ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ರಾಯಚೂರು

ಅಭಿವೃದ್ಧಿಪರ ವ್ಯಕ್ತಿಗೆ ಮತ ಹಾಕಿ: ನ್ಯಾ. ದ್ಯಾವಪ್ಪ

Mainashree
Updated On : 26 Jan 2014, 12:35 pm

ಲಿಂಗಸ್ಗೂರು: ಪ್ರಜಾಪ್ರಭುತ್ವ ವ್ಯವಸ್ಥೆಯ ಅದರಲ್ಲೂ ಶಾಸಕಾಂಗದಲ್ಲಿ ಮತದಾರರ ಪಾತ್ರ ಪ್ರಮುಖವಾಗಿದ್ದು, ಚುನಾವಣೆ ಸಂದರ್ಭದಲ್ಲಿ ಯಾವುದೇ ಆಮಿಷಗಳಿಗೆ ಒಳಗಾಗದೆ ಅಭಿವೃದ್ಧಿಪರ ಚಿಂತನೆಯುಳ್ಳ ವ್ಯಕ್ತಿಗೆ ಪ್ರಜೆಗಳು ತಮ್ಮ ಅಮೂಲ್ಯ ಮತ ಹಾಕಬೇಕೆಂದು ಲಿಂಗಸ್ಗೂರು ಜೆಎಂಎಫ್‌ಸಿ ಹಿರಿಯ ಶ್ರೇಣಿ ನ್ಯಾಯಾಧೀಶ ದ್ಯಾವಪ್ಪ ಹೇಳಿದರು.
ಪಟ್ಟಣದ ಗುರುಭವನದಲ್ಲಿ ಭಾರತ ಚುನಾವಣಾ ಆಯೋಗ ಹಾಗೂ ತಾಲೂಕು ಆಡಳಿತದಿಂದ ಶನಿವಾರ ಆಯೋಜಿಸಿದ್ದ ರಾಷ್ಟ್ರೀಯ ಮತದಾರರ ದಿನಾಚರಣೆ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿ, ಸಂವಿಧಾನಾತ್ಮಕವಾಗಿ ಸರ್ಕಾರದ ಯೋಜನೆಗಳನ್ನು ಸದುಪಯೋಗ ಪಡೆದುಕೊಳ್ಳುವಂತೆ ಪ್ರತಿಯೊಬ್ಬರೂ ಮತದಾನದ ಹಕ್ಕು ಹೊಂದಬೇಕು. ಮತದಾನ ಮಾರಾಟದ ವಸ್ತುವಲ್ಲ. ದೇಶದ ಕಾನೂನು ಪರಿಪಾಲನೆ ಮಾಡುವ ಹಾಗೂ ಸರ್ಕಾರದ ಸೌಲತ್ತು ಒದಗಿಸುವ ಪ್ರತಿನಿಧಿಗಳನ್ನು ಸ್ವತಂತ್ರವಾಗಿ ಆಯ್ಕೆ ಮಾಡುವ ಪ್ರಧಾನ ಹಕ್ಕೆಂದು ಭಾವಿಸಬೇಕು.
  ಕಾರ್ಯಕ್ರಮದಲ್ಲಿ ಸಹಾಯಕ ಆಯುಕ್ತ ಟಿ. ಯೋಗೇಶ್, ತಹಸೀಲ್ದಾರ್ ಮಹಾಜನ್, ಉಪ ತಹಸೀಲ್ದಾರ್ ಖಾಜಾಹುಸೇನ, ಬಿಇಒ ಶಾಂತಗೌಡ ಪಾಟೀಲ್, ಸಿಡಿಪಿಒ ಪ್ರಭಾಕರ ಕವಿತಾಳ, ಉಪನ್ಯಾಸಕ ಜಿ.ವಿ. ಕೆಂಚನಗುಡ್ಡ ಸೇರಿದಂತೆ ಇದ್ದರು. ಈ ಸಂದರ್ಭದಲ್ಲಿ ನ್ಯಾಯಾಧೀಶ ದ್ಯಾವಪ್ಪ ಚುನಾವಣಾ ಪ್ರತಿಜ್ಞಾವಿಧಿ ಬೋಧಿಸಿದರು. ನಂತರ ಜನರಿಗೆ ಹೊಸ ಗುರುತಿನ ಚೀಟಿ ವಿತರಿಸಲಾಯಿತು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement