ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ರಾಯಚೂರು

ಪರಿಸರ ಮಿತ್ರ ಸ್ಪರ್ಧೆ; ಅರ್ಜಿ ಅವಧಿ ವಿಸ್ತರಣೆ

Rashmi Kasaragodu
Updated On : 19 Jan 2014, 11:27 am

ರಾಯಚೂರು: ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಯಿಂದ ಜಿಲ್ಲೆಯ ಶಾಲೆಗಳಿಗೆ ಆಯೋಜಿಸಿರುವ ಪರಿಸರ ಮಿತ್ರ ಶಾಲಾ ಸ್ಪರ್ಧೆಯ ಅರ್ಜಿ ಸಲ್ಲಿಕೆಯ ಅವಧಿಯನ್ನು ಜ.24ರವರೆಗೆ ವಿಸ್ತರಿಸಲಾಗಿದೆ ಎಂದು ಇಲಾಖೆ ತಿಳಿಸಿದೆ. ಈ ಕುರಿತು ಪ್ರಕಟಣೆ ನೀಡಿರುವ ಇಲಾಖೆಯು ಈ ಮೊದಲು ಅರ್ಜಿ ಸಲ್ಲಿಸಲು ಜ.20 ಕಡೆಯ ದಿನ ಎಂದು ಪ್ರಕಟಿಸಲಾಗಿತ್ತು. ಆದರೆ ಸದ್ಯ ಅವಧಿಯನ್ನು ಜ.24ರವರೆಗೆ ವಿಸ್ತರಿಸಿದ್ದು, ಜಿಲ್ಲೆಯ ಎಲ್ಲ ಶಾಲೆಗಳು ಅರ್ಜಿಗಳನ್ನು ಜ.24ರವರೆಗೆ ಸಲ್ಲಿಸಬಹುದಾಗಿದೆ ಎಂದು ತಿಳಿಸಿದ್ದಾರೆ. ಕಾರಣ ಭರ್ತಿ ಮಾಡಿದ ಅರ್ಜಿಗಳನ್ನು ಪರಿಸರ ಅಧಿಕಾರಿಗಳು ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ ಎಂ.ಎಸ್. ಚೇಂಬರ್ಸ್ 1ನೇ ಮಹಡಿ ಎಸ್‌ಬಿಎಂ ಬ್ಯಾಂಕ್ ಹತ್ತಿರ, ಲಿಂಗಸ್ಗೂರು ರಸ್ತೆ, ರಾಯಚೂರು ಇಲ್ಲಿಗೆ ಸಲ್ಲಿಸಲು ಕೋರಲಾಗಿದೆ. ವಿವರಕ್ಕೆ ದೂ. 08532- 227989 ಇಲ್ಲಿಗೆ ಸಂಪರ್ಕಿಸಬಹುದು.



ಪಡಿತರ ಆಹಾರ ಧಾನ್ಯ ಬಿಡುಗಡೆ; ಇಲಾಖೆ ಹೇಳಿಕೆ


ರಾಯಚೂರು: ಜಿಲ್ಲೆಯ ಪಟ್ಟಣ ಹಾಗೂ ಗ್ರಾಮೀಣ ಪ್ರದೇಶದಲ್ಲಿರುವ ಪಡಿತರದಾರರಿಗೆ ಸರ್ಕಾರದಿಂದ ಪಡಿತರ ಆಹಾರ ಧಾನ್ಯ ಬಿಡುಗಡೆಗೊಳಿಸಲಾಗಿದೆ ಎಂದು ಜಿಲ್ಲಾ ಆಹಾರ ಮತ್ತು ನಾಗರಿಕ ಪೂರೈಕೆ ಇಲಾಖೆ ತಿಳಿಸಿದೆ. ಎಎವೈ, ಮತ್ತು ಬಿಪಿಎಲ್ ಪಡಿತರ ಚೀಟಿ ಹೊಂದಿರುವವರಿಗೆ 1 ಕೆ.ಜಿ. ಸಕ್ಕರೆ ನೀಡಲಾಗುವುದು ಎಂದು ತಿಳಿಸಿದ್ದಾರೆ. ಅನೌಪಚಾರಿಕ ಪಡಿತರ ಪ್ರದೇಶಗಳಾದ ರಾಯಚೂರು ಹಾಗೂ ಸಿಂಧನೂರು ಪ್ರದೇಶಗಳಿಗೆ ಎಎವೈ, ಬಿಪಿಎಲ್ 1 ಹಾಗೂ 2 ಯೂನಿಟ್‌ದಾರರಿಗೆ 3 ಲೀಟರ್ ಹಾಗೂ 3ಕ್ಕಿಂತ ಹೆಚ್ಚು ಯೂನಿಟ್‌ದಾರರಿಗೆ 5 ಲೀಟರ ಸೀಮೆಎಣ್ಣೆ ನೀಡಲಾಗುವುದು. ಮಾನವಿ, ಲಿಂಗಸ್ಗೂರು, ದೇವದುರ್ಗ ಪ್ರದೇಶಗಳಲ್ಲಿ 3 ಹಾಗೂ 5 ಲೀಟರ್ ಸೀಮೆಎಣ್ಣೆ ವಿತರಿಸಲಾಗುವುದು. ಜಿಲ್ಲೆಯಲ್ಲಿರುವ ಗ್ರಾಮಾಂತರ ಪ್ರದೇಶದ ಕಾರ್ಡುದಾರರಿಗೆ 3 ಲೀಟರ್ ಹಾಗೂ 5 ಲೀಟರ್ ಸೀಮೆಎಣ್ಣೆ ವಿತರಿಸಲಾಗುವುದು. ಎಲ್ಲ ಕಡೆಗೂ ಒಂದು ಲೀಟರ್‌ಗೆ 17.50 ದರ ಸೀಮೆಎಣ್ಣೆಗೆ ವಿಧಿಸಲಾಗುತ್ತದೆ. ಎಪಿಎಲ್ ನಾನ್ ಗ್ಯಾಸ್ ಪಡಿತರ ಚೀಟಿದಾರರಿಗೆ 3 ಲೀಟರ್ ಪ್ರಮಾಣ ನಿಗದಿಪಡಿಸಿದೆ. ಪಡಿತರ ಚೀಟಿದಾರರು ಸಂಬಂಧಿಸಿದ ನ್ಯಾಯಬೆಲೆ ಅಂಗಡಿಗಳಿಂದ ಪಡಿತರ ಪಡೆಯಬಹುದು.


Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement