ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ರಾಯಚೂರು

ಕಾಯಿಲೆ; ಮೆಕ್ಯಾನಿಕ್‌ಗೆ ಸಹಾಯಧನ ವಿತರಣೆ

Rashmi Kasaragodu
Updated On : 19 Jan 2014, 11:27 am

ಸಿಂಧನೂರು: ಇಲ್ಲಿನ ಇಂದಿರಾ ನಗರದ ರವಿಕುಮಾರ ಎಂಬ ಮೆಕ್ಯಾನಿಕ್ ಅನಾರೋಗ್ಯದಿಂದ ಬಳಲುತ್ತಿದ್ದು ಜೀವನ ನಿರ್ವಹಣೆಗೆ ಆಟೋ ಟೆಕ್ನಿಷಿಯನ್ ಸಹಕಾರಿ ಸಂಘದಿಂದ ಆರ್ಥಿಕ ನೆರವು ಇತ್ತೀಚೆಗೆ ನೀಡಲಾಯಿತು. ಆಟೋ ಟೆಕ್ನಿಷಿಯನ್ ಸಹಕಾರಿ ಸಂಘದಿಂದ ರವಿಕುಮಾರ್ ಅವರಿಗೆ 20 ಸಾವಿರ ಚೆಕ್ ಇತ್ತೀಚೆಗೆ ಸಂಘದ ಅಧ್ಯಕ್ಷ ಸೈಯದ್ ಹಾಸಿಂ ಅಲಿ ಜಹಾಗೀರದಾರ ವಿತರಿಸಿ, ರವಿಕುಮಾರ ಒಳ್ಳೆಯ ಕೆಲಸಗಾರನಾಗಿದ್ದ. ಇತ್ತೀಚೆಗೆ ಅನಾರೋಗ್ಯಕ್ಕೆ ಸಿಲುಕಿದ್ದರಿಂದ ಅವರ ಕುಟುಂಬದ ನಿರ್ವಹಣೆಗೆ ತೊಂದರೆಯಾಗಿತ್ತು. ಈ ಹಿನ್ನೆಲೆಯಲ್ಲಿ ಸಂಘದಿಂದ ನೆರವು ಕಲ್ಪಿಸಲಾಗಿದೆ ಎಂದು ಹೇಳಿದರು. ಸಂಘದ ಉಪಾಧ್ಯಕ್ಷ ಬಿ.ವಿ. ಸುಬ್ಬಾರಾವ್, ಕಾರ್ಯದರ್ಶಿ ಎಚ್.ಬಾಷಾ, ನಿರ್ದೇಶಕ ಹಾಜಿ ಮಸ್ತಾನ್, ವಲಿಸಾಬ ಮಿಟ್ಟಿಮನಿ, ರಸೂಲಸಾಬ್, ಕಲ್ಲಪ್ಪ ಬಾದಾಮಿ ಇದ್ದರು.



ನಾಳೆ ಜಿಲ್ಲಾ ಮಟ್ಟದ ಪ್ರತಿಭಾ ಕಾರಂಜಿ ಕಾರ್ಯಕ್ರಮ


ರಾಯಚೂರು: 2013-14ನೇ ಸಾಲಿನ ಜಿಲ್ಲಾ ಮಟ್ಟದ ಪ್ರತಿಭಾ ಕಾರಂಜಿ ಸ್ಪರ್ಧೆಗಳು ಜ.20ರಂದು ಲಿಂಗಸ್ಗೂರಿನ ಶಾಸಕರ ಸರ್ಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಆಯೋಜಿಸಲಾಗಿದೆ. ಜಿಲ್ಲೆಯ ವಿವಿಧೆಡೆ ಆಯೋಜಿಸಿದ್ದ ತಾಲೂಕು ಮಟ್ಟದ ಪ್ರತಿಭಾ ಕಾರಂಜಿ ಸ್ಪರ್ಧೆಗಳಲ್ಲಿ ಪ್ರಥಮ ಶ್ರೇಣಿಯಲ್ಲಿ ಆಯ್ಕೆಯಾದ ವಿದ್ಯಾರ್ಥಿಗಳು ಜಿಲ್ಲಾ ಮಟ್ಟದ ಸ್ಪರ್ಧೆಯಲ್ಲಿ ಪಾಲ್ಗೊಳ್ಳಲು ಅರ್ಹರಾಗಿದ್ದಾರೆ. ಈ ಹಿನ್ನೆಲೆಯಲ್ಲಿ ತಾಲೂಕು ಮಟ್ಟದಲ್ಲಿ ಉತ್ತಮ ಸಾಧನೆ ಮೆರೆದವರು ಲಿಂಗಸ್ಗೂರಿನಲ್ಲಿ ನಡೆಯುವ ಜಿಲ್ಲಾ ಮಟ್ಟದ ಪ್ರತಿಭಾ ಕಾರಂಜಿ ಸ್ಪರ್ಧೆಗೆ ಭಾಗವಹಿಸಲು ಸೂಚಿಸಲಾಗಿದೆ. ಆಯ್ಕೆಯಾದ ವಿದ್ಯಾರ್ಥಿಗಳನ್ನು ಜಿಲ್ಲಾ ಮಟ್ಟದ ಸ್ಪರ್ಧೆಗೆ ಭಾಗವಹಿಸುವಂತೆ ಆಯಾ ಶಾಲೆಗಳ ಶಿಕ್ಷಕರೊಂದಿಗೆ ವಿದ್ಯಾರ್ಥಿಗಳನ್ನು ಕಳಿಸಿಕೊಡಲು ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪ ನಿರ್ದೇಶಕರು ಆಯಾ ಶಾಲೆಗಳ ಮುಖ್ಯಗುರುಗಳಿಗೆ ಸೂಚನೆ ನೀಡಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement