ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ರಾಯಚೂರು

ಸಮುದಾಯ ಭವನಕ್ಕೆ 2.50 ಲಕ್ಷ: ಶಾಸಕ

Mainashree
Updated On : 24 Jan 2014, 11:35 am

ಚಿಂಚೋಳಿ: ಇಂದಿನ ಪ್ರಜಾಪ್ರಭುತ್ವ ಆಡಳಿತ ವ್ಯವಸ್ಥೆಯಲ್ಲಿ ಸಾಮಾಜಿಕ, ಆರ್ಥಿಕ, ಶೈಕ್ಷಣಿಕವಾಗಿ ಮುಂದೆ ಬರಬೇಕಾದರೆ ಹಿಂದುಳಿದ ವರ್ಗದಲ್ಲಿ ಒಗ್ಗಟ್ಟು ಅತೀ ಮುಖ್ಯ. ಇದರಿಂದ ಅಭಿವೃದ್ಧಿ ಹೊಂಛದಲು ಸಾಧ್ಯವಿದೆ ಎಂದು ಶಾಸಕ ಡಾ. ಉಮೇಶ ಜಾಧವ್ ಅಭಿಪ್ರಾಯಪಟ್ಟರು.
ತಾಲೂಕಿನ ಚಿಕ್ಕನಿಂಗದಳ್ಳಿ ಗ್ರಾಮದಲ್ಲಿ ನಿಜಶರಣ ಅಂಬಿಗರ ಚೌಡಯ್ಯ ನವಯುವಕ ಸಂಘ ಏರ್ಪಡಿಸಿದ್ದ ಅಂಬಿಗರ ಚೌಡಯ್ಯನವರ ಜಯಂತ್ಯುತ್ಸವ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಗ್ರಾಮದಲ್ಲಿ ಸಮುದಾಯ ಭವನ ನಿರ್ಮಾಣಕ್ಕಾಗಿ ಶಾಸಕರ ನಿಧಿಯಿಂದ 2.50 ಲಕ್ಷ ಮಂಜೂರುಗೊಳಿಸುವುದಾಗಿ ಭರವಸೆ ನೀಡಿದರು.
ಜಯಪ್ಪ ಚಾಪೆಲ್, ನಾಗಪ್ಪ ಐನೋಳಿ, ಲಕ್ಷ್ಮಣ ಆವಂಟಿ ಮಾತನಾಡಿದರು. ಸಮಾರಂಭದಲ್ಲಿ ಜಗದೀಶಸಿಂಗ್ ಠಾಕೂರ್, ಅಶೋಕ ಇದಲಾಯಿ, ದೇವೇಂದ್ರಪ್ಪ ಇದಲಾಯಿ, ನಾಗಪ್ಪಾ ದೊಂತಲ್ ಸೇರಿದಂತೆ ಮುಂತಾದವರು ಇದ್ದರು. ಲಕ್ಷ್ಮಣ ಆವಂಟಿ ಸ್ವಾಗತಿಸಿದರು. ಪ್ರಭು ದಂತಪಳ್ಳಿ ನಿರೂಪಿಸಿದರು. ಅಶೋಕ ಇದಲಾಯಿ ವಂದಿಸಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement