ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ರಾಯಚೂರು

ರಾಂಪುರ ಕೆರೆ: ನೀರು ಭರ್ತಿ ಆರಂಭ

Mainashree
Updated On : 23 Jan 2014, 11:52 am

ರಾಯಚೂರು: ನಗರದ ಕುಡಿಯುವ ನೀರಿನ ಬವಣೆ ನೀಗಿಸುವ ಕಾರ್ಯಕ್ಕೆ ಕೊನೆಗೂ ನಗರಸಭೆ ಮುಂದಾಗಿದ್ದು, ಗಣೇಕಲ್ ಜಲಾಶಯದಿಂದ ರಾಂಪುರ ಕೆರೆ ಭರ್ತಿ ಮಾಡಿಕೊಳ್ಳುವ ಕಾರ್ಯಕ್ಕೆ ಚಾಲನೆ ದೊರೆತಿದೆ.
ಕಳೆದ ಕೆಲ ದಿನಗಳಿಂದ ರಾಂಪುರ ಕೆರೆಯಲ್ಲಿ ನೀರು ತಳಕಚ್ಚಿದ್ದರಿಂದ ನಗರದ ಕೆಲ ವಾರ್ಡುಗಳ ಜನತೆ ಕುಡಿಯುವ ನೀರಿಗೆ ಪರದಾಡುವಂತಾಗಿತ್ತು. ನಗರಸಭೆಯು ಈಚೆಗೆ ನಗರದ ಎಂಟಕ್ಕೂ ಹೆಚ್ಚಿನ ವಾರ್ಡುಗಳಿಗೆ ದಿನ ಬಿಟ್ಟು ದಿನ ನೀರು ಪೂರೈಕೆ ಜಾರಿಗೆ ತಂದಿತ್ತು.
ಅದೇ ವೇಳೆ ಎಡದಂಡೆ ಕಾಲುವೆಯ ಮೇಲೆ ನಿಷೇಧಾಜ್ಞೆ ಜಾರಿಗೊಳಿಸುವ ಮೂಲಕ ಪೊಲೀಸ್ ಸುಪರ್ದಿಯಲ್ಲಿ ಗಣೇಕಲ್ ಜಲಾಶಯದಿಂದ ರಾಂಪುರ ಕೆರೆಗೆ ಎಡದಂಡೆ ಕಾಲುವೆಯ ಮೂಲಕ ನೀರು ಹರಿಸಿಕೊಳ್ಳಲು ಜಿಲ್ಲಾಡಳಿತ ಮುಂದಾಗಿತ್ತು. ಅದರ ಪರಿಣಾಮ ರಾಂಪುರ ಕೆರೆಯ ಬಳಿ ಎಡದಂಡೆ ಕಾಲುವೆಯಲ್ಲಿ ನೀರು ಬಂದು ಸೇರಿದೆ.
ಮುಂದಿನ ಒಂದು ವಾರ ಕೆರೆಯಲ್ಲಿ ನೀರು ತುಂಬಿಕೊಳ್ಳುವ ನಿಟ್ಟಿನಲ್ಲಿ ನಗರಸಭೆಯು ಅಗತ್ಯ ಕ್ರಮ ಕೈಗೊಂಡಿದೆ. ಆದರೆ ರಾಂಪುರ ಕೆರೆಗೆ ನೀರು ತುಂಬಿಸುವ ನಿಟ್ಟಿನಲ್ಲಿ ವಿದ್ಯುತ್ ಕಡಿತ ಸಮಸ್ಯೆ ತಂದೊಡ್ಡಿದೆ. ಬುಧವಾರ ಬೆಳಗ್ಗೆ ಸುಮಾರು ನಾಲ್ಕು ಗಂಟೆಗಳ ಕಾಲ ಪಂಪ್‌ಹೌಸ್‌ಗಳಲ್ಲಿ ವಿದ್ಯುತ್ ಕೈಕೊಟ್ಟಿದ್ದರಿಂದ ಎಡದಂಡೆ ಕಾಲುವೆಯಿಂದ ನೀರೆತ್ತಿ ಕೆರೆಗೆ ತುಂಬಿಕೊಳ್ಳುವ ಕಾರ್ಯಕ್ಕೆ ಅಡಚಣೆಯಾಯಿತು. ಅದರಿಂದಾಗಿ ಕಾಲುವೆಯಲ್ಲಿ ಭಾರೀ ಪ್ರಮಾಣದಲ್ಲಿ ನೀರು ಸಂಗ್ರಹಗೊಂಡು ಸಿಬ್ಬಂದಿ ಆತಂಕಕ್ಕೆ ಸಿಲುಕಿದ್ದರೆಂದು ಮೂಲಗಳು ತಿಳಿಸಿವೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement