ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ರಾಯಚೂರು

ಸಂಚಾರ ನಿಯಮ ಅರಿತು ವಾಹನ ಚಲಾಯಿಸಿ'

Rashmi Kasaragodu
Updated On : 15 Jan 2014, 1:18 am

ಅಫಜಲ್ಪುರ: ವಾಹನ ಚಾಲಕರು ತಮ್ಮ ವಾಹನವನ್ನು ಚಲಾಯಿಸುವಾಗ ಸಂಚಾರಿ ನಿಯಮ ತಿಳಿದು ಅವುಗಳನ್ನು ಅನುಸರಿಸಿ ವಾಹನ ಚಲಾಯಿಸಬೇಕೆಂದು ಅಫಜಲ್ಪುರ ಪೊಲೀಸ್ ಠಾಣೆಯ ಪಿಎಸ್‌ಐ ಸುರೇಶ ಬೆಂಡೆಗುಂಬಳ ಹೇಳಿದರು. ಪಟ್ಟಣದಲ್ಲಿ ಪೊಲೀಸ್ ಇಲಾಖೆ ವತಿಯಿಂದ ಹಮ್ಮಿಕೊಂಡಿದ್ದ ರಸ್ತೆ ಸುರಕ್ಷ ಸಪ್ತಾಹ 2014ಕ್ಕೆ ಚಾಲನೆ ನೀಡಿ ಮಾತನಾಡಿ, ವಾಹನ ಸವಾರರು ಪ್ರತಿ ದಿವಸ ವಾಹನ ಚಲಾಯಿಸಿ ಅದರಿಂದ ಬರುವ ಹಣವನ್ನು ತಮ್ಮ ಸಂಸಾರಕ್ಕೆ ಉಪಯೋಗಿಸಿಕೊಳ್ಳಬೇಕು. ತಮ್ಮ ಮಕ್ಕಳ ವಿದ್ಯಾಭ್ಯಾಸಕ್ಕೆ ಹಾಗೂ ಅವರ ಭವಿಷ್ಯಕ್ಕೆ ಅನಕೂಲವಾಗುವ ರೀತಿಯಲ್ಲಿ ಈ ಹಣವನ್ನು ಉಪಯೋಗಿಸಿಕೊಳ್ಳಬೇಕು. ಪ್ರತಿನಿತ್ಯ ಶ್ರಮಪಟ್ಟು ದುಡಿದು ತಂದಿರುವ ಹಣವನ್ನು ಕುಡಿದು ವ್ಯರ್ಥವಾಗಿ ಹಾಳುಮಾಡಿಕೊಳ್ಳಬಾರದು ಎಂದರು. ವಾಹನ ಸವಾರರು ಸಾರ್ವಜನಿಕರು ಇದರ ಸದುಪಯೋಗ ಪಡೆಯಬೇಕೆಂದು ತಿಳಿಸಿದರು. ಸಪ್ತಾಹದಲ್ಲಿ ಎಎಸ್‌ಐ ನಜೀರ್ ಅಹ್ಮದ್, ರಮೇಶ ಎಲ್ದೆ, ಭೀಮಾಶಂಕರ, ಸಿದ್ರಾಮಪ್ಪ ಧನ್ನಿ ಚಂದ್ರಕಾಂತ, ನಾಗರಾಜ, ಜಗನ್ನಾಥ, ಮಿಥುನ ರಾಠೋಡ, ಅಜಯ ರಾಠೋಡ, ಸುನೀಲ, ಅನೀಲ, ರಮೇಶ, ಲಕ್ಷ್ಮಣ, ಭಾಗಣ್ಣ ಇದ್ದರು. ಬಸವೇಶ್ವರ ವೃತ್ತದಿಂದ ಅಫಜಲ್ಪುರ ಪಟ್ಟಣದ ಬೀದಿಗಳಲ್ಲಿ ರ್ಯಾಲಿ ಜರುಗಿತು.



Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement