ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ರಾಯಚೂರು

ಅಲ್ಪಸಂಖ್ಯಾತರ ಪ್ರಗತಿ ಪರಿಶೀಲನೆ

Mainashree
Updated On : 21 Jan 2014, 10:13 am

ರಾಯಚೂರು: ಜಿಲ್ಲೆಯಲ್ಲಿನ ಅಲ್ಪಸಂಖ್ಯಾತರ ವರ್ಗಕ್ಕೆ ಸೇರಿದ ವಿವಿಧ ಜಾತಿ ಜನಾಂಗದವರಿಗೆ ವಿವಿಧ ಸವಲತ್ತು ದೊರಕ್ನಿಕೊಡುವ ನಿಟ್ಟಿನಲ್ಲಿ ಇತ್ತೀಚೆಗೆ ಜಿಲ್ಲಾಧಿಕಾರಿ ಅಧ್ಯಕ್ಷತೆಯಲ್ಲಿ ಸಭೆ ನಡೆಯಿತು. ನಗರದ ಜಿಲ್ಲಾಧಿಕಾರಿ ಕಚೇರಿಯಲ್ಲಿ ನಡೆದ ಸಭೆಯಲ್ಲಿ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಉಪ ನಿರ್ದೇಶಕ ಆರ್.ಟಿ. ವಡಗಣ್ಣನವರ ಮಾತನಾಡಿ, ಇಲಾಖೆಯಲ್ಲಿ 43200 ಫಲಾನುಭವಿಗಳಿಗೆ 4.01 ಕೋಟಿ ವೆಚ್ಚ ಮಾಡಿ ಅಲ್ಪಸಂಖ್ಯಾತರ ಆರೋಗ್ಯ ತಪಾಸಣೆ ಕಾರ್ಯ ಕೈಗೊಳ್ಳಲಾಗಿದೆ ಮಾಡಲಾಗಿದೆ ಎಂದು ತಿಳ್ನಿದರು.
ಶಿಕ್ಷಣ ಇಲಾಖೆಯಡಿ ಸರ್ವ ಶಿಕ್ಷಣ ಅಭಿಯಾನದಡಿ ಅಲ್ಪಸಂಖ್ಯಾತರು ವ್ನಾಸುವ ಸ್ಥಳಗಳಲ್ಲಿ ಪದವಿ ಪೂರ್ವ ಕಾಲೇಜುಗಳು ಅಗತ್ಯವಿದ್ದಲ್ಲಿ ನಿವೇಶನ ಗುರುತ್ನಿ ತಿಳಿಸಲು ಸಹ ಹಿಂದುಳಿದ ವರ್ಗಗಳ ಜಿಲ್ಲಾ ಅಧಿಕಾರಿ ಸಭೆಗೆ ಸೂಚ್ನಿದರು.
ಶಿಷ್ಯ ವೇತನದಲ್ಲಿ ಮೆಟ್ರಿಕ್ ಪೂರ್ವ ಮತ್ತು ನಂತರದ ಶಿಷ್ಯ ವೇತನಕ್ಕೆ 108 ಕೋಟಿ ಅವಶ್ಯವಿದ್ದು, ಅದಕ್ಕಾಗಿ 7 ಲಕ್ಷ ಅರ್ಜಿ ಬಂದಿವೆ ಎಂದು ವಿವರ್ನಿದರು.
ಲೀಡ್ ಬ್ಯಾಂಕ್ ವ್ಯವಸ್ಥಾಪಕರಿಗೆ ಪತ್ರ ಬರೆದು ಎಲ್ಲ ಮಕ್ಕಳಿಗೂ ಬ್ಯಾಂಕ್ ಖಾತೆಗಳನ್ನು ಆರಂಭಿಸಲು ಹಾಗೂ ಅದರಲ್ಲಿ ಶಿಷ್ಯ ವೇತನವನ್ನು ಜಮಾ ಮಾಡಲು ಸಭೆಯಲ್ಲಿ ತಿಳಿಸಲಾಯಿತು. ಅಬ್ದುಲ್ ಕಲಾಂ ಫೌಂಡೇಷನ್ ವತಿಯಿಂದ ಶಿಷ್ಯ ವೇತನ ಪದವಿ ಪೂರ್ವ ಕಾಲೇಜು ಹಂತದಲ್ಲಿ ನೀಡುವ ಯೋಜನೆ ಸಹ ಜಾರಿಯಲ್ಲಿದೆ ಎಂದು ಅಧಿಕಾರಿಗಳು ಸಭೆಗೆ ತಿಳ್ನಿದರು.
ಸಭೆಯಲ್ಲಿ ಉಪ ಕಾರ್ಯದರ್ಶಿ ಮುಕ್ಕಣ್ಣ ಕರಿಗಾರ, ಜಿಲ್ಲಾ ಅಪರ ಪೊಲೀಸ್ ವರಿಷ್ಠಾಧಿಕಾರಿ ಅಶೋಕ ಸದಲಗಿ, ಹಿಂದುಳಿದ ವರ್ಗಗಳ ಅಭಿವೃದ್ಧಿ ಅಧಿಕಾರಿ ಮಹಾದೇವಯ್ಯ ಸೇರಿ ಅನೇಕರಿದ್ದರು.


Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement