ಜನರ ನಿಯಂತ್ರಣಕ್ಕೆ ಪೊಲೀಸರ ಹರಸಾಹಸ
ಆಳಂದ: ಬಂಡೆ ಅವರ ಪಾರ್ಥಿವ ಶರೀರವನ್ನು ಗುರುವಾರ ಗುಲ್ಬರ್ಗದಿಂದ ಖಜೂರಿಗೆ ಆ್ಯಂಬ್ಯುಲೆನ್ಸ್ ಮೂಲಕ ಸಾಗಿಸುವ ಮಾರ್ಗ ಮಧ್ಯದ ಆಳಂದಕ್ಕೆ ಆಗಮಿಸಿದ್ದಾಗ ಬೃಹತ್ ಸಂಖ್ಯೆಯಲ್ಲಿ ಸೇರಿದ ನಾಗರಿಕರು ಪಾರ್ಥಿವ ಶರೀರದ ಅಂತಿಮ ದರ್ಶನ ಪಡೆದ ನಮಿಸಿದರು. ಆಳಂದ ಪಟ್ಟಣದಿಂದ 15 ಕಿ.ಮೀ. ಅಂತರದಲ್ಲಿರುವ ಖಜೂರಿ ಹೊರವಲಯದ ಬಂಡೆ ಅವರ ತೋಟದಲ್ಲಿ ಅಂತ್ಯಸಂಸ್ಕಾರಕ್ಕೆ ಭಾರೀ ಸಿದ್ಧತೆ ಮಾಡಿಕೊಳ್ಳಲಾಗಿತು. ಬಸ್ ನಿಲ್ದಾಣ ಮುಂಭಾಗದಲ್ಲಿ ಬಂಡೆ ಅವರ ಭಾವಚಿತ್ರಕ್ಕೆ ಶ್ರದ್ಧಾಂಜಲಿ ಅರ್ಪಿಸಿದರು. ಈ ಸಂದರ್ಭದಲ್ಲಿ ಭಾರೀ ಪ್ರಮಾಣದಲ್ಲಿ ನಿಯೋಜಿಸಲಾದ ಪೊಲೀಸ್ ಸಿಬ್ಬಂದಿ ಜನರನ್ನು ಚದುರಿಸಲು ಕೆಲಕಾಲ ಪರದಾಡಬೇಕಾಯಿತು. ಬಸವ ಕೇಂದ್ರದ ಅಧ್ಯಕ್ಷ ಶ್ರೀಮಂತ ಕಾರಬಾರಿ, ಇಕ್ಬಾಲ ಬಿಲಗುಂದಿ, ಬಂಜಾರ ತರುಣ ಸಂಘದ ಅಧ್ಯಕ್ಷ ಶಿವಾಜಿ ರಾಠೋಡ, ಶ್ರೀಶೈಲ ಬಂಗರಗಿ, ನ್ಯಾ. ಬಾಬಾಸಾಹೇಬ ಪಾಟೀಲ, ತಾಪಂ ಸ್ಥಾಯಿ ಸಮಿತಿ ಅಧ್ಯಕ್ಷ ಮಲ್ಲಣ್ಣಾ ನಾಗೂರೆ, ಮಾಜಿ ಅಧ್ಯಕ್ಷ ಮೋಹನಗೌಡ ಪಾಟೀಲ, ಪುರಸಭೆ ಸದಸ್ಯ ರಾಮ ಹತ್ತರಕಿ, ಸಿದ್ಧಣ್ಣ ಝಳಕಿ, ತಡಕಲ್‌ದ ಸಿ.ಜಿ.ಕಲಶೆಟ್ಟಿ, ಪಂಡಿತ ಬಳಬಟ್ಟಿ, ಡಾ. ಎಸ್.ಎಂ. ಹಿರೇಮಠ, ಮಡ್ಡೆ, ಪಂಡಿತ ಶೇರಿಕಾರ ಭಾಗವಹಿಸಿದ್ದರು. ಈ ಮಧ್ಯೆ ಸಿಪಿಐ ಕರಿಯಪ್ಪ ಹಟ್ಟಿ, ಮಾಲಗತಿ ಒಳಗೊಂಡ ನಿಯೋಜಿತ ಪೊಲೀಸ್ ಸಿಬ್ಬಂದಿ ತಂಡವು ಸಾರ್ನಜನಿಕರ ಗುಂಪುಗಾರಿಕೆಯನ್ನು ನಿಯಂತ್ರಿಸಲು ಹರಸಹಾಸ ಪಡಬೇಕಾಯಿತು.