ಸರ್ಕಾರ ಕ್ರಮ ಕೈಗೊಳ್ಳದಿದ್ದರೆ ಚಿತ್ರರಂಗಕ್ಕೆ ಹಾನಿ
ಲಿಂಗಸ್ಗೂರು: ಪರಭಾಷೆ ಚಿತ್ರಗಳನ್ನು ಕನ್ನಡಕ್ಕೆ ಡಬ್ಬಿಂಗ್ ಮಾಡುವುದನ್ನು ವಿರೋಧಿಸಿ ಕನ್ನಡ ಸೇನೆ ಕರ್ನಾಟಕ ಸಂಘಟನೆ ಕಾರ್ಯಕರ್ತರು ಸೋಮವಾರ ಪ್ರತಿಭಟನೆ ನಡೆಸಿ ತಹಸೀಲ್ದಾರ್ ಕಚೇರಿ ಶಿರಸ್ತೇದಾರರಿಗೆ ಮನವಿ ಸಲ್ಲಿಸಿದರು.
ಪರಭಾಷೆ ಚಿತ್ರಗಳನ್ನು ಕನ್ನಡಕ್ಕೆ ಡಬ್ಬಿಂಗ್ ಮಾಡಲು ಹೊರಟ ಕೆಲ ನಿರ್ಮಾಪಕರ ವಿರುದ್ಧ ಸರ್ಕಾರ ಸೂಕ್ತ ಕ್ರಮ ಕೈಗೊಳ್ಳದಿದ್ದರೆ ಕನ್ನಡ ಚಲನಚಿತ್ರ ಕಲಾವಿದರಿಗೆ ಅನ್ಯಾಯವಾಗಲಿದೆ. ಕನ್ನಡ ನಾಡು, ನುಡಿಗೆ ಧಕ್ಕೆ ತರುವ ಕೆಲ ನಿರ್ಮಾಪಕರ ನಿರ್ಧಾರ ಖಂಡನೀಯ.
ಕನ್ನಡಿಗರು ಕನ್ನಡ ಚಲನಚಿತ್ರ ವೀಕ್ಷಿಸಿ ಪ್ರೋತ್ಸಾಹಿಸಿ ಬೆಳೆಸಿದ್ದು, ಮುಖ್ಯ ವಾಹಿನಿಗೆ ಬಂದಿರುವ ಚಿತ್ರ ಮಂದಿರದ ಮಾಲೀಕರು ಬೆಂಬಲ ನೀಡದಿರುವುದು ವಿಷಾಧನೀಯ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಈ ಸಂದರ್ಭದಲ್ಲಿ ಕನ್ನಡ ಸೇನೆ ಸಂಘಟನೆ ಮುಖಂಡರಾದ ವೀರಭದ್ರಪ್ಪನಾಯಕ ಗೌಡೂರು, ಹನುಮಂತರಾಯ ನೆಲೋಗಿ, ಅಮರೇಶ ಮಸ್ಕಿ, ಚಲನಚಿತ್ರ ನಿರ್ಮಾಪಕ ಬಸವರಾಜ, ಗದ್ದೆಪ್ಪ, ಸುರೇಶ, ಗೋಪಿ, ಶರಣಗೌಡ, ಹನುಮೇಶ, ಬಿ.ಎಸ್. ನಾಯಕ, ರಾಮಣ್ಣ ಗೌಡೂರು, ಹುಲಗಪ್ಪಗೌಡ, ಭಾಷಾಸಾಬ, ಪ್ರಾಣೇಶ, ಮಹೇಶ, ರಾಹುಲ್, ನಾಗರಾಜ, ರಮೇಶ ಸೇರಿದಂತೆ ಇದ್ದರು.