ಕತ್ತಲಲ್ಲಿ 'ನಿರಂತರ ಜ್ಯೋತಿ'!
ಕ.ಪ್ರ. ವಾರ್ತೆ ಮುದಗಲ್ ಜ.19
ಮುದಗಲ್ ಕೇಂದ್ರ ಸ್ಥಾನಕ್ಕೆ ಹೊಂದಿಕೊಂಡಿರುವ ಗ್ರಾಮೀಣ ಪ್ರದೇಶಗಳಿಗೆ ಪೂರೈಸಲಾಗುತ್ತಿರುವ ನಿರಂತರ ವಿದ್ಯುತ್ ಸರಬರಾಜು ಮಾಡುವ ಪ್ರಕ್ರಿಯೆ ನೆನಗುದಿಗೆ ಬಿದ್ದಿದೆ.
ಕಳೆದ ಒಂದು ವರ್ಷದಿಂದ ನಡೆಸಲಾದ ಕಾಮಗಾರಿ ಕಾರಣಾಂತರದಿಂದ ಸ್ಥಗಿತಗೊಂಡಿದೆ. ವಿದ್ಯುತ್ ಕಂಬಗಳನ್ನು ಅಳವಡಿಸುವ ಕಾಮಗಾರಿ ಕೆಲವೆಡೆ ಪೂರ್ಣಗೊಂಡಿದ್ದು ಇನ್ನಿತರೆಡೆ ಅರ್ಧಕ್ಕೆ ನಿಂತಿವೆ. ಇದರಿಂದಾಗಿ ಲೈನ್ ನೀಡುವುದು ಕೂಡ ಅಪೂರ್ಣಗೊಂಡಿದೆ.
ಈಗ ವಿದ್ಯುತ್ ತಂತಿ ಮತ್ತು ಪರಿವರ್ತಕ ಅಳವಡಿಸುವ ಕೆಲಸ ಮಾಡಬೇಕಾಗಿದ್ದು, ಸಂಬಂಧಿಸಿದ ಗುತ್ತಿಗೆದಾರರು ಹಾಗೂ ಅಧಿಕಾರಿಗಳು ನಿರ್ಲಕ್ಷ್ಯ ವಹಿಸಿದ್ದಾರೆಂದು ಗ್ರಾಮಸ್ಥರು ಆರೋಪಿಸಿದ್ದಾರೆ. ಇಲಾಖೆ ಯೋಜನೆಗೆ ಬೇಕಾಗುವ ಅಗತ್ಯ ಉಪಕರಣಗಳನ್ನು ನೀಡಲಾಗಿದ್ದು, ಗುಂಡಸಾಗರ ಗ್ರಾಮದ ಹೊರವಲಯದ ತೋಟವೊಂದರಲ್ಲಿ ವಿದ್ಯುತ್ ಪರಿವರ್ತಕಗಳನ್ನು ಸಂಗ್ರಹ ಮಾಡಿದ್ದಾರೆ.
ಆದರೆ ಪರಿವರ್ತಕ ಅಳವಡಿಕೆ ವಿಚಾರದಲ್ಲಿ ಅಧಿಕಾರಿಗಳು ಹಿಂದೇಟು ಹಾಕುತ್ತಿದ್ದಾರೆ ಎಂದು ಹೇಳಲಾಗುತ್ತಿದೆ. ಬನ್ನಿಗೋಳ ಗ್ರಾಮದ ಹೊರವಲಯದ ತೋಟವೊಂದರಲ್ಲಿ ವಿದ್ಯುತ್ ಕಂಬಗಳನ್ನು ಸಂಗ್ರಹಿಸಿದ್ದು ಅಳವಡಿಕೆಗೆ ವಿಳಂಬವಾಗುತ್ತಿದೆ. ಈಗಾಗಲೇ ರೈತರು ತಮ್ಮ ಹೊಲಗಳಲ್ಲಿ ಬಿತ್ತನೆ ಮಾಡಿದ್ದು ವಿದ್ಯುತ್ ಕಂಬಗಳಿಗೆ ವೈರ್ ಜೋಡಣೆ ಹಾಗೂ ವಿದ್ಯುತ್ ಪರಿವರ್ತಕಗಳ ಅಳವಡಿಕೆ ಕಾಮಗಾರಿಗೆ ಹಿನ್ನಡೆಯಾಗುವುದು ಎಂದು ಹೇಳಲಾಗುತ್ತಿದೆ.
ಬೇಸಿಗೆ ಕಾಲದಲ್ಲಿ ಮುಗಿಯಬೇಕಿದ್ದ ಕಾಮಗಾರಿ ನಿಧಾನಗತಿಯಲ್ಲಿ ಸಾಗಿದ್ದರಿಂದ ನಿರಂತರ ಜ್ಯೋತಿ ಕಾಮಗಾರಿಗೆ ಹಿನ್ನಡೆಯಾಗುವುದು. ಕಾಮಗಾರಿ ನಿರ್ವಹಿಸುತ್ತಿರುವ ಗುತ್ತಿಗೆದಾರರು ಮಾಡಿದ ಅವಾಂತರದಿಂದ ಗ್ರಾಮೀಣ ಭಾಗಗಳಿಗೆ ಆಶಾಕಿರಣವಾಗಬೇಕಿದ್ದ ನಿರಂತರ ಜ್ಯೋತಿಗೆ ಬೆಳಕು ಇಲ್ಲದಂತಾಗಿದೆ. ಕೂಡಲೇ ಇಲಾಖಾಧಿಕಾರಿಗಳು ಸದರಿ ಕಾಮಗಾರಿ ಕುರಿತು ಪರಿಶೀಲಿಸಿ ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಗ್ರಾಮಸ್ಥರು ಒತ್ತಾಯಿಸಿದ್ದಾರೆ.
ವಿಶೇಷ ವರದಿ