ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ರಾಯಚೂರು

ಗಣೇಕಲ್‌ನಿಂದ ರಾಂಪುರಕ್ಕೆ ನೀರು; ನಿಷೇಧಾಜ್ಞೆ ಜಾರಿ

Mainashree
Updated On : 22 Jan 2014, 11:16 am

ರಾಯಚೂರು: ನಗರಕ್ಕೆ ಕುಡಿಯುವ ನೀರು ಸರಬರಾಜಿಗಾಗಿ ಗಣೇಕಲ್ ಜಲಾಶಯದಿಂದ ರಾಂಪುರ ಕೆರೆಗೆ ನೀರು ತುಂಬಿಕೊಳ್ಳುವ ಕಾರ್ಯ ಆರಂಭಗೊಂಡಿದ್ದು, ಈ ಹಿನ್ನೆಲೆಯಲ್ಲಿ ರೈತರು ನೀರು ಬಳಕೆ ಮಾಡುವುದನ್ನು ತಡೆಯಲು ಎಡದಂಡೆ ಕಾಲುವೆಯ ಮೇಲೆ ನಿಷೇಧಾಜ್ಞೆ ಜಾರಿಗೊಳಿಸಲಾಗಿದೆ.
ಈ ಕುರಿತು ಜಿಲ್ಲಾಧಿಕಾರಿ ಎಸ್.ಎನ್. ನಾಗರಾಜು ಆದೇಶ ಹೊರಡಿಸಿದ್ದು, ಎಡದಂಡೆ ಕಾಲುವೆಯ 95ರಿಂದ 100ನೇ ವಿತರಣೆ ಕಾಲುವೆಯವರೆಗೆ ಅಳವಡಿಸಿದ ತೂಬು ಮುಚ್ಚಿ ರಾಂಪುರ ಕೆರೆಗೆ ನೀರು ಹರಿಸುವಂತೆ ಮಾಡುವ ನಿಟ್ಟಿನಲ್ಲಿ ಜ.20ರಿಂದ ಜ.31ರವರೆಗೆ ನಿಷೇಧಾಜ್ಞೆ ಜಾರಿಗೆ ತರಲಾಗಿದೆ ಎಂದು ತಿಳಿಸಿದ್ದಾರೆ.
ಈ ಅವಧಿಯಲ್ಲಿ ಕುಡಿಯುವ ನೀರು ಪೋಲಾಗದಂತೆ ತಡೆಯಲು ನಿಷೇಧಾಜ್ಞೆ ಜಾರಿಗೊಳಿಸಿದ್ದು, ಕಾಲುವೆಗಳ 100 ಮೀಟರ್ ವ್ಯಾಪ್ತಿಯಲ್ಲಿ ಆದೇಶ ಜಾರಿಯಲ್ಲಿರುತ್ತದೆ. ವಿತರಣಾ ಕಾಲುವೆಗಳ ಎಲ್ಲಾ ತೂಬುಗಳ ಸ್ಥಳಗಳಲ್ಲಿ ಪೊಲೀಸ್ ಕಾವಲು ಹಾಕಲು ಎಸ್ಪಿ ಅವರಿಗೆ ಹಾಗೂ ನೀರು ತುಂಬಿಕೊಳ್ಳುವ ಕಾರ್ಯಕ್ಕೆ ಅಗತ್ಯ ಸಿಬ್ಬಂದಿಯನ್ನು ನಿಯೋಜಿಸುವಂತೆ ಪೌರಾಯುಕ್ತರಿಗೂ ಅವರು ಆದೇಶಿಸಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement