ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ರಾಯಚೂರು

ಮೂಲ ಸೌಲಭ್ಯಕ್ಕೆ ಆಗ್ರಹ್ನಿ ಧರಣಿ

Mainashree
Updated On : 21 Jan 2014, 10:11 am

ಕ.ಪ್ರ. ವಾರ್ತೆ   ರಾಯಚೂರು   ಜ.20
ಶುದ್ಧ ನೀರು, ಸ್ವಚ್ಛ ಪರಿಸರ, ಆರೋಗ್ಯಕರ ವಾತಾವರಣ, ಸುಸಜ್ಜಿತ ರಸ್ತೆಗಳು ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹ್ನಿ ನಗರದಲ್ಲಿ ಸೋಮವಾರ ರಾಯಚೂರು ಸ್ವಚ್ಛಗೊಳ್ನಿ ಹೋರಾಟ ಸಮಿತಿ ಕಾರ್ಯಕರ್ತರು ಪ್ರತಿಭಟನಾ ಧರಣಿ ನಡ್ನೆದರು.
ನಗರದ ಸೂಪರ್ ಮಾರ್ಕೆಟ್ ವೃತ್ತದಿಂದ ನಗರಸಭೆಯವರೆಗೆ ಪ್ರತಿಭಟನಾ ಮೆರವಣಿಗೆ ನಡ್ನೆದ ಹೋರಾಟಗಾರರು ನಗರಸಭೆ ಎದುರು ಧರಣಿ ನಡ್ನೆ ನಗರಸಭೆ ಅಧ್ಯಕ್ಷರಿಗೆ ಮನವಿ ಸಲ್ಲ್ನಿ, ಹದಗೆಟ್ಟ ರಸ್ತೆಗಳು, ಕಲುಷಿತ ನೀರು, ತುಂಬಿ ಹರಿವ ಚರಂಡಿಗಳು, ವಿಲೇವಾರಿಯಾಗದ ಕಸ, ಎಲ್ಲೆಂದರಲ್ಲಿ ಧೂಳುಮಯ ಪರಿಸರದಂಥ ಸಮಸ್ಯೆಗಳು ನಗರದ 3 ಲಕ್ಷ ಜನಸಂಖ್ಯೆಯನ್ನು ದಿನವೂ ಕಾಡುತ್ತಿದೆ ಎಂದು ದೂರಿದರು.
ಹಾಳಾದ ರಸ್ತೆಗಳು: ನಗರದ ಬಹುತೇಕ ರಸ್ತೆಗಳಲ್ಲಿ ತಗ್ಗುಗಳಿವೆ. ತಗ್ಗುಗಳು ರಸ್ತೆ ಸಂಚಾರವನ್ನು ಅವ್ಯವಸ್ಥೆಗೆ ನೂಕಿವೆ ಹಾಗೂ ಅಪಘಾತಕ್ಕೂ ಕಾರಣವಾಗಿವೆ. ನಗರದ ಚಂದ್ರಮೌಳೇಶ್ವರ ವೃತ್ತದಿಂದ ಪೂರ್ಣಿಮಾ ಚಿತ್ರಮಂದಿರದವರೆಗಿನ ರಸ್ತೆ ಕಾಮಗಾರಿ ಆರಂಭಗೊಂಡಿದೆ. ಆದರೆ ಆಮೆ ವೇಗದಲ್ಲಿದೆ. ಅದರಿಂದಾಗಿ ಈ ಮಾರ್ಗದಲ್ಲಿ ಸಂಚಾರ ಸಮಸ್ಯಾತ್ಮಕವಾಗಿದೆ ಎಂದು ಆರೋಪ್ನಿದರು.
ಬಸವೇಶ್ವರ ವೃತ್ತದ ಬಳಿಯಲ್ಲಿ ನಿರ್ಮಿಸಲಾಗುತ್ತಿರುವ ರೇಲ್ವೆ ಮೇಲ್ಸೇತುವೆ ಕಾಮಗಾರಿಯೂ ನಿಧಾನಗತಿಯಲ್ಲಿದ್ದು, ಅದರಿಂದಾಗಿ ಈ ಮಾರ್ಗದಲ್ಲಿ ಸಂಚಾರ ಸ್ಥಗಿತಗೊಂಡಿದೆ. ಕಾಮಗಾರಿ ಚುರುಕುಗೊಳಿಸಬೇಕು. ರೇಲ್ವೆ ಮೇಲ್ಸೇತುವೆ ಕಾಮಗಾರಿ ವಿಳಂಬವಾಗುತ್ತಿರುವುದರಿಂದ ನಗರದ ನಿಜಲಿಂಗಪ್ಪ ಕಾಲೋನಿ ಮೂಲಕವೇ ಎಲ್ಲ ವಾಹನಗಳು ಸಂಚರಿಸುತ್ತಿದ್ದು ಕಾಲೋನಿಯಲ್ಲಿನ ರಸ್ತೆಗಳು ಹಾಳಾಗಿವೆ ಎಂದು ಆರೋಪ್ನಿದರು.
ಸಂಚಾರಕ್ಕೆ ತೊಂದರೆ: ನಗರದ ಚರಂಡಿ ವ್ಯವಸ್ಥೆಯು ತೀರಾ ಶೋಚನೀಯವಾಗಿದ್ದು, ಅಲ್ಪ ಮಳೆಯಾದರೂ ಚರಂಡಿಗಳು ತುಂಬಿ ರಸ್ತೆಗೆ ಕೊಳಚೆ ನೀರು ಹರಿದು ಸಂಚಾರಕ್ಕೆ ಅಡಚಣೆಯಾಗುತ್ತದೆ. ಹಾಗೆಯೇ ಭಾರೀ ಮಳೆಯಾದರೆ ರಾಜಾ ಕಾಲುವೆಗಳು ಉಕ್ಕಿ ಹರಿದು ಕಾಲುವೆಯ ಎರಡೂ ಬದಿಯ ನಿವ್ನಾಗಳ ಮನೆಗೆ ನೀರು ನುಗ್ಗಿ ಆತಂಕ ತರುತ್ತದೆ ಎಂದು ದೂರಿದರು.
ಒಳಚರಂಡಿ ಕಾಮಗಾರಿ ಅರ್ಧಮರ್ಧ ಕೈಗೊಳ್ಳಲಾಗಿದ್ದು ಅದು ಪ್ರಯೋಜನಕ್ಕೆ ಬಾರದಂತಾಗಿದೆ. ಒಳಚರಂಡಿ ಕೊಳವೆ ಅಳವಡಿಕೆಗೆ ರಸ್ತೆಗಳನ್ನು ಹಾಳುಗೆಡವಿದ್ದು, ದುರ್ನ್ತ ಮಾತ್ರ ನಡೆದಿಲ್ಲ. ನಗರದಲ್ಲಿ ಸಾರ್ವಜನಿಕ ಶೌಚಾಲಯಗಳ ಕೊರತೆ ಸಾಕಷ್ಟಿದ್ದು, ನಿರ್ಮಾಣಕ್ಕೆ ನಗರಸಭೆ ಮುಂದಾಗಿಲ್ಲ ಎಂದು ಟೀಕ್ನಿದರು.
ಆತಂಕದಲ್ಲಿ ನಾಗರಿಕರು: ನಗರದಲ್ಲಿ ಹೈಟೆಕ್ ತರಕಾರಿ ಮಾರುಕಟ್ಟೆ ನಿರ್ಮಿಸಲು ಹಣ ಸರ್ಕಾರದಿಂದ ಬಿಡುಗಡೆಯಾಗಿದ್ದರೂ ಆಡಳಿತ ಮಾತ್ರ ನಿರ್ಮಾಣಕ್ಕೆ ಗಮನಹರಿಸುತ್ತಿಲ್ಲ. ವಿವಿಧ ಕಾಲೋನಿಗಳಲ್ಲಿ ಬೀದಿ ದೀಪಗಳು ಬೆಳಗುವುದಿಲ್ಲ. ಪರಿಣಾಮ ಕಳ್ಳರ ಹಾವಳಿ ಹೆಚ್ಚಿದೆ. ನಾಗರಿಕರು ಆತಂಕದಲ್ಲಿಯೇ ರಾತ್ರಿ ಕಳೆಯುವಂತಾಗಿದೆ ಎಂದು ದೂರಿದರು.
ಶುದ್ಧ ಕುಡಿಯುವ ನೀರು ಒದಗಿಸಬೇಕು. ಹದಗೆಟ್ಟ ರಸ್ತೆಗಳ ಸಂಪೂರ್ಣ ದುರ್ನ್ತಯಾಗಬೇಕು. ಜಾರಿಯಲ್ಲಿರುವ ಅಭಿವೃದ್ಧಿ ಕಾಮಗಾರಿಗಳಿಗೆ ಚುರುಕು ಮುಟ್ಟ್ನಿ ತೀವ್ರಗೊಳಿಸಬೇಕು. ಕುಡಿಯುವ ನೀರಿನ ಅಭಾವ ತಪ್ಪಿಸಲು ಗಣೇಕಲ್‌ನಿಂದ ರಾಂಪುರ ಕೆರೆಗೆ ಕೂಡಲೇ ನೀರು ಭರ್ತಿ ಮಾಡ್ನಿಕೊಳ್ಳಬೇಕು ಎಂದು ಆಗ್ರಹ್ನಿದರು.
ನಗರದ ನೀರಿನ ಸಮಸ್ಯೆ ನಿವಾರಣೆಗೆ ಕೃಷ್ಣಾ ನದಿಗೆ ಅಡ್ಡಲಾಗಿ ಬ್ಯಾರೇಜ್ ನಿರ್ಮಾಣಕ್ಕೆ ಮುಂದಾಗಬೇಕು. ಒಳಚರಂಡಿ ಕಾಮಗಾರಿ ಪುನಾರಂಭಿಸಬೇಕು. ತ್ಯಾಜ್ಯ ವಿಲೇವಾರಿ ಸಮಸ್ಯೆ ನಿವಾರಣೆಗೆ ಕೂಡಲೇ ಕ್ರಮ ಕೈಗೊಳ್ಳಬೇಕೆಂಬುದು ಸೇರಿದಂತೆ 20 ಬೇಡಿಕೆಗಳ ಈಡೇರಿಕೆಗೆ ಆಗ್ರಹ್ನಿದರು. ಪ್ರಮುಖರಾದ ಅಪರ್ಣಾ ಬಿ.ಆರ್. ಮಹಾವೀರ್, ಡಾ. ಚಂದ್ರಗಿರೀಶ್, ಸಂಗನಗೌಡ ಅ್ನ್ಕಹಾಳ, ಚೇತನಾ ಬನಾರೆ, ವಿರುಪನಗೌಡ, ಚನ್ನನಗೌಡ ಸೇರಿದಂತೆ ಅನೇಕರಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement