ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ರಾಯಚೂರು

ಉಗ್ರಾಣದಲ್ಲಿ ನೆರೆ ಜಿಲ್ಲೆ ಎಣ್ಣೆಕಾಳು

Mainashree
Updated On : 21 Jan 2014, 10:15 am

ಕ.ಪ್ರ. ವಾರ್ತೆ   ಲಿಂಗಸ್ಗೂರು   ಜ.20
ಸ್ಥಳೀಯ ಕರ್ನಾಟಕ ಎಣ್ಣೆಕಾಳು ಉಗ್ರಾಣದಲ್ಲಿ ನೆರೆ ಜಿಲ್ಲೆಯ ಎಣ್ಣೆಕಾಳು ಸಂಗ್ರಹ ಮಾಡುವುದನ್ನು ವಿರೋಧ್ನಿ ಕರ್ನಾಟಕ ರಾಜ್ಯ ರೈತ ಸಂಘದ ನೇತೃತ್ವದಲ್ಲಿ ರೈತರು ಸೋಮವಾರ ಮುತ್ತಿಗೆ ಹಾಕಿ ಪ್ರತಿಭಟನೆ ನಡ್ನೆದರು.
ಕೊಪ್ಪಳ ಜಿಲ್ಲೆಯ ಯಲಬುರ್ಗ, ಅಳವಂಡಿ, ರಾಜೂರು, ಮಂಡಲಗೇರಿ ಸೇರಿದಂತೆ ವಿವಿಧೆಡೆಗಳಿಂದ ರೈತರಿಂದ ಖರೀದ್ನಿದ್ದ ಎಣ್ಣೆಕಾಳು ಬೀಜಗಳನ್ನು ಪಟ್ಟಣದ ಎಣ್ಣೆಕಾಳು ಉಗ್ರಾಣದಲ್ಲಿ ಸಂಗ್ರಹ ಮಾಡಲು ಸುಮಾರು 10 ಲಾರಿಗಳ ಮೂಲಕ 500 ಕ್ವಿಂಟಾಲ್ ಶೇಂಗಾ ಹಾಗೂ 500 ಕ್ವಿಂ. ಸೂರ್ಯಕಾಂತಿ ಬೀಜ ತರಲಾಗಿತ್ತು. ಮಾಹಿತಿ ತಿಳಿದ ರೈತರು ಉಗ್ರಾಣ ಕೇಂದ್ರಕ್ಕೆ ಮುತ್ತಿಗೆ ಹಾಕಿ ಎಣ್ಣೆಕಾಳು ಬೀಜಗಳನ್ನು ಸಂಗ್ರಹ ಮಾಡದಂತೆ ತಡೆದು ಪ್ರತಿಭಟನೆ ನಡ್ನೆದರು.
ಹೈ.ಕ. ಭಾಗದ ಬೀದರ್, ಗುಲ್ಬರ್ಗ, ಯಾದಗಿರಿ ಜಿಲ್ಲೆಗಳಲ್ಲಿ ಈಗಾಗಲೇ ಸರ್ಕಾರ ಖರೀದಿ ಕೇಂದ್ರ ಆರಂಭ್ನಿದೆ. ಇತ್ತೀಚೆಗೆ ಕೊಪ್ಪಳ ಹಾಗೂ ಚಿತ್ರದುರ್ಗದಲ್ಲಿ ಖರೀದಿ ಕೇಂದ್ರ ಆರಂಭ್ನಿ ರೈತರಿಂದ ಖರೀದಿಸಲಾಗುತ್ತಿದೆ. ಕೃಷಿ ಉತ್ಪನ್ನ ಬೆಳೆಗಳು ವಿಶೇಷವಾಗಿ ತೊಗರಿ, ಕಡಲೆ, ಸೂರ್ಯಕಾಂತಿ, ಶೇಂಗಾ ಬೆಳೆಗಳು ಕಳೆದ ವರ್ಷಕ್ಕಿಂತ ಈ ವರ್ಷ ಅರ್ಧದಷ್ಟು ದರ ಕಡಿಮೆಯಾಗಿದೆ. ರಾಯಚೂರು ಜಿಲ್ಲೆಯಲ್ಲಿ ಖರೀದಿ ಕೇಂದ್ರ ಆರಂಭಿಸುವಂತೆ ಕಳೆದ ಕೆಲ ತಿಂಗಳಿಂದ ಜಿಲ್ಲಾ ಉಸ್ತುವಾರಿ ಸಚಿವರಿಗೆ, ಮುಖ್ಯಮಂತ್ರಿಗಳಿಗೆ ಹಾಗೂ ಸಂಬಂಧ್ನಿದ ಅಧಿಕಾರಿಗಳಿಗೆ ಹಲವು ಬಾರಿ ಮನವಿ ಮಾಡಿದರೂ ಖರೀದಿ ಕೇಂದ್ರ ಆರಂಭಿಸದೆ ನಿರ್ಲಕ್ಷ್ಯ ತೋರಿದ್ದಾರೆ.
ಗೋದಾಮು: ಆದರೆ ನೆರೆಯ ಕೊಪ್ಪಳ ಜಿಲ್ಲೆಯಲ್ಲಿ ನಾಫೆಡ್(ನ್ಯಾಷನಲ್ ಅಗ್ರಿಕಲ್ಚರಲ್ ಕೋ-ಆಪರೇಟಿವ್ ಮಾರ್ಕೇಟಿಂಗ್ ಫೆಡರೇಷನ್ ಆಫ್ ಇಂಡಿಯಾ ಲಿ.) ಹಾಗೂ ಕರ್ನಾಟಕ ರಾಜ್ಯ ಉಗ್ರಾಣ ನಿಗಮ, ಕರ್ನಾಟಕ ರಾಜ್ಯ ಸಹಕಾರ ಮಾರಾಟ ಮಂಡಳಿ ನಿಯಮಿತ, ಕರ್ನಾಟಕ ಆಹಾರ ಮತ್ತು ನಾಗರಿಕ ಸರಬರಾಜು ನಿಗಮ ನಿಯಮಿತ, ಕರ್ನಾಟಕ ಎಣ್ಣೆ ಉತ್ಪಾದಕರ ಸಹಕಾರ ಸಂಘ ನಿಯಮಿತ ಸೇರಿದಂತೆ ವಿವಿಧ ನಿಗಮಗಳು ರೈತರಿಂದ ಎಣ್ಣೆಬೀಜ ಖರೀದ್ನಿ ಅಲ್ಲಿನ ಗೋದಾಮುಗಳು ತುಂಬಿವೆ ಎಂದು ಸಬೂಬು ಹೇಳಿ ಲಿಂಗಸ್ಗೂರು ಗೋಧಾಮಿನಲ್ಲಿ ಸಂಗ್ರಹ್ನಿದರೆ, ಸ್ಥಳೀಯ ರೈತರಿಂದ ಖರೀದ್ನಿದ ಮಾಲನ್ನು ಸಂಗ್ರಹಿಸಲು ಜಾಗದ ಅಭಾವ ಎದುರಾಗಲಿದೆ. ಜಿಲ್ಲೆಯ ರೈತರ ಮಾಲನ್ನು ಖರೀದಿಸದೆ ಕಡೆಗಣ್ನಿ, ಹಿಂಬಾಗಿಲಿನಿಂದ ವ್ಯಾಪಾರಸ್ಥರ ಮಾಲು ಖರೀದಿಸುವ ಹುನ್ನಾರ ಸರ್ಕಾರ ನಡ್ನೆದೆ ಎಂದು ದೂರಿದರು. ಜಿಲ್ಲೆಯ ರೈತರು ಈಗಾಗಲೇ ತಾವು ಬೆಳೆದ ಅರ್ಧದಷ್ಟು ಆಹಾರ ಧಾನ್ಯ ವ್ಯಾಪಾರಸ್ಥರಿಗೆ ಮಾರಾಟ ಮಾಡಿದ್ದಾರೆ.
ಆವರ್ತ ನಿಧಿ ತೆಗೆದಿಟ್ಟಿರುವುದಾಗಿ ಹೇಳುವ ಸರ್ಕಾರ ಜಿಲ್ಲೆಯ ರೈತರನ್ನು ಸಂಕಷ್ಟಕ್ಕೀಡು ಮಾಡಿದೆ. ಕೂಡಲೇ ಸಂಬಂಧ್ನಿದ ಇಲಾಖೆ ಅಧಿಕಾರಿಗಳು, ಜಿಲ್ಲಾ ಉಸ್ತುವಾರಿ ಸಚಿವರು, ಶಾಸಕರು ಎಚ್ಚೆತ್ತುಕೊಂಡು ತಕ್ಷಣ ಜಿಲ್ಲೆಯ ಎಲ್ಲ ತಾಲೂಕುಗಳಲ್ಲಿ ಖರೀದಿ ಕೇಂದ್ರ ಆರಂಭಿಸಬೇಕೆಂದು ರೈತ ಸಂಘದ ರಾಜ್ಯ ಕಾರ್ಯದರ್ಶಿ ಅಮರಣ್ಣ ಗುಡಿಹಾಳ, ರೈತ ಮುಖಂಡರಾದ ಅಮರೇಶ ಬೆಣ್ಣೆ, ್ನದ್ದೇಶ ಮಾಸರಡ್ಡಿ, ಮಲ್ಲಿಕಾರ್ಜುನ ಹುಡೇದ, ಅಮರೇಗೌಡ ಗೋನವಾಟ್ಲ, ಹನುಮಪ್ಪ, ಸಂಗಪ್ಪ ಮತ್ತಿತರರು ಒತ್ತಾಯ್ನಿದರು.
ಸ್ಪಷ್ಟನೆ: ಕೊಪ್ಪಳ ಜಿಲ್ಲೆಯ ಅಳವಂಡಿ, ರಾಜೂರು, ಮಂಡಲಗೇರಿ ರೈತರಿಂದ ಖರೀದ್ನಿದ ಎಣ್ಣೆಕಾಳು ಬೀಜಗಳ ಸಂಗ್ರಹಣೆಗೆ ಉಗ್ರಾಣಗಳು ಖಾಲಿ ಇಲ್ಲದ ಕಾರಣ ನಾಫೆಡ್ ಆದೇಶದಂತೆ ಲಿಂಗಸ್ಗೂರು ಪಟ್ಟಣದ ಉಗ್ರಾಣದಲ್ಲಿ ಸಂಗ್ರಹಿಸಲು 10 ಲಾರಿಗಳಲ್ಲಿ 500 ಕ್ವಿಂ. ಶೇಂಗಾ ಹಾಗೂ 500 ಕ್ವಿಂ. ಸೂರ್ಯಕಾಂತಿ ಬೀಜ ತರಲಾಗಿದೆ ಎಂದು ಕೆಓಎಫ್ ಸಹಾಯಕ ವ್ಯವಸ್ಥಾಪಕ ಐ.್ನ. ಕುಲ್ಕರ್ಣಿ ಸ್ಪಷ್ಟಪಡ್ನಿದರು.
ನಾಫೆಡ್, ಕರ್ನಾಟಕ ರಾಜ್ಯ ಉಗ್ರಾಣ ನಿಗಮ, ಕರ್ನಾಟಕ ರಾಜ್ಯ ಸಹಕಾರ ಮಾರಾಟ ಮಂಡಳಿ ನಿಯಮಿತ, ಕರ್ನಾಟಕ ಆಹಾರ ಮತ್ತು ನಾಗರಿಕ ಸರಬರಾಜು ನಿಗಮ ನಿಯಮಿತ, ಕರ್ನಾಟಕ ಎಣ್ಣೆ ಉತ್ಪಾದಕರ ಸಹಕಾರ ಸಂಘ ನಿಯಮಿತ ಸೇರಿದಂತೆ ನಿಗಮಗಳು ರೈತರಿಂದ ಖರೀದ್ನಿದ ಕೃಷಿ ಉತ್ಪನ್ನಗಳನ್ನು ಸಂಗ್ರಹಿಸಲು ಗೋದಾಮು ಬಹುತೇಕ ಭರ್ತಿಯಾಗಿದ್ದು, ಸ್ಥಳಾವಕಾಶ ಕಲ್ಪಿಸುವಂತೆ ಜಿಲ್ಲಾಧಿಕಾರಿಗಳ ಹಾಗೂ ಉಗ್ರಾಣ ನಿಗಮದ ವ್ಯವಸ್ಥಾಪಕ ನಿರ್ದೇಶಕರ ಆದೇಶದಂತೆ ಕೊಪ್ಪಳ ಜಿಲ್ಲೆಯ ಕೃಷಿ ಉತ್ಪನ್ನಗಳ ಸಂಗ್ರಹಕ್ಕೆ ಅನುಕೂಲ ಕಲ್ಪಿಸಲಾಗಿದೆ. ಪಟ್ಟಣದ ಉಗ್ರಾಣದಲ್ಲಿ 2500 ಟನ್ ಕೃಷಿ ಉತ್ಪನ್ನಗಳ ಸಂಗ್ರಹಕ್ಕೆ ಅವಕಾಶವಿದ್ದು, ಈಗಾಗಲೇ ಸುಮಾರು 1300ಟನ್ ಉತ್ಪನ್ನಗಳನ್ನು ಸಂಗ್ರಹಿಸಲಾಗಿದೆ. ಇನ್ನು ಸಾವಿರ ಟನ್ ಸಂಗ್ರಹಿಸಲು ಸ್ಥಳಾವಕಾಶವಿದೆ ಎಂದು ಸ್ಥಳೀಯ ಉಗ್ರಾಣ ಕೇಂದ್ರ ವ್ಯವಸ್ಥಾಪಕ ಕೆ. ದಶರಥ ಸ್ಪಷ್ಟಪಡ್ನಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement