ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ರಾಯಚೂರು

ಕಳಪೆ ಬೀಜ: ಎರಡು ಮಳಿಗೆಗೆ ಬೀಗ

Vishwanath S
Updated On : 29 Jan 2014, 11:19 am

ಸಿಂಧನೂರು: ನಗರದಲ್ಲಿ ಸಂಧ್ಯಾ ಏಜೆನ್ಸೀಸ್ ಹಾಗೂ ಸಂಧ್ಯಾ ಎಂಟರ್‌ಪ್ರೈಸಸ್ ಬೀಜ ಮಾರಾಟ ಕೇಂದ್ರಗಳು ಕಳಪೆ ಗುಣಮಟ್ಟದ ಬೀಜವನ್ನು ರೈತರಿಗೆ ಮಾರಾಟ ಮಾಡಿರುವುದರಿಂದ ಬೆಳೆಗಳು ಸಂಪೂರ್ಣ ನಾಶವಾಗಿವೆ ಎಂದು ಆಕ್ರೋಶಗೊಂಡ ರೈತರು, ಮಂಗಳವಾರ ಈ ಎರಡೂ ಮಳಿಗೆಗಳಿಗೆ ಬೀಗ ಜಡಿದರು.
ಸಾವಿರಾರು ಎಕರೆ ಜಮೀನಿನಲ್ಲಿ ಜೋಳ ಬೆಳೆಯಲು ವಿಜೆಎಚ್-234 ತಳಿಯ ಬಿತ್ತನೆ ಬೀಜದ ಪಾಕೆಟ್ ಖರೀದಿಸಿದ್ದು, ಈ ತಳಿಯ ಬೀಜದ ಜೊತೆಗೆ ಬೇರೆ ತಳಿಯ ಬೀಜಗಳನ್ನು ಕಲಬೆರಕೆ ಮಾಡಿದ್ದಾರೆ. ನಗರದ ಸಂಧ್ಯಾ ಏಜೆನ್ಸೀಸ್ ಹಾಗೂ ಸಂಧ್ಯಾ ಎಂಟರ್‌ಪ್ರೈಸಸ್ ಸೇರಿದಂತೆ ಇನ್ನಿತರ ಬೀಜ ಮಾರಾಟ ಕೇಂದ್ರಗಳು ಮಾರಾಟ ಮಾಡಿದ್ದರಿಂದ ಇದುವರೆಗಾದರೂ ಜೋಳದ ಬೆಳೆ ತೆನೆ ಕಟ್ಟಿಲ್ಲ. ಬೆಳೆ ಸಂಪೂರ್ಣ ಹಾಳಾಗಿದೆ. ಪ್ರತಿ ಎಕರೆಗೆ 30 ಸಾವಿರ ವ್ಯಯ ಮಾಡಿದ್ದು, ತೀವ್ರ ನಷ್ಟವಾಗಿದೆ ಎಂದು ರೈತ ಮುಖಂಡರಾದ ಮಲ್ಲಯ್ಯ ಮಾಡಗಿರಿ, ಸೋಮಣ್ಣ ಪತ್ತಾರ, ವೆಂಕಪ್ಪ ಬಡಗಿ, ಆರೋಪಿಸಿದರು.
ಅಧಿಕಾರಿಗಳ ವೈಜ್ಞಾನಿಕ ವರದಿಯೂ ಸಿದ್ಧ: ಕೆಲ ದಿನಗಳ ಹಿಂದೆಯಷ್ಟೇ ರೈತರು ಬೆಳೆದ ಜೋಳದ ಬೆಳೆಯು ಸರಿಯಾಗಿ ಕಾಳು ಕಟ್ಟದೇ ವಿಫಲವಾಗಿರುವುದಾಗಿ ಸ್ಥಳೀಯ ಸಹಾಯಕ ಕೃಷಿ ನಿರ್ದೇಶಕರ ಗಮನಕ್ಕೆ ತಂದಿದ್ದು, ಅವರು ಕೃವಿವಿ ವಿಜ್ಞಾನಿಗಳ ತಂಡವನ್ನು ಗ್ರಾಮಕ್ಕೆ ಪರಿವೀಕ್ಷಣೆಗಾಗಿ ಕಳುಹಿಸಿದ್ದರಿಂದ ಬೆಳೆಯ ಬಗ್ಗೆ ವೈಜ್ಞಾನಿಕ ವರದಿಯೂ ಬಂದಿದ್ದು, ಆದ್ದರಿಂದ ಶೀಘ್ರವೇ ಇದರ ಬಗ್ಗೆ ಪರಿಶೀಲನೆ ಮಾಡಿ ಸರ್ಕಾರದ ವತಿಯಿಂದ ಹಾಗೂ ಅಂಗಡಿಯಿಂದ ಸೂಕ್ತ ಪರಿಹಾರ ಧನವನ್ನು ಮಂಜೂರಿ ಮಾಡಲು ಒತ್ತಾಯಿಸಿದರು.  ಈ ವೇಳೆ ರೈತರಾದ ಏಳುಕುರಿ ಮಲ್ಲಯ್ಯ, ಅಮರಪ್ಪ ದಢೇಸ್ಗೂರು, ಲಕಪತಿ ರಾಠೋಡ್, ಕೆ.ಸಣ್ಣೆಪ್ಪ, ಭಂಗಿ ಚಂದ್ರಪ್ಪ, ಭಂಗಿ ರಾಮಣ್ಣ, ಕರಿಯಪ್ಪ ನಂದ್ಲಿ, ಹಂಚಿನಾಳ ಶಂಕರಪ್ಪ, ಯಮನಪ್ಪ ಉದ್ಬಾಳ, ರಮೇಶ ಉದ್ಬಾಳ, ಶರಣಪ್ಪ ಕಾರಟಗಿ, ರಾರಾಯಪ್ಪ ಕಲ್ಮನಿ, ಹುಚ್ಚಲಿಂಗಪ್ಪ ಕಾರಟಗಿ, ಬಂಗಿ ಸೋಮಣ್ಣ, ಬೆಳಗನೂರು ತಿಮ್ಮಣ್ಣ ಮತ್ತಿತರರಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement