ಅಂಬಿಗರ ಚೌಡಯ್ಯ ಜಯಂತಿ; ರೋಗಿಗಳಿಗೆ ಹಾಲು, ಹಣ್ಣು ವಿತರಣೆ
ಲಿಂಗಸ್ಗೂರು: ಅಂಬಿಗರ ಚೌಡಯ್ಯ ಜಯಂತಿ ಅಂಗವಾಗಿ ತಾಲೂಕು ಗಂಗಾಮತಸ್ಥ ಸಮಾಜದ ಮುಖಂಡರು ಸಾರ್ವಜನಿಕ ಆಸ್ಪತ್ರೆ ರೋಗಿಗಳಿಗೆ ಸೋಮವಾರ ಹಾಲು-ಹಣ್ಣು ವಿತರ್ನಿದರು. ಪ್ರತಿವರ್ಷದಂತೆ ಈ ವರ್ಷ ತಾಲೂಕು ಆಡಳಿತದಿಂದ ಜ.21ರಂದು ನಿಜಶರಣ ಅಂಬಿಗರ ಚೌಡಯ್ಯ ಜಯಂತಿ ಆಚರಿಸಲಾಗುತ್ತದೆ ಎಂದು ಸಮಾಜದ ಮುಖಂಡರು ತಿಳ್ನಿದರು. ಆಸ್ಪತ್ರೆ ವೈದ್ಯಾಧಿಕಾರಿಗಳಾದ ಡಾ. ರುದ್ರಗೌಡ, ಡಾ.ದಿಗಂಬರ ಹೇರೂರ, ಸಮಾಜದ ಮುಖಂಡರಾದ ಅಮರೇಶ ಪೂಜಾರಿ, ಅಮರೇಶ ಕಲ್ಲೂರ, ನಾಗಪ್ಪ ಪೂಲಭಾವಿ, ನಾಗರಾಜ ಕಬ್ಬೇರ, ಮೌನೇಶ ಕಬ್ಬೇರ, ಸಂಗಣ್ಣ ಕೋಲ್ಕಾರ, ರಮೇಶ ಚಾಪಲ್, ಆದಪ್ಪ ಸಾಲಿ ಸೇರಿದಂತೆ ಇನ್ನಿತರರು ಇದ್ದರು.