ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ರಾಯಚೂರು

ನಿರ್ಮಾಣ ಹಂತದಲ್ಲೇ ಮಿನಿ ವಿಧಾನಸೌಧ ಕಟ್ಟಡ ಬಿರುಕು!

Vishwanath S
Updated On : 27 Jan 2014, 12:47 pm

ಸಿಂಧನೂರು: ತಾಲೂಕಿನ ಬಹುದಿನದ ಕನಸಾಗಿದ್ದ ಮಿನಿ ವಿಧಾನಸೌಧ ನಿರ್ಮಾಣ ಕಾಮಗಾರಿ ಸ್ಥಳೀಯ ತಹಸೀಲ್ದಾರ್ ಕಚೇರಿ ಆವರಣದಲ್ಲಿ ನಡೆಯುತ್ತಿದ್ದು, ನಿರ್ಮಾಣದ ಹಂತದಲ್ಲಿಯೇ ಬಿರುಕು ಬಿಟ್ಟಿರುವುದನ್ನು ದಲಿತ ಕ್ಷಣಾ ವೇದಿಕೆ ಮುಖಂಡರು ಪತ್ತೆ ಹಚ್ಚಿ ಕಾಮಗಾರಿಗೆ ತಡೆ ನೀಡಿದ್ದಾರೆ.
ಕಳೆದೆರಡು ವರ್ಷಗಳ ಹಿಂದೆ ಆಗಿನ ಶಾಸಕ ವೆಂಕಟರಾವ್ ನಾಡಗೌಡರು ಕ್ಷೇತ್ರದ ಜನರ ಅಹವಾಲನ್ನು ಪರಿಗಣಿಸಿ 1.50 ಕೋಟಿ ಮಂಜೂರು ಮಾಡಿಸಿ ಕೆಲಸ ಪ್ರಾರಂಭ ಮಾಡಲು ಮುತುವರ್ಜಿ ವಹಿಸಿದ್ದರು. ಕರ್ನಾಟಕ ಗೃಹ ನಿರ್ಮಾಣ ಮಂಡಳಿ ಕಾಮಗಾರಿಯ ಉಸ್ತುವಾರಿ ಹೊತ್ತಿದೆ. ಗುತ್ತಿಗೆ ಪಡೆದವರು ಅತ್ಯಂತ ಕಳಪೆಯಾಗಿ ಕಟ್ಟಡ ಕಟ್ಟುತ್ತಿದ್ದರೂ ಯಾವುದೇ ಕ್ರಮ ಕೈಗೊಳ್ಳದೆ ಮೌನ ಸಮ್ಮತಿ ಸೂಚಿಸಿದ್ದಾರೆಂದು ದಲಿತ ರಕ್ಷಣಾ ವೇದಿಕೆಯ ಗುಲ್ಬರ್ಗ ವಿಭಾಗೀಯ ಅಧ್ಯಕ್ಷ ಹನುಮಂತ ಕೆ.ಹಂಚಿನಾಳಕ್ಯಾಂಪ್, ಮುಖಂಡರಾದ ರಾಘವೇಂದ್ರ ಸೋಮಲಾಪುರ, ಸಂಗಮೇಶ, ಶಿವಪ್ಪ ಮೇಸ್ತ್ರಿ ಆಪಾದಿಸಿದ್ದಾರೆ. ನಿರ್ಮಾಣಗೊಳ್ಳುತ್ತಿರುವ ಮಿನಿವಿಧಾನಸೌಧ  ಉತ್ತರ ದಿಕ್ಕಿನ ಗೋಡೆಯುದ್ದಕ್ಕೂ ಬಿರುಕು ಬಿಟ್ಟಿದೆ. ಇದಕ್ಕೆ ತೇಪೆ ಹಚ್ಚುತ್ತಿರುವಾಗ  ತಡೆದಿರುವುದಾಗಿ  ತಿಳಿಸಿದ್ದಾರೆ.
ಕ್ರಮಕ್ಕೆ ಒತ್ತಾಯ: ತಕ್ಷಣ ಗೃಹ ನಿರ್ಮಾಣ ಮಂಡಳಿಯ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ನಿರ್ಮಾಣವಾಗುತ್ತಿರುವ ಕಟ್ಟಡದ ಆವಸ್ಥೆಯನ್ನು ಸಮಗ್ರವಾಗಿ ಪರಿಶೀಲಿಸಿ ಗುತ್ತಿಗೆದಾರರ ಮೇಲೆ ಕ್ರಮ ಕೈಗೊಳ್ಳಬೇಕೆಂದು ಹನುಮಂತ ಹಂಚಿನಾಳಕ್ಯಾಂಪ್ ಒತ್ತಾಯಿಸಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement