ಬುದ್ಧಿಮಾಂದ್ಯ ಮಕ್ಕಳ ಶಾಲೆಯಲ್ಲಿ ವಿವೇಕಾನಂದ ಜಯಂತಿ
ಗುಲ್ಬರ್ಗ: ಇಂದಿನ ಸಮಾಜದಲ್ಲಿ ನವ ಚೇತನ ಚಾರಿಟಬಲ್ ಟ್ರಸ್ಟ್ ಬಡ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಎಲ್ಲ ರೀತಿಯ ಸಹಾಯ ಮಾಡುವುದರೊಂದಿಗೆ ವಿವೇಕಾನಂದರ ಜಯಂತಿ ಆಚರಣೆ ಮಾಡುವ ಮೂಲಕ ಬುದ್ಧಿಮಾಂದ್ಯ ಮಕ್ಕಳಿಗೆ ಬಟ್ಟೆ ಮತ್ತು ಹಾಸಿಗೆ ನೀಡುತ್ತಿರುವುದು ಅವಿಸ್ಮರಣೀಯ ಎಂದು ಆಕಾಶ ಗ್ರೂಪ್ನ ಅಧ್ಯಕ್ಷ ಬಸವರಾಜ ಬಿರಾದಾರ ಹೇಳಿದರು. ಅವರು ನವನಗರದ ಆಳಂದ ರಸ್ತೆಯ ಬುದ್ಧಿಮಾಂದ್ಯ ಮಕ್ಕಳ ಶಾಲೆಯಲ್ಲಿ ನವಚೇತನ ಚಾರಿಟಬಲ್ ಟ್ರಸ್ಟ್ ವತಿಯಿಂದ ಸ್ವಾಮಿ ವಿವೇಕಾನಂದದ ಜನ್ಮದಿನೋತ್ಸವ ಕಾರ್ಯಕ್ರಮದಲ್ಲಿ ಮಾತನಾಡಿದರು. ಈ ಕಾರ್ಯಕ್ರಮದಲ್ಲಿ ಭೀಮರಾವ್ ಮನಮಿ, ಟ್ರಸ್ಟ್ನ ಅಧ್ಯಕ್ಷ ಸರಸ್ವತಿ ನಾಗೇಂದ್ರ ಯಲ್ದೆ, ಕೋಶಾಧ್ಯಕ್ಷ ಶಿವಕುಮಾರ ಯಲ್ದೆ, ರಾಧಾಬಾಯಿ, ಸುಮಂಗಲಾ, ಶಿವಲಿಂಗಪ್ಪ, ಅನೀತಾ ಬಸವರಾಜ ಹಾಗೂ ನಾಗೇಂದ್ರ ಯಲ್ದೆ ಭಾಗವಹಿಸಿದ್ದರು.