ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ರಾಯಚೂರು

ದರ್ಶನಕ್ಕೆ ಹರಿದು ಬಂದ ಜನಸಾಗರ

Rashmi Kasaragodu
Updated On : 16 Jan 2014, 11:30 am

ಕ.ಪ್ರ. ವಾರ್ತೆ   ಗುಲ್ಬರ್ಗ   ಜ.15
ಬಂಡೆ ಪಾರ್ಥಿವ ಶರೀರ ಗುಲ್ಬರ್ಗಕ್ಕೆ ತರಬೇಕೋ, ಖಜೂರಿಗೆ ಕೊಂಡೊಯ್ಯಬೇಕೋ ಎಂಬ ವಿಚಾರದಲ್ಲಿ ತೀವ್ರ ಗೊಂದಲದಲ್ಲಿ ಮುಳುಗಿ ಕೊನೆಗೆ ರಾತ್ರಿ 9.30 ಗಂಟೆಗೆ ಗುಲ್ಬರ್ಗಕ್ಕೆ ಪಾರ್ಥೀವ ಶರೀರ ಗುಲ್ಬರ್ಗಕ್ಕೆ ತಂದು ಇಲ್ಲಿನ ಪರೇಡ್ ಮೈದಾನದಲ್ಲಿ ಸಾರ್ವಜನಿಕರ ದರ್ಶನಕ್ಕೆ ಇಡಾಯ್ತು.
ಸಾವಿರಾರು ಸಂಖ್ಯೆಯಲ್ಲಿ ಅಭಿಮಾನಿಗಳು, ಜನತೆ, ಬಂಧುಗಳು, ಗೆಳೆಯರು ಮೈದಾನದಲ್ಲಿ ಸೇರಿದ್ದರು.
ಪತ್ನಿ ಮಲ್ಲಮ್ಮ (ಮಧು), ಮಗಳಾದ ಶಿವಾನಿ ಸೇರಿದಂತೆ ಬಂಧುಗಳು, ಆಪ್ತರು, ಹಿತೈಷಿಗಳು, ಸಾರ್ವಜನಿಕರು ಸಾಲುಗಟ್ಟಿ ನಿಂತು ಅಗಲಿದ ಬಂಡೆ ಪಾರ್ಥೀವ ಶರೀರದ ಅಂತಿಮ ದರ್ಶನ ಪಡೆದರು. ಈ ಸಂದರ್ಭದಲ್ಲಿ ಹೆಚ್ಚಿನ ಂಸಖ್ಯೆಯಲ್ಲಿ ಜನ ಪರೇಡ್ ಮೈದಾನದಲ್ಲಿ ಸೇರಿತ್ತು. ರಾತ್ರಿಯಾದರೂ ಸಮಯದ ಪರಿವೇ ಇಲ್ಲದಂತೆ ಸೇರಿದ್ದ ಸಾವಿರಾರು ಜನ ಬಂಡೆ ಅಮರ್ ರಹೇ... ಎಂದು ಘೋಷಣೆ ಕೂಗುತ್ತ ಅಗಲಿದ ಅಧಿಕಾರಿಗೆ ನಮನ ಸಲ್ಲಿಸಿದರು.
ಐಜಿಪಿ, ಉಸ್ತುವಾರಿ ಸಚಿವರ ಗೈರು: ಬಂಡೆ ಪಾರ್ಥೀವ ಶರೀರ ಪರೇಡ್ ಮೈದಾನಕ್ಕೆ ಬಂದಾಗ ಇಲಾಖೆಯ ಎಲ್ಲಾ ಹಂತದ ಅಧಿಕಾರಿಗಳು ಅಲ್ಲಿ ಸೇರಿ ಅಂತಿಮ ನಮನ ಸಲ್ಲಿಸಿದರು. ಆದರೆ ಈಶಾನ್ಯ ವಲಯ ಐಜಿಪಿ ಮೊಹ್ಮದ್ ವಜೀರ್ ಅಹ್ಮದ್, ಜಿಲ್ಲಾ ಉಸ್ತುವಾರಿ ಸಚಿವ ಖಮರುಲ್ ಇಸ್ಲಾಂ ಈ ಸಂದರ್ಭದಲ್ಲಿ ಇರಲಿಲ್ಲ. ಇವರ ಗೈರು ಎದ್ದು ಕಾಣುತ್ತಿತ್ತು.
ಆಕ್ರೋಶ: ಜಿಲ್ಲಾಡಳಿತ ಹಾಗೂ ಪೊಲೀಸ್ ಸಮನ್ವಯ ಸಾಧಿಸಿ ಮಾತುಕತೆ ನಡೆಸಿದ್ದರೆ ಬಂಡೆ ಪಾರ್ಥಿವ ಶರೀರ ಬೇಗ  ಗುಲ್ಬರ್ಗಕ್ಕೆ ತರಬಹುದಾಗಿತ್ತು. ಆದರೆ ಅದ್ಯಾಕೋ ಜಿಲ್ಲಾ ಪೊಲೀಸ್ ಈ ವಿಚಾರದಲ್ಲಿ ತನ್ನದೇ ಆದಂತಹ ನಿರ್ಣಯಗಳನ್ನು ಕೈಗೊಂಡಾಗ ಸಾರ್ವಜನಿಕರ ಆಕ್ರೋಶ ಎದುರಿಸುವಂತಾಯ್ತು.
ಬಂಡೆ ಗುಲ್ಬರ್ಗ ನಗರದಲ್ಲೇ ಸೇವೆ ಸಲ್ಲಿಸಿದ್ದರಿಂದ ನಗರದ ಜನತೆಗೆ ಅವರ ಪಾರ್ಥೀವ ಶರೀರದ ಅಂತಿಮ ದರ್ಶನಕ್ಕೆ ಅವಕಾಶ ನೀಡದಂತೆ ಅದ್ಯಾಕೆ ಇಲಾಖೆ ನೇರವಾಗಿ ಖಜೂರಿಗೆ ತೆಗೆದುಕೊಂಡು ಹೋಗುತ್ತಿದೆಯೋ ಎಂದು ಎಲ್ಲರೂ ಪೊಲೀಸರು, ಜಿಲ್ಲಾಡಳಿತದ ನಿಲುವನ್ನು ಉಗ್ರವಾಗಿ ಖಂಡಿಸಿದಾಗ ಹಿರಿಯ ಅಧಿಕಾರಿಗಳು ತಕ್ಷಣ ತಮ್ಮ ಮುಂಚಿನ ನಿಲುವು ಸಡಿಲಿಸಿ, ಪರೇಡ್ ಮೈದಾನದಲ್ಲಿ ಪಾರ್ಥೀವ ಶರೀರದ ಅಂತಿಮ ನಮನಕ್ಕೆ ಅವಕಾಶ ಕಲ್ಪಿಸಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement