ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ರಾಯಚೂರು

ಸಮರ್ಪಕ ನೀರಿಗೆ ಆಗ್ರಹ

Mainashree
Updated On : 24 Jan 2014, 11:47 am

ಸಿಂಧನೂರು: ತಾಲೂಕಿನ 36ನೇ ವಿತರಣಾ ಕಾಲುವೆಯ 36/6 ವ್ಯಾಪ್ತಿಗೆ ಒಳಪಟ್ಟ ಜಮೀನುಗಳಿಗೆ ನೀರು ಹರಿಯದೇ 1800ಕ್ಕೂ ಹೆಚ್ಚು ಎಕರೆ ಪ್ರದೇಶದಲ್ಲಿ ರೈತರು ಖರ್ಚು ಮಾಡಿ ಬೆಳೆದ ಬತ್ತದ ಬೆಳೆ ಒಣಗುತ್ತಿದ್ದು, ಸಮರ್ಪಕ ನೀರು ಹರಿಸಲು ಒತ್ತಾಯಿಸಿ ಗುರುವಾರ ಬಿಜೆಪಿ ಜಿಲ್ಲಾ ಉಪಾಧ್ಯಕ್ಷ ಎನ್.ಶಿವನಗೌಡ ಗೊರೇಬಾಳ ನೇತೃತ್ವದಲ್ಲಿ ರೈತರು ಧರಣಿ ನಡೆಸಿದರು.
ವಾರದಲ್ಲಿ ಐದು ದಿನ ನಾಲೆಗೆ ನೀರು ಹರಿಸಬೇಕೆನ್ನುವ ನಿಯಮವಿದ್ದರೂ, ಒಂದು ದಿನವೂ ನೀರು ಸರಿಯಾಗಿ ಬರುವುದಿಲ್ಲ. ಇದರಿಂದಾಗಿ ಬೂದಿವಾಳ 800, ಕನ್ನಾರಿ 600 ಹಾಗೂ ಮಲದಿನ್ನಿಕ್ಯಾಂಪ್‌ನ 400 ಎಕರೆ ಪ್ರದೇಶದಲ್ಲಿ ಬತ್ತ ಬೆಳೆದು ಪರಿತಪಿಸುವಂತಾಗಿದೆ ಎಂದು ಟಿಬಿಪಿ ಮುನಿರಾಬಾದ್ ಮುಖ್ಯ ಕಾರ್ಯನಿರ್ವಾಹಕ ಅಭಿಯಂತರ ಹಾಗೂ ಸಿಂಧನೂರಿನ ನಂ.3 ನೀರಾವರಿ ಇಲಾಖೆ ಉಪವಿಭಾಗದ ಸಹಾಯಕ ಕಾರ್ಯನಿರ್ವಾಹಕ ಅಭಿಯಂತರರಿಗೆ ಮನವಿಪತ್ರ ಸಲ್ಲಿಸಿ ಗಮನ ಸೆಳೆದರು. ಈಗ ನೀರಿಲ್ಲದೆ ಅಡಕತ್ತರಿಯಲ್ಲಿ ಸಿಕ್ಕಿಹಾಕಿ ಕೊಂಡಂತಾಗಿದೆ. ಒಂದು ವೇಳೆ ನೀರು ಹರಿಸದೇ ಹೋದರೆ ರೈತರು ಆರ್ಥಿಕ ಸಂಕಷ್ಟಕ್ಕೀಡಾಗಲಿದ್ದಾರೆ ಎಂದು ಬೂದಿಹಾಳನ ಚಂದ್ರಗೌಡ ಸಾಹುಕಾರ, ಆದನಗೌಡ ಹೊಸಕಲ್, ಶೀನಪ್ಪ ಕನ್ನಾರಿ ಅಧಿಕಾರಿಗಳಿಗೆ ವಿವರಿಸಿದರು. 24 ಗಂಟೆಯೊಳಗಾಗಿ ರೈತರ ಮನವಿಗೆ ಸ್ಪಂದನೆ ನೀಡದಿದ್ದಲ್ಲಿ ಹೋರಾಟ ನಡೆಸುವುದಾಗಿ ಎನ್.ಶಿವನಗೌಡ ಗೊರೇಬಾಳ ಎಚ್ಚರಿಸಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement