮಹತ್ವ ಮತ್ತು ಒಳಚರಂಡಿ ಬಳಕೆಯ ಮಹತ್ವದ ಕುರಿತು ಮಾಹಿತಿ ನೀಡಿದರು.
ಮುಖ್ಯ ಅತಿಥಿಯಾಗಿ ಜೆಡಿಎಸ್ ಮುಖಂಡ ಎನ್. ಮಹಾವೀರ್ ಮಾತನಾಡಿ, ನಗರದ ಪ್ರಗತಿಯಲ್ಲಿ ಸಾರ್ವಜನಿಕರ ಸಹಭಾಗಿತ್ವ ಅವಶ್ಯಕ. ಈ ನಿಟ್ಟಿನಲ್ಲಿ ನಗರದ ಸ್ವಚ್ಛತೆಯತ್ತ ಸಾರ್ವಜನಿಕರು ಹೆಚ್ಚು ಗಮನಹರಿಸಬೇಕು. ಹಾಗಾಗಿ ಒಳಚರಂಡಿ ಯೋಜನೆಯನ್ನು ಜಾರಿಗೊಳಿಸಲಾಗುತ್ತಿದೆ ಎಂದು ಹೇಳಿದರು. ಕಾರ್ಯಕ್ರಮವನ್ನು ನಗರಸಭೆ ಸದಸ್ಯ ನೂರಪಾಷಾ ಉದ್ಘಾಟಿಸಿದರು. ಸಭೆಯಲ್ಲಿ ಯೋಜನೆಯ ಸಹಾಯಕ ಎಂಜಿನಿಯರ್ ಅಶೋಕ ಚಾವಡಿ, ಮಹಿಳಾ ಸಂಘದ ಅಧ್ಯಕ್ಷೆ ಎಚ್. ಪದ್ಮಾ ಮಾತನಾಡಿದರು.
ನಗರಸಭೆ ಮಾಜಿ ಸದಸ್ಯ ಭೀಮಣ್ಣ ಕೆ.ಜಿ. ವೀರೇಶ್, ಕರುಣಕುಮಾರ್ ಸೇರಿ ವಾರ್ಡಿನ ಮುಖಂಡರು, ಅಂಗನವಾಡಿ ಕಾರ್ಯಕರ್ತೆಯರು ಮತ್ತಿತರರಿದ್ದರು.
2ನೇ ವಾರ್ಡ್ನಲ್ಲಿ: ನಗರದ 2ನೇ ವಾರ್ಡಿನಲ್ಲಿ ಈಚೆಗೆ ಏಷ್ಯಿಯನ್ ಅಭಿವೃದ್ಧಿ ಬ್ಯಾಂಕ್ ನೆರವಿನ  ಉತ್ತರ ಕರ್ನಾಟಕ ವಲಯ ಬಂಡವಾಳ ಹೂಡಿಕೆ ಕಾರ್ಯಕ್ರಮದ ನೀರು ಸರಬರಾಜು ಮತ್ತು ಒಳಚರಂಡಿ ಯೋಜನೆಯ ಕುರಿತು ಸಾರ್ವಜನಿಕರಿಗೆ ತಿಳಿವಳಿಕೆ ಕಾರ್ಯಕ್ರಮ ಆಯೋಜಿಸಲಾಗಿತ್ತು. ಯೋಜನೆ ಅಧಿಕಾರಿ ದಯಾನಂದಕುಮಾರ್ ಮಾತನಾಡಿದರು. ಮುಖ್ಯ ಅತಿಥಿ ಸಹಾಯಕ ಎಂಜಿನಿಯರ್ ಚಂದ್ರಶೇಖರ್ ಮಾತನಾಡಿದರು. ಕಾರ್ಯಕ್ರಮವನ್ನು ನಗರಸಭೆ ಸದಸ್ಯೆ ಮುತ್ತಮ್ಮ ಉದ್ಘಾಟಿಸಿದರು. ಸಭೆಯಲ್ಲಿ ಬಾಬುರಾವ್, ನಾಗರಾಜ್, ಈರಣ್ಣ ಸೇರಿದಂತೆ ವಾರ್ಡಿನ ಮುಖಂಡರು, ಅಂಗನವಾಡಿ ಕಾರ್ಯಕರ್ತೆಯರು ಮತ್ತಿತರರಿದ್ದರು.


Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement