ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ರಾಯಚೂರು

23ಕ್ಕೆ ಗೋಪಾಲದಾಸರ ಆರಾಧನಾ ಮಹೋತ್ಸವ

Rashmi Kasaragodu
Updated On : 19 Jan 2014, 11:27 am

ರಾಯಚೂರು: ಆಂಧ್ರದ ಗದ್ವಾಲ್ ತಾಲೂಕಿನ ಉತ್ತನೂರು ಗ್ರಾಮದಲ್ಲಿ ಗೋಪಾಲದಾಸರ 352ನೇ ಆರಾಧನಾ ಮಹೋತ್ಸವವು ಜ.23ರಿಂದ 25ರವರೆಗೆ ಆಯೋಜಿಸಲಾಗಿದೆ. ಉತ್ತನೂರು ಗ್ರಾಮದ ಗೋಪಾಲದಾಸರ ಮೂಲಸಂಸ್ಥಾನ ಟ್ರಸ್ಟ್‌ನಿಂದ ಆಯೋಜಿಸಿರುವ ಗೋಪಾಲದಾಸರ ಆರಾಧನಾ ಮಹೋತ್ಸವದ ಸಂದರ್ಭ ಜ.23ರಂದು ಪವಮಾನ ಹೋಮ, ಜ.25ರಂದು ಧನ್ವಂತರಿ ಹೋಮ ಸೇರಿ ವಿವಿಧ ಧಾರ್ಮಿಕ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ ಎಂದು ಟ್ರಸ್ಟ್ ಪ್ರಕಟಣೆ ತಿಳಿಸಿದೆ. ಆರಾಧನಾ ಮಹೋತ್ಸವದ ಕುರಿತು ಹೆಚ್ಚಿನ ಮಾಹಿತಿಗೆ ಗೋಪಾಲದಾಸರು ಮೊ. 099630 10811, ರಾಘವೇಂದ್ರದಾಸರು- 078933 31421 ಹಾಗೂ ಮೋಹನದಾಸರು- 098669 26675 ಇಲ್ಲಿಗೆ ಸಂಪರ್ಕಿಸಲು ಟ್ರಸ್ಟ್ ಮನವಿ ಮಾಡಿದೆ.


'ಚುಟುಕಿನಿಂದ ಸಮಾಜದ ಓರೆ-ಕೋರೆ ತಿದ್ದುವ ಕಾರ್ಯ'


ಸಿಂಧನೂರು: ಕಡಿಮೆ ಪದ ಬಳಸಿ ಹೆಚ್ಚು ಅರ್ಥದ ಮಾಹಿತಿ ನೀಡುವ ಮೂಲಕ ಸಮಾಜದ ಓರೆ-ಕೋರೆ ತಿದ್ದುವ ಕಾರ್ಯ ಚುಟುಕುಗಳು ಮಾಡಬಲ್ಲವು ಎಂದು ಜಿಲ್ಲಾ ಚುಟುಕು ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಬೀರಪ್ಪ ಶಂಭೋಜಿ ಹೇಳಿದರು. ಅವರು ನಗರದ ನ್ಯಾಷನಲ್ ಪದವಿ ಮಹಾವಿದ್ಯಾಲಯದಲ್ಲಿ ಜಿಲ್ಲಾ ಮತ್ತು ತಾಲೂಕು ಕನ್ನಡ ಸಾಹಿತ್ಯ ಪರಿಷತ್ತಿನ ಸಂಯುಕ್ತಾಶ್ರಯದಲ್ಲಿ ಏರ್ಪಡಿಸಿದ್ದ ದಿ. ಕೆ. ವಿಜಯಕುಮಾರ ಸ್ಮಾರಕ ದತ್ತಿ ಉಪನ್ಯಾಸದಲ್ಲಿ ಕನ್ನಡ ಸಾಹಿತ್ಯದಲ್ಲಿ ಚುಟುಕುಗಳ ಜನಪ್ರಿಯತೆ ಕುರಿತು ಉಪನ್ಯಾಸ ನೀಡಿದರು. ಕಾರ್ಯಕ್ರಮ ಉದ್ಘಾಟಿಸಿದ ಆರ್‌ಜಿಎಂ ಪದವಿ ಪೂರ್ವ ಮಹಾವಿದ್ಯಾಲಯದ ಉಪನ್ಯಾಸಕಿ ಡಾ. ಮಧುಮತಿ ದೇಶಪಾಂಡೆ, ಕಸಾಪ ಗೌರವಾಧ್ಯಕ್ಷ ದೇವೇಂದ್ರಗೌಡ, ತಾಲೂಕು ಕಸಾಪ ಅಧ್ಯಕ್ಷೆ ರಮಾದೇವಿ ಶಂಭೋಜಿ ಮಾತನಾಡಿದರು. ಅಧ್ಯಕ್ಷತೆಯನ್ನು ನ್ಯಾಷನಲ್ ಕಾಲೇಜಿನ ಪ್ರಾಚಾರ್ಯ ಶರಣಪ್ಪ ವಹಿಸಿದ್ದರು. ದತ್ತಿದಾನಿಗಳಾದ ಕೆ. ಚಂದ್ರಕಲಾ, ಹಿರಿಯ ಸಾಹಿತಿ ಎಚ್.ಜಿ. ಹಂಪಣ್ಣ, ಕೆ. ಸುಮಾ ಇದ್ದರು. ನಂತರ ಅಭಿಯಂತರ ವಿ.ಸಿ. ಪಾಟೀಲ್, ಪತಂಜಲಿ ಯೋಗ ಸಮಿತಿಯ ಯೋಗಗುರು ಎಂ. ಭಾಸ್ಕರ್, ಬಸಮ್ಮ ತಾಳಿಕೋಟಿ, ಹನುಮಂತ ಅವರು ಚುಟುಕು ವಾಚಿಸಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement