ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ರಾಯಚೂರು

ನಾಳೆ ಲೋಹ ಸಂಗ್ರಹಣೆ ಕಾರ್ಯ

Rashmi Kasaragodu
Updated On : 15 Jan 2014, 1:17 am

ರಾಯಚೂರು: ದೇಶ ಕಂಡ ಮಹಾನ್ ಆಡಳಿತಗಾರ, ಉಕ್ಕಿನ ಮನುಷ್ಯರೆಂದೇ ಖ್ಯಾತಿಯಾಗಿದ್ದ ವಲ್ಲಭಬಾಯಿ ಪಟೇಲ್ ಅವರ ಪುತ್ಥಳಿ ಗುಜರಾತಿನಲ್ಲಿ ಸ್ಥಾಪಿಸಲಾಗುತ್ತಿದ್ದು, ಈ ಕಾರ್ಯಕ್ಕಾಗಿ ಜಿಲ್ಲೆಯ ಪ್ರತಿ ಪಂಚಾಯಿತಿ ಮಟ್ಟದಲ್ಲಿ ಲೋಹ ಮತ್ತು ಮಣ್ಣಿನ ಸಂಗ್ರಹ ಅಭಿಯಾನ ಜ.16ರಿಂದ 26ರವರೆಗೆ ಆಯೋಜಿಸಲಾಗಿದೆ. ವಲ್ಲಭಬಾಯಿ ಪಟೇಲರ 580 ಅಡಿ ಎತ್ತರದ ಪುತ್ಥಳಿಯನ್ನು ಸ್ಥಾಪಿಸಲು ಈಗಾಗಲೇ ಗುಜರಾತ್ ಸಿಎಂ ನರೇಂದ್ರ ಮೋದಿ ಮುಂದಾಗಿದ್ದು, ಲೋಹ ಮತ್ತು ಮಣ್ಣಿನ ಸಂಗ್ರಹಣೆಗೆ ಜ.18ರಂದು ಎಪಿಎಂಸಿ ಸಭಾಂಗಣದಲ್ಲಿ ನಡೆಯುವ ಸಮಾರಂಭದಲ್ಲಿ ಚಾಲನೆ ನೀಡಲಾಗುತ್ತದೆ. ಆನಂತರದಲ್ಲಿ ಪಂಚಾಯಿತಿ ಮಟ್ಟದಿಂದ ಮಂಡಲಗಳವರೆಗೆ ಅಲ್ಲಿಂದ ಅಭಿಯಾನ ರಥಗಳಲ್ಲಿ ಜಿಲ್ಲಾ ಕೇಂದ್ರಕ್ಕೆ ಲೋಹ ಮತ್ತು ಮಣ್ಣನ್ನು ತರಲಾಗುತ್ತದೆ. ಹೀಗೆ ಸಂಗ್ರಹಿಸಿದ ಲೋಹವನ್ನು ಗುಜರಾತಿನಿಂದ ನಗರಕ್ಕೆ ಆಗಮಿಸುವ ವಾಹನದಲ್ಲಿ ಗುಜರಾತ್‌ಗೆ ಕಳುಹಿಸಲಾಗುವುದು.
ಈ ಹಿನ್ನೆಲೆಯಲ್ಲಿ ಜ.18ರಂದು ಆಯೋಜಿಸಿರುವ ಉದ್ಘಾಟನೆ ಸಮಾರಂಭದಲ್ಲಿ ಪಾಲ್ಗೊಂಡು ಯಶಸ್ವಿಗೊಳಿಸಲು ಜಿಲ್ಲಾ  ಲೋಹ ಸಂಗ್ರಹ ಸಮಿತಿಯ ಸಂಚಾಲಕ ಗಿರೀಶ್ ಕನಕವೀಡು ಮನವಿ ಮಾಡಿದ್ದಾರೆ.
ಹೊಲಿಗೆ ತರಬೇತಿ ಸಮಾರೋಪ
ರಾಯಚೂರು: ನೆಹರು ಯುವಕೇಂದ್ರ, ಭಾರತ ಸೇವಾದಳ, ವಿಜಿಸಿ ಟ್ರಸ್ಟ್, ಹೆಲ್ಪ್ ಸೇವಾ ಸಂಸ್ಥೆ, ಫೈರ್ ಬಾಯ್ಸ್ ಯುವಕ ಸಂಘದ ಆಶ್ರಯದಲ್ಲಿ ಇತ್ತೀಚೆಗೆ ನಗರದಲ್ಲಿ ಹೊಲಿಗೆ ಮತ್ತು ಮೆಹಂದಿ ತರಬೇತಿ ಶಿಬಿರದ ಸಮಾರೋಪ ಸಮಾರಂಭ ಆಯೋಜಿಸಲಾಗಿತ್ತು. ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಯಾಗಿ ನಗರಸಭೆಯ ಮಾಜಿ ಸದಸ್ಯೆ ಪುಷ್ಪಾ ರುದ್ರಪ್ಪ ಅಂಗಡಿ ಪಾಲ್ಗೊಂಡು ಮಾತನಾಡಿ, ಪ್ರತಿಯೊಬ್ಬರೂ ಸರ್ಕಾರದ ವಿವಿಧ ಸವಲತ್ತುಗಳ ಪ್ರಯೋಜನ ಪಡೆಯಬೇಕೆಂದರು. ಮುಖ್ಯ ಅತಿಥಿಯಾಗಿ ಜಿಲ್ಲಾ ಯುವ ಸಬಲೀಕರಣ ಹಾಗೂ ಕ್ರೀಡಾ ಇಲಾಖೆಯ ಸಹಾಯಕ ನಿರ್ದೇಶಕ ಆರ್.ಎಸ್. ಕಣಬರಗಿ ಮಾತನಾಡಿ, ನೆಹರು ಯುವಕೇಂದ್ರವು ವಿವಿಧ ತರಬೇತಿ ಆಯೋಜಿಸುವ ಮೂಲಕ ಬಡ ಹಾಗೂ ಮಧ್ಯಮ ವರ್ಗದವರಿಗೆ ಬಹುಪಯೋಗಿ ಕಾರ್ಯ ಮಾಡುತ್ತಿದೆ ಎಂದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕೇಂದ್ರದ ಲೆಕ್ಕಾಧಿಕಾರಿ ಜಿ.ಎಸ್. ಹಿರೇಮಠ ವಹಿಸಿದ್ದರು. ಕಾರ್ಯಕ್ರಮದಲ್ಲಿ ಅತಾವುಲ್ಲಾ ಗಾರಲದಿನ್ನಿ ವಕೀಲರು, ರಾಮಯ್ಯ ಉಡುಮಗಲ್ ವಕೀಲರು ಸೇರಿದಂತೆ ಶಿಬಿರಾರ್ಥಿಗಳಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement