ತಾತ್ಕಾಲಿಕ ಜೇಷ್ಠತಾ ಪಟ್ಟಿ ಪ್ರಕಟ
ರಾಯಚೂರು: ಗುಲ್ಬರ್ಗ ಆಯುಕ್ತಾಲಯದ ವ್ಯಾಪ್ತಿಯ ಸರ್ಕಾರಿ ಪ್ರೌಢಶಾಲೆಗಳಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಸಹ ಶಿಕ್ಷಕರ ತಾತ್ಕಾಲಿಕ ಜೇಷ್ಠತಾ ಪಟ್ಟಿ ಪ್ರಕಟಿಸಿದ್ದು ಆಕ್ಷೇಪಣೆಗೆ ಆಹ್ವಾನಿಸಲಾಗಿದೆ. 2014ರ ಜ.1ರಲ್ಲಿದ್ದಂತೆ ಗುಲ್ಬರ್ಗದ ಸಾರ್ವಜನಿಕ ಶಿಕ್ಷಣ ಇಲಾಖೆಯ ಅಪರ ಆಯುಕ್ತರ ಕಚೇರಿಯ ಅಂತರ್ಜಾಲ ತಾಣ ಢಿಢಿಢಿ.್ಛಠ್ಝ್ಜ್ಡಟಛಿಛ್ಠ್ಜಛ.್ಞಛ್ಠ.ಟ್ಝ್ಛಿ.್ಝಟಿ ದಲ್ಲಿ ಈ ಪಟ್ಟಿಯನ್ನು ಪ್ರಕಟಿಸಲಾಗಿದೆ. ಸೇರ್ಪಡೆ, ತಿದ್ದುಪಡಿಯ ಅವಶ್ಯ ಇರುವ ಆಕ್ಷೇಪಣೆಯನ್ನು ಆಯಾ ಶಾಲೆಯ ಪ್ರತಿಯೊಬ್ಬ ಆಕ್ಷೇಪಣೆ ಸಲ್ಲಿಸಿದ ಸಹ ಶಿಕ್ಷಕರ ಜೇಷ್ಠತಾ ಸಂಖ್ಯೆಯೊಂದಿಗೆ ಮಾಹಿತಿಯನ್ನು ನಿಗದಿತ ನಮೂನೆಯಲ್ಲಿ ಶಾಲಾ ಮುಖ್ಯಸ್ಥರು ದೃಢೀಕರಿಸಿ ಕ್ರೂಢೀಕೃತ ಮಾಹಿತಿಯನ್ನು ದಾಖಲೆಗಳೊಂದಿಗೆ ಜ.22ರೊಳಗೆ ಆಯಾ ಶಾಲೆಗಳ ಮುಖ್ಯಗುರುಗಳು ತಾಲೂಕಿನ ಬಿಇಒ ಗಳಿಗೆ ಸಲ್ಲಿಸಲು ಸೂಚಿಸಲಾಗಿದೆ. ಮಾಹಿತಿಗೆ ಆಯಾ ತಾಲೂಕುಗಳ ಬಿಇಒ ಕಚೇರಿಗೆ ಸಂಪರ್ಕಿಸಲು ತಿಳಿಸಲಾಗಿದೆ.