ಎನ್‌ಎಸ್‌ಯುಐನಿಂದ ಬಂಡೆಗೆ ಶ್ರದ್ಧಾಂಜಲಿ
ರಾಯಚೂರು: ಗುಲ್ಬರ್ಗ ನಗರದಲ್ಲಿ ಶೂಟೌಟ್ ಘಟನೆಯಲ್ಲಿ ದಕ್ಷ ಪೊಲೀಸ್ ಅಧಿಕಾರಿ ಪಿಎಸ್‌ಐ ಮಲ್ಲಿಕಾರ್ಜುನ ಬಂಡೆ ಅವರಿಗೆ ನ್ಯಾಷನಲ್ ಸ್ಟೂಡೆಂಟ್ ಯೂನಿಯನ್ ಆಫ್ ಇಂಡಿಯಾ ಜಿಲ್ಲಾ ಘಟಕದಿಂದ ಶ್ರದ್ಧಾಂಜಲಿ ಸಲ್ಲಿಸಲಾಯಿತು.
ನಗರಸಭೆ ಹಿರಿಯ ಸದಸ್ಯ ಜಯಣ್ಣ ಅವರು ಪಿಎಸ್‌ಐ ಮಲ್ಲಿಕಾರ್ಜುನ ಬಂಡೆ ಅವರ ಭಾವಚಿತ್ರಕ್ಕೆ ಮಾಲಾರ್ಪಣೆ ಮಾಡಿ ಗೌರವ ಸಲ್ಲಿಸಿದರು. ನಂತರ ಮಾತನಾಡಿ, ದಕ್ಷ ಮತ್ತು ಪ್ರಾಮಾಣಿಕ ಅಧಿಕಾರಿಯಾಗಿ ಜನಮೆಚ್ಚುಗೆ ಕಾರ್ಯ ಮಾಡಿದ ಮಲ್ಲಿಕಾರ್ಜುನ ಬಂಡೆ ಸಮಾಜ ದ್ರೋಹಿಗಳನ್ನು ಸದೆ ಬಡಿಯುವಲ್ಲಿ ಸಾಕಷ್ಟು ಪ್ರಯತ್ನ ನಡೆಸಿ ಪೊಲೀಸ್ ಇಲಾಖೆಯಲ್ಲಿ ಉತ್ತಮ ಕಾರ್ಯ ನಿರ್ವಹಿಸಿದ್ದಾರೆ. ಇಂತಹ ದಕ್ಷ ಅಧಿಕಾರಿ ಕುಟುಂಬಕ್ಕೆ ಶಕ್ತಿಯಾಗಿ ನಿಲ್ಲುವುದು ಸರ್ಕಾರದ ಕರ್ತವ್ಯವಾಗಿದ್ದು, ಕುಟುಂಬ ವರ್ಗಕ್ಕೆ ಒಂದು ಕೋಟಿ ರೂ. ಪರಿಹಾರ ನೀಡಬೇಕೆಂದು ಒತ್ತಾಯಿಸಿದರು.
ಈ ಸಂದರ್ಭದಲ್ಲಿ ನಗರಸಭೆ ಸದಸ್ಯ ಎನ್. ಶ್ರೀನಿವಾಸರೆಡ್ಡಿ, ರವೀಂದ್ರ ಜಲ್ದಾರ, ಎನ್‌ಎಸ್‌ಯುಐ ಜಿಲ್ಲಾದ್ಯಕ್ಷ ಅರುಣ್ ದೋತ್ರಬಂಡಿ, ರಾಮಾಚಾರಿ, ವಸಂತ ಕುಮಾರ, ಅಪ್ಸರ್ ಹುಸೇನ, ರಾಜೇಶ್, ಕಾರ್ತಿಕ, ಅರುಣ್ ನಾಯಕ, ವೀರೇಶ, ಹರಿ, ಮನೋಜ, ಆಶ್ವಿನ್ ಇದ್ದರು.