ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ರಾಯಚೂರು

ಇಂದು ಗವಿಸಿದ್ದೇಶ್ವರ ಜಾತ್ರೆ

Rashmi Kasaragodu
Updated On : 18 Jan 2014, 12:22 pm

ರಾಯಚೂರು: ಕೊಪ್ಪಳದ ಪ್ರಸಿದ್ಧ ಶ್ರೀ ಗವಿಮಠ ಸಂಸ್ಥಾನದ ಶ್ರೀಗವಿಸಿದ್ದೇಶ್ವರ ಜಾತ್ರಾ ಮಹೋತ್ಸವ ಜ.18ರಿಂದ ಜ.20ರವರೆಗೆ ನಡೆಯಲಿದೆ ಎಂದು ದೇವಸ್ಥಾನದ ಪ್ರಕಟಣೆ ತಿಳಿಸಿದೆ. ಜ.18ರಂದು ಸಂಜೆ5ಕ್ಕೆ ಮಹಾರಥೋತ್ಸವ ನಡೆಯಲಿದ್ದು, ಮುಂಡರಗಿ ಸಂಸ್ಥಾನಮಠದ ನಾಡೋಜ ಡಾ.ಅನ್ನದಾನೀಶ್ವರ ಮಹಾಶಿವಯೋಗಿಗಳು ರಥೋತ್ಸವಕ್ಕೆ ಚಾಲನೆ ನೀಡಲಿದ್ದಾರೆ. ಜಾತ್ರಾ ಮಹೋತ್ಸವದ ಅಂಗವಾಗಿ ಜ.18ರಂದು ಬೆಳಗ್ಗೆ 8ಕ್ಕೆ ಷಟಸ್ಥಲ ಧ್ವಜಾರೋಹಣವನ್ನು ಹಿರೇಸಿಂದೋಗಿ ಚಿದಾನಂದ ಮಹಾಸ್ವಾಮಿ ಮತ್ತಿತರೆ ಮಠಗಳ ಮಠಾಧೀಶರು ನೆರವೇರಿಸಲಿದ್ದಾರೆ. ಅದೇ ದಿನ ರಾತ್ರಿ 8ಕ್ಕೆ ಕೈಲಾಸ ಮಂಟಪದಲ್ಲಿ ಅನುಭಾವಿಗಳ ಅಮೃತ ಎಂಬ ಗೋಷ್ಠಿ ಆಯೋಜಿಸಿದ್ದು, ವಿವಿಧ ಮಠಗಳ ಮಠಾಧೀಶರು ಭಾಗವಹಿಸುವರು. ಜ.19ರಂದು ಧಾರ್ಮಿಕ ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ. ಜ. 20ರಂದು ಸಮಾರೋಪ ಸಮಾರಂಭ ಆಯೋಜಿಸಿದ್ದು, ಜಾತ್ರಾ ಮಹೋತ್ಸವದಲ್ಲಿ ಪಾಲ್ಗೊಂಡು ಯಶಸ್ವಿಗೊಳಿಸಲು ಮನವಿ ಮಾಡಲಾಗಿದೆ.
ಇಂದಿನಿಂದ ನಾಯಕತ್ವ ಶಿಬಿರ
ರಾಯಚೂರು: ನಗರದ ವಿಆರ್‌ಇಟಿ ದೈಹಿಕ ಶಿಕ್ಷಣ ಕಾಲೇಜಿನಲ್ಲಿ ನಾಯಕತ್ವ ಮತ್ತು ಮನೋಲ್ಲಾಸ ಶಿಬಿರವನ್ನು ಜ.18ರಿಂದ 21ರವರೆಗೆ ಆಯೋಜಿಸಲಾಗಿದೆ. ಶಿಬಿರವನ್ನು ಯಾದಗಿರಿ ಜಿಲ್ಲೆಯ ಹತ್ತಿಕುಣಿಯಲ್ಲಿ ಆಯೋಜಿಸಿದ್ದು, ಯಾದಗಿರಿಯ ಸರ್ಕಾರಿ ಪದವಿ ಕಾಲೇಜಿನ ಪ್ರಾಚಾರ್ಯ ಡಾ. ಸುಭಾಷಚಂದ್ರ ಕೌಲಿಗಿ ಉದ್ಘಾಟಿಸುವರು. ಮುಖ್ಯ ಅತಿಥಿಗಳಾಗಿ ದೈಹಿಕ ಶಿಕ್ಷಣ ನಿರ್ದೇಶಕ ಡಾ. ಜಗನ್ನಾಥ್ ಪಟ್ಟಣಕರ್ ವಹಿಸುವರು. ಅಧ್ಯಕ್ಷತೆಯನ್ನು ವಿವೇಕಾನಂದ ದೈಹಿಕ ಶಿಕ್ಷಣ ಮಹಾವಿದ್ಯಾಲಯದ ಪ್ರಾಚಾರ್ಯ ವಿಶ್ವನಾಥರೆಡ್ಡಿ ಪಾಟೀಲ್ ವಹಿಸುವರು. ಶಿಬಿರದ ನಿರ್ದೇಶಕ ರಾಘವೇಂದ್ರ, ಕಾಲೇಜಿನ ಉಪನ್ಯಾಸಕ ಮೂಕಪ್ಪ, ದಾನಪ್ಪ ಪಾಸೋಡಿ, ನರಸಿಂಹಾಚಾರಿ ನೀರಮಾನವಿ, ಗವಿಸಿದ್ದಪ್ಪ, ಚಂದ್ರಶೇಖರ್ ಸೇರಿ ಅನೇಕರು ಪಾಲ್ಗೊಳ್ಳಲಿದ್ದಾರೆಂದು ಕಾಲೇಜಿನ ತಿಳಿಸಿದೆ.
ಮಹಿಳೆಯ ಕೊಲೆ
ರಾಯಚೂರು: ಇಂದಿರಾ ನಗರ ಬಡಾವಣೆಯಲ್ಲಿ ಮಹಿಳೆಯನ್ನು ಕೊಲೆ ಮಾಡಿದ ಘಟನೆ ಶುಕ್ರವಾರ ಬೆಳಗ್ಗೆ ನಡೆದಿದೆ. ಮೃತಳನ್ನು ಸೀತಮ್ಮ(32) ಎಂದು ಗುರುತಿಸಲಾಗಿದ್ದು, ಈಕೆಯನ್ನು ಧನರಾಜ್ ಎಂಬಾತ ಕೊಲೆ ಮಾಡಿದ್ದು, ಕೊಲೆಗೆ ಕಾರಣ ತಿಳಿದುಬಂದಿಲ್ಲ. ಸೀತಮ್ಮ ಮನೆಯಲ್ಲಿದ್ದಾಗ ಆಗಮಿಸಿದ್ದ ಧನರಾಜ್ ಕೊಡಲಿಯಿಂದ ಆಕೆಯ ಮೇಲೆ ದಾಳಿ ಮಾಡಿದ್ದು, ತೀವ್ರ ಗಾಯಗೊಂಡ ಆಸ್ಪತ್ರೆಗೆ ಸಾಗಿಸುವ ಮಾರ್ಗದಲ್ಲಿಯೇ ಆಕೆ ಸಾವಿಗೀಡಾಗಿದ್ದಾಳೆಂದು ಪಶ್ಚಿಮ ಠಾಣೆ ಪೊಲೀಸರು ತಿಳಿಸಿದ್ದಾರೆ.


Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement