ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ರಾಯಚೂರು

ಹನೂರು; ಬಡವರಿಗೆ ಮನೆ ನೀಡಲು ಕರವೇ ಆಗ್ರಹ

Rashmi Kasaragodu
Updated On : 18 Jan 2014, 12:22 pm

ಕ.ಪ್ರ. ವಾರ್ತೆ   ಮುದಗಲ್   ಜ.17
ಹುನೂರ ಗ್ರಾ.ಪಂ. ವ್ಯಾಪ್ತಿಯ ಅನೇಕ ಕಡುಬಡವರು ಸೂರಿನ ವ್ಯವಸ್ಥೆಯಿಲ್ಲದೆ ನರಳುತ್ತಿದ್ದಾರೆ. ಸೂಕ್ತ ಫಲಾನುಭವಿಗಳಿಗೆ ಗ್ರಾಮಸಭೆಗಳ ಮೂಲಕ ಮನೆ ನೀಡುವಂತೆ ಹುನೂರ ಗ್ರಾಮದ ಕರವೇ ಸಂಘಟನೆ ಕಾರ್ಯಕರ್ತರು ಹುನೂರ ಗ್ರಾ.ಪಂ. ಅಭಿವೃದ್ಧಿ ಅಧಿಕಾರಿ ಸೋಮನಗೌಡರಿಗೆ ಮನವಿ ಸಲ್ಲಿಸಿ ಒತ್ತಾಯಿಸಿದ್ದಾರೆ.
ರಾಜೇಶ್ವರಿ ಮೌನೇಶ ಬಡಿಗೇರಿ ಸೇರಿದಂತೆ ಗ್ರಾಮದಲ್ಲಿ ಅನೇಕರು ಗುಡಿಸಲು, ಶೆಡ್‌ನಲ್ಲಿ ವಾಸ ಮಾಡುತ್ತಿದ್ದಾರೆ. ಸರ್ಕಾರ ನೀಡುವ ಮನೆಗಳು ಗ್ರಾ.ಪಂ. ಸದಸ್ಯರ, ರಾಜಕಾರಣಿಗಳ ಹಿಂಬಾಲಕರ ಪಾಲಾಗುತ್ತಿವೆ ಎಂದು ದೂರಿದ ಸಂಘಟಕರು, ಗ್ರಾಮಸಭೆಗಳ ಮೂಲಕ ಸರಿಯಾದ ಫಲಾನುಭವಿಗಳಿಗೆ ಮನೆನೀಡುವಂತೆ ಪಿಡಿಒಗೆ ಬರೆದ ಮನವಿ ಪತ್ರವನ್ನು ಕರವೇ ಗ್ರಾಮ ಘಟಕದ ಅಧ್ಯಕ್ಷ ವಿಜಯಕುಮಾರ ಗ್ರಾ.ಪಂ. ಆಡಳಿತಕ್ಕೆ ಸಲ್ಲಿಸಿದರು. ಸಂಘಟಕರಾದ ಕರಿಯಪ್ಪ ಚಲುವಾದಿ, ದ್ಯಾಮಣ್ಣ ಅಂಬಿಗೇರ್, ಬಸವರಾಜ ವಾಲ್ಮೀಕಿ, ವೆಂಕಟೇಶ ಚಲುವಾದಿ, ಜಕಾಪ್ಪ, ಶಿವಪುತ್ರಪ್ಪ ನಾಗಲಾಪುರ ಸೇರಿದಂತೆ ಇತರರು ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement